**ಅದೊಂದು ಯುಗಾದಿ **
"ತಮಾ..... 9 ಗಂಟ್ಯಾತು... ಕಾಲಾವಧಿ ಹಬ್ಬಾಗಿ ಈ ಮಾಣಿ ಇನ್ನೂ ಬಿದ್ವರಗ್ತೆ ಇದ್ದಾ ನೋಡಿ....." ಹೇಳ ಅಶರೀರವಾಣಿಗೆ ಕಣ್ಬಿಟ್ಟಿ. ಯಂಗೊತಿದ್ದು ಯನ್ನ ಆಯಿ ಯೋಳೂಕಾಲಕ್ಕೇ ಒಂಬತ್ ಗಂಟ್ಯಾತು ಹೇಳ್ತೂ ಹೇಳಿ.. ಇವತ್ತೆಂತಕೆ ಕೂಗ್ತಿದ್ದಪಾ.. ಯುಗಾದಿ ರಜೆ ಮೇಲಿಂದವಾ ಹೇಳಿ ಯೋಳ ಮನಸಿಲ್ದೋರೂ ಮೈಮುರ್ದು ಎದ್ದಿ... ಏಳಕಾತಲೀ. ಇಲ್ದೋರೆ ಯನ್ನಬ್ಬೆ ಅಬ್ಬೆಯಾಗಿರ್ತಿಲ್ಲೆ. 'ನವದುರ್ಗೆಯರೂ ಆಹ್ವಾಹನೆ ಅಪ್ಪ ಮುಂಚೇನೇ ಎದ್ಬುಡು ತಮಾ' ಹೇಳಿ ಯಂದೇ ಅಂತರಾಳ ಕೂಗ್ತು. 😀
ಎದ್ದು ಮಿಂದು ದೇವ್ರ ಪೂಜೆ ಮಾಡ್ತಿರಕಾರೇ "ತಮಾ ಚೌಡಿ ಪೂಜೆ ಮಾಡ್ಕ ಬಾ" ಅಶರೀರವಾಣಿ ಮತ್ತೆ. ಅದ್ರ ಶರೀರ ಬತ್ತಿತ್ತಿಲ್ಲೆ ಯನ್ನತ್ರ... ಬರೀ ಆವಾಜ್ ಮಾತ್ರ ಬತ್ತಿತ್ತು ಅದ್ಕಾಗೇ ಅಶರೀರವಾಣಿ ಹೇಳ್ತಿ.
ತ್ವಾಟದ ತುದಿಗೆ ಚೌಡಿಮನೆ.. ನಾನು ಚೌಡಿ ಮನೆಗೆ ಹೋದಷ್ಟೊತ್ತಿಗೇ ಸುಬ್ರಾಯ ಭಟ್ರ ಮನೆ ತಿಮ್ಮಣ್ಣ ಪೂಜೆಗೆ ಬಂದಿದ್ದ ಪೂಜೆ ಮಾಡ್ತಿದಿದ್ದ.
"ಹಾ.. ಹಾಂಗೇ ನನ್ನ ಕಾಯೂ ವಡೆದು ಕೊಟ್ಬುಡೊ, ಪುರೋಹಿತ ನೀನು" ಅಂದಿ. ಅಂವ ಪೂಜೆ ಮಾಡ್ತಿರಕಾರೇ ಕೇಳ್ದಿ... "ಭಟ್ರು ಹೆಂಗಿದ್ರಡೋ?"
ಸುಬ್ರಾಯ ಭಟ್ರನ್ನ ವಾರದ ಹಿಂದೆ ಮಣಿಪಾಲಕ್ಕೆ ಕರ್ಕ ಹೋಗಿದಿದ್ದ.. ಸಿರಿಯಸ್ಸು..
"ನಿನ್ನೆ ಆಪರೇಷನ್ ಆತಡಾ, ಇನ್ನೊಂದು ವಾರ ಬಕ್ಕು" ಅಂದ ತಿಮ್ಮಣ್ಣ ಕಾಯಿ ವಡೆತವ... ಒಂದು ಕಡಿ ಕಮಚಡಿಗಾಗಿ ಬೀಳಸ್ಬುಟಾ ಮಾಣಿ.
"ಒಹ.. ನಾ ಒಡೆಲನಾ?" ಅಂದೆ. ಕಡಿ ಕಮಚಿ ಬಿದ್ದ ಮೇಲೆ ಕೇಳ ಪ್ರಶ್ನೆ ಅಲ್ಲ ಅದೂ.. ಆದರೂ ಪರಾವರ್ತಿತ ಪ್ರತಿಕ್ರಿಯೆಯಾಗಿ ಯನ್ ಬಾಯಿಂದ ಬಂತಕು. 🙆
ಅಷ್ಟಾದ ಮೇಲೆ ಊಟ ಮಾಡಿ ಕವಳ ಹಾಕ್ತೇ ಇದಿದ್ದಿ... ಎಂಬುಲೆನ್ಸ್ ಶಬ್ದ ಕೇಳ್ತು... ನಂಗ ಎಲ್ಲಾ ಮಕಮಕ ನೋಡ್ಕಂಡ್ಯ... ಸೀದಾ ಮನಸಲ್ಲಿ ಬಂದದ್ದೇ "ಸುಬ್ರಾಯ ಭಟ್ರು?!"
ಬಡಬಡ ಎದ್ದು ರಸ್ತೆಗೆ ಹೋದ್ರೆ ಹೌದು.. ಸುಬ್ರಾಯ ಭಟ್ರೇಯ.. !! ಓಂ ಶಾಂತಿ 🙏
ನಾ ಮದಲೆಲ್ಲ ನಂಬತಿದ್ನಿಲ್ಲೆ... ಅಜ್ಜಿಯ, ಆಯಿಯ ಈ ನಮ್ನಿ ನಂಬ್ಕೆ ಎಲ್ಲವಾ. ಇದೆಲ್ಲ ಮೂಢನಂಬಿಕೆಗಳೇ ಹೌದ? ಅಥವ ಈ ನಮ್ಮ ಹೆರಿತಲೆಗಳು ಅವರ ಅನುಭವದಿಂದ ಇದನ್ನೆಲ್ಲಾ ಹೇಳ್ತಿದ್ವ? ಒಂದೂ ಅರ್ಥಾಗ್ತಿಲ್ಯಪ !!
🙏🙏
- ಶ್ಯಾಂ ಭಟ್, ಭಡ್ತಿ
21-03-2022
#ಹವಿಹಾಸ್ಯ -
ಲಘುನಗು
No comments:
Post a Comment