#ತಿರ್ಗಾಡೂಲೋದಾಗ_ನಗ್ಯಾಡೂಯೋಗ
(ಈಗ ನಗೆ ಬತ್ತು.. ಆವಾಗ ಹಾರ್ಟ್ ಬಾಯಿಗೆ ಬಂದಿತ್ತು)
ಮುಂಬೈ ಪುಲೀಸ್ - ದೇಶದಲ್ಲೇ ಅತೀ ಖತರ್ನಾಕ್ ಪೋಲೀಸ್ ಹೇಳಿ ಖ್ಯಾತಿ.
2002-03 ಆಗಿರವು .. ಮಾಯಾನಗರಿಯ ಲೋಕಲ್ ಗಳಲ್ಲಿ ಬಾಂಬ್ ಬ್ಲಾಸ್ಟ್ ಆದ ಟೈಮಪ ಅದು. ಆ ದಿನ ಓನ್‌ಡ್ಯೂಟೀ ನಾಗಪುರಕ್ಕೆ ಹೊರಟಿದಿದ್ದಿ. ಸಂಜೆ 7:50 ರ ಟ್ರೇನ್ ಹಿಡಿಯವು ಹೇಳಿ CST ಲಿ ಇಳದು ನನ್ನ ಟ್ರೇನಿನ ಫ್ಲ್ಯಾಟ್ ಫಾರ್ಮಿನ ಕಡೆ ದೌಡ್ ಓಡತಾ ಇದಿದ್ದಿ....
ಅಷ್ಟರಲ್ಲಿ ಯನ್ನ ತಡೆದ ಒಬ್ಬ ಮಪುಸೇ ಹವಾಲ್ದಾರ.
"ಎಟಾಚಿ ಮಧೆ ಕಾಯ್ ಬಗಾ " ಹೇಳೆಂತೋ ಮರಾಠಿಲಿ ಹೇಳ್ದ..
"ಹಾಂ?" ಅಂದಿ
"ಎಟಾಚಿ ಮೇ ಕ್ಯಾ ಹೇ?" ಅಂದ ಹಿಂದಿಲಿ.. ಆಗ ಅರ್ಥಾತು.
ಹೀಂಗೇ ಕುಶಾಲಿನ ಲೆಕ್ಕಕೆ "ಬಾಂಬ್ ತೊ ನಹಿ ಹೇ ಭಾಯ್ ಸಾಬ್" ಹೇಳಿ ಹಲ್ಕಿಸದಿ... ಅದೇ ನಾ ಮಾಡಿದ ದೊಡ್ಡ ತಪ್ಪು ಹೇಳಿ ಮುಂದಿನ ಮೂರು ತಾಸಿನ ಮೇಲೆ ಅರ್ಥಾತು.
"ಖೋಲೋ ಖೋಲೋ" ಅಂದ.
ಸರಿ ಅಮಾಯಕನಂಗೆ ತೆಗದು ತೋರಸ್ಬುಟಿ .. ಅದರಲ್ಲಿದಿದ್ದು... ನಮ್ಮ ಡೆಂಟಲ್ ಮಶೀನಿನ ಕೆಲವು ಸರ್ಕೀಟ್ ಬೋರ್ಡ್ ಗಳು, ರಿಮೋಟು ಮತ್ತೆ ಟೂಲ್ಸು. ಯಂಗೆಂತಾ ಗೊತಿತ್ತು ಈ ಪುಣ್ಯಾತ್ಮ ಅದನ್ನ ಬಾಂಬ್ ತಯಾರಿಕೆಯ ಸಾಧನ ಹೇಳಿ ತಿಳ್ಕಂಗು ಹೇಳಿ!! 😳😳
ಮದಾಲು ಗಚ್ಚಾಗಿ ಯನ್ನ ರಟ್ಟೆ ಹಿಡದವನೇ, ನನ್ನ ಎಟಾಚಿ ದೂರ ಇಡು ಅಂದ.
"ಪೀಂ ಪೀಂ ಪೀಂ" ಹೇಳಿ ಶಿಟೀ ಹೊಡದೇಬುಟ.. ಪೋಲೀಸನ ರಟ್ಟೆ ಶಕ್ತಿ ಮುಂದೆ ಯಂದೆಂತಾ.?! ಅಲ್ಲಾ ತಪ್ಪಸ್ಗಳವು ಹೇಳ ಯೋಚ್ನೆ ಏನೂ ಬಂಜಿಲ್ಲೆ ಯಂಗೆ.
ತಕ್ಷಣ ಅಲ್ಲಿ ಒಂದು ಇಡೀ ಬಟಾಲಿಯನ್ನೇ ಒಟ್ಟಾಗ್ಬುಟ. ಅಷ್ಟೆಲ್ಲಾ ಜನ, ಅವರ ಕೈಯಲ್ಲೆಲ್ಲಾ ಹೆದರ್ಕಂಬಂತಾ ಖತರ್ನಾಕ್ ಬಂದೂಕುಗಳು, ಮಶೀನ್ ಗನ್ನುಗಳು. ಆ ಕ್ಷಣದಲ್ಲಿ ಎಂತೆಂತೋ ಕ್ರಿಮಿನಲ್ ಸಿನೆಮಾ ಸೀನ್ ಗಳು ನೆನಪಾಗೋತು.. ವಟ್ಟೂ ಯನ್ನ ಬಾಂಬ್ ಬ್ಲಾಸ್ಟ್ ಕೇಸಲ್ಲಿ ಫಿಟ್ ಮಾಡಬುಡ್ತ ಇವು.. ಅಪ್ಪ ಅಬ್ಬೆಗೆ ಹೆಂಗೆ ಮುಖ ತೋರ್ಸದು? ಯನ್ನ ವುಡ್‍ಬೀ ಗೇ ಹೆಂಗೆ ಸಮಜಾಯ್ಸದು !! ಹೇಳೆಲ್ಲವಾ
ಪರಿಪರಿಯಾಗಿ ಬೇಡಕಂಡಿ. ನಾನು ಓನ್ ಡ್ಯೂಟಿ ಹೋಗ್ತಾ ಇಪ್ಪಂವ.. ಇದ್ನೋಡಿ ಯನ್ನ ಐ ಕಾರ್ಡೂ.. ಆದ್ರೂ ಕೇಳದ್ದೇ ನನ್ನ ಅಲ್ಲೇ ಸೂಟಕೇಸ್ ಜೊತೆಲೇ ಕೂರಸಬುಟ... ಸುತ್ತಲೂ ಬಟಾಲಿಯನ್ನು. ಪೋನ್ ಮಾಡನ ನೋಡ್ದಿ.. ಯನ್ನ ಮೊಬೈಲ್ ಕಸ್ಗಬುಟ.
ಕಡಿಗೆ ಅಂತೂ ಕಾಡೀ ಬೇಡಿ ತೀಡಿದ ಮೇಲೆ ಅವರಲ್ಲೇ ಒಬ್ಬಂಗೆ ಕನಿಕರ ಬಂತಕು.
ಪೋನ್ ಮಾಡಲೆ ಬಿಟ್ಟ. ಫೋನ್ ಮಾಡಿರೆ ಯನ್ನ ಸೀನಿಯರಾಗ್ಲೀ, ಬಾಸಾಗ್ಲೀ ಪೋನ್ ಎತ್ತಿದ್ವಿಲ್ಲೆ. ಕಡಿಗೆ ಒಬ್ಬ ಮರಾಠಿ ಡಾಕ್ಟರಿಗೆ ಪೋನ್‌ಮಾಡಿ ಅವ ಭರವಸೆ ಕೊಟ್ಟ ಮೇಲೆ ಬಿಟ್ಟ.
(ಈಗ ನಗೆ ಬತ್ತು ದುಖ್ ತಿಂದೋಪ್ಲೆ 😂 )
- ಶ್ಯಾಂ ಭಟ್, ಭಡ್ತಿ
1 ಜೂನ್ 2೦22, ಹವಿಹಾಸ್ಯ - ಲಘುನಗು
No comments:
Post a Comment