#ಲಘುನಗು -3
ಜಸ್ವಂತನ ವಸ್ವಂತ
------------------------
ಕೆಲಸದ ನಡುವೆ ನಗೆ ಮೂಡಿಸಿರ್ತು ಕೆಲ ಮಾತುಗಳು... ಘಟನೆಗಳು.. ಪ್ರಸಂಗಗಳು.
ನಮ್ಮ ಆಪೀಸಲ್ಲಿ ಯಂಗೆ ಒಬ್ಬ ಅಸಿಸ್ಟಂಟ್ ಇದ್ದ... ಹೆಸರು ಜಸ್ವಂತ. ಮಹಾನ್ ವಾಕ್ಚತುರ.. ಚಾರ್ವಾಕ. 'ತಗ ಇದೊಂದು ಕೋರಿಯರ್ ಮಾಡು' ಅಂದ್ರೆ... "ಸರಿ ಸರ್.. ಎಡ್ರೆಸ್ ಬರ್ಕೊಡಿ" ಅಂಬ. (ಎಡ್ರೆಸ್ ಬುಕ್ ಲ್ಲಿ ಎಡ್ರೆಸ್ ಬರ್ಕಂಡಿರ್ತು... ಅದ್ನ ಬರೆಯಲೆ ಆಳಸಿ ಅಂವಾ !!) 😳
'ನಿನ್ನ ಖರ್ಚಿನ ಲೆಕ್ಕ ಕೊಡು' ಅಂದಿ ಒಂದಿನ
"ಸರೀ ಸರ್ ಬರ್ಕಳಿ" ಅಂದ.. (ನಾನೇ ಬರಿಯದಾದ್ರೆ ನೀ ಎಂತಕಿದ್ದೆ ?! ನಾ ಎಂತ ನಿನ್ನ ಕಾರಕೂನನ ?) 😳
ಆ ದಿನ "ನಾಳೆ ಬೆಳಗ್ಗೆ ಬೆಳಗ್ಗೆ ಬೇಗ ಒಂದು ಸೈಟ್ ವಿಸಿಟ್ಟಿಗೆ ಹೋಗವು ಬೆಳಗ್ಗೆ 8 ಗಂಟಿಗೇ ಬಾ" ಅಂದಿ... "ಸರ್ ಹೋಗ್ತಾ ಹೋಗ್ತಾ ನನ್ನೂ ಪಿಕ್‌ಅಪ್ ಮಾಡ್ಕಬುಡಿ" ಅಂದ. (ಎಲಾ ಇವನ! ನಾ ಇವನ ಡ್ರೈವರು!!😳)
ಎಷ್ಟೋ ಸಲ ಯಂಗೆ ಅನಿಸಿದ್ದಿದ್ದು... ಅಲಾ ಅಂವ ಯನ್ನ ನೌಕರನ.. ಯಾನೇ ಅವನ ಆಳ ಹೇಳಿ ! 😳😬😇
"ಅಲಾ ಇದೆಲ್ಲ ನಾ ಮಾಡದಾದ್ರೆ ನೀ ಎಂತಕಾ ತಮ?" ಅಂದಿ.
"ಸರ್ ಒಬ್ರಕ್ಕಿಂತ ಇಬ್ರಿದ್ರೆ ಒಳ್ಳೇದಲಾ ಸರ್" ಅಂದಾ 😬😅
ಒಂದಿನ ತಡದು 11 ಗಂಟೆಗೆ ಆಪೀಸಿಗೆ ಬಂದ... "ಏನೋ ಲೇಟು?" ಅಂದಿ.
"ಸರ್ ರಾತ್ರಿ ನಿದ್ದೆ ಸಮ ಆಗಿರ್ಲಿಲ್ಲ.. ಅದ್ಕೆ ಬೆಳಗ್ಗೆ ಮಲ್ಕೊಂಡೆ"
"ಆಫೀಸಿಗೆ ಹೋಗ್ಬೇಕು ಅಂತ ನೆನಪಿಲ್ವ?"
"ನೋಡಿ ಸರ್ .. ನಿದ್ದೆ ಪೂರಾ ಆಗ್ದೋದ್ರೆ ಕೆಲಸ ಯಾವದೂ ಸರಿ ಆಗೂದಿಲ್ಲ ಅಲ್ವ ಸರ್?" (ಅಲಾ ಇಂವ ಯಾವಾಗ ಕೆಲಸ ಸಮ ಮಾಡಿದ್ದ ಹೇಳದು ಬ್ಯಾಡದ!! ನಿದ್ದೆ ಸಮ ಆದ್ರೂ ಇಂವ ಮಾಡದೆಲ್ಲ ಹಾಳ್ಗೆಡಕೇಯಾ.. ಎಂತಾ ಅವನ ಬಾಯಿಗೆ ಬೀಳದು ಹೇಳಿ ಸುಮ್ನಾದಿ😬)
ಅದೊಂದಿವ್ಸ ಒಬ್ಬ ಟೆಕ್ನಿಶಿಯನ್ನು ಮತ್ತೆ ಇಂವ ಇಬ್ರೂ ಕೂತ್ಗ ಎಂತದೋ ಕೆಲಸ ಮಾಡ್ತಾ ಮಾತುಕಥೆ ಇವರದ್ದು...
ಟೆಕ್ಕಿ - "ಅರೇ ಯಾರ್.. ನಮ್ಮನೆ ಟಿವಿ ವಂದು ಬದಲಿಸ್ಬೇಕು ಮಾರಾಯ"
ಇಂವ - "ಏನು, ಎಂತಾ ಆಯ್ತು! ಹಳೇ ಟಿವಿಲಿ ಎಂತಾ ಪ್ರೊಬ್ಲೆಮ್?"
ಟೆಕ್ಕಿ - "ಟೀವಿಲಿ ಪ್ರೊಬ್ಲೆಮ್ ಇಲ್ಲ ಮಾರಾಯ. ಹೆಣ್ತಿನೇ ಸಮಸ್ಯೆ.. ಬೆನ್ ಬಿದ್ಬುಟದೆ.. ತಲೆ ತಿಂತದೆ.. LED ಟಿವಿ ತರಬೇಕಂತೆ"
ಇಂವ - "ಯೇ.. ಹಂಗಾರೆ ಟಿವಿ ಅಲ್ಲ.. ಹೆಣ್ತಿ ಬದಲ್ಸುವ ಅವಶ್ಯಕತೆ ಅದೆ.... ಯಾವ್ದರಲ್ಲಿ ಪ್ರೋಬ್ಲೆಮ್ ಉಂಟೋ ಅದನ್ನ ಚೇಂಜ್ ಮಾಡ್ಬೇಕಾ ಮಾರಾಯಾ" 😅😝
ಕ್ಯಾಬಿನ್ನಲ್ಲಿ ಕುಂತು ಇದನ್ನೆಲ್ಲ ಕೇಳಸ್ಗತಿದ್ದ ನನ್ನತ್ರನೂ ನಗೆ ತಡೆಯಲಾಜಿಲ್ಲೆ. 😅😅😅
✍️ - ಶ್ಯಾಂ ಭಟ್, ಭಡ್ತಿ.
26 ಮೇ 2022, ಹವಿಹಾಸ್ಯ - ಲಘುನಗು
No comments:
Post a Comment