ಯಮ್ಮನೆ ಅಪ್ಪಿ ಅಣ್ಣ.
#############
ಅವನ ಹೆಸರು ವೆಂಕಟ್ರಮಣ ಹೇಳಿ ಯಾರಿಗೂ ಗೊತ್ತಿಲ್ಲೆ.. ಇಡೀ ಊರಿಗೇ ಅಪ್ಪಿ ಅಣ್ಣ ಅಂವಾ.
ಯನ್ನಪ್ಪ ಹೋದಾಗಿಂದ ಸತತ 16 ವರ್ಷದವರಿಗೆ ಯನ್ನ ಅನುಪಸ್ಥಿತಿಲಿ ಯನ್ನಬ್ಬೆಯ ಹೆರಿ ಮಗನಾಗಿ ಸೇವೆ ಮಾಡಿದ ಪುಣ್ಯಾತ್ಮ ಅಂವಾ. ಯನ್ನಬ್ಬೆಯ ಬಲಗೈ ಅಂವಾ... 'ಅಪ್ಪಿ' ಅಂವಾ.
ಅವನೇ ಹೋಲ್ ಎಂಡ್ ಸೋಲ್ ಯಮ್ಮನೆಯ ಉಗ್ರಾಣದ ಮಾಲಿಕ. 5 ತಿಂಗಳ ಹಿಂದೆ ಯನ್ನ ಕಾಕನ ಅಂತ್ಯಕಾರ್ಯದ ದಿನಗಳ ಸುದ್ದಿ ಇದು. ಇಂವ ಬೆಳಬೆಳಗ್ಗೆ 5 ಗಂಟೆಗೆ ಬಂದ್ಬುಡ್ತಾ. "ಇನ್ನೂ ಯಜ್ರಿಲ್ಲೆ! ಸೂರ್ಯ ತಲೆಮೇಲೆ ಬಂದ... ಅಕ್ಕಚ್ಚು ಮಾಡ್ತಿದ್ದೆ ಯಾರಿಗೆಲ್ಲ ಚಪ್ಪೆ?!? " ಕೇಳ್ತ. ಅವನ ಗುಡ್ ಮಾರ್ನಿಂಗ್ ಹೇಳ್ವ ಪದ್ದತಿ ಅದೇಯ.
ಬೆಳಿಗ್ಗೆ ಆಸ್ರಿಗೆಯ ತಯಾರಿಗೆ ಮುಂಚಿನ ದಿನ ರಾತ್ರಿನೇ ಕೇಳ್ತ "ಅತ್ಗೇ ನಾಳೆ ಬೆಳಿಗ್ಗೆ ದಾಣಿಗೆ ಎಂತದೂ ?ಅಕ್ಕಚ್ಚಿಗ್ಗೆಂತದೂ?" 😝
ಹಂಗೇ ರಾತ್ರಿ ಮನೆಗೆ ಹೋಗಕಾರೆ "ಎಲ್ಲಾ ಬಿದ್ಕಳೀ.. ಬೆಳಗಪ್ಪದ್ರೊಳಗೆ ಅಡ್ಗೊರಳ ಹಾಕಡಿ ಮತೇ" ಹೇಳ್ತ.. ಅವನ ಗುಡ್ ನೈಟ್ ಹೇಳ್ವ ಸ್ಟೈಲ್ ಇದೇಯ.
ಹೀಂಗೇ ಯಂಗಕ್ಕೆಲ್ಲ ಅಕ್ಕಚ್ಚು ಹೊಯ್ದಾದ ಮೇಲೆ "ದಾಣಿ ತಯಾರಿದ್ದೂ .. ಪಟಾಪಟಾ ಬನ್ನಿ.. ತಿಂದಾರೂ ಹಾಳ ಮಾಡ್ವ" ಅಂಬ.
ಅದಾದ ಮೇಲೆ ಅವಂದು ಊಟದ ಅಡಿಗೆ ತಯಾರಿ.. "ಅತ್ಗೆ ಪಟಪಟ ಮುರಗು ಕೊಚ್ಕೊಡೀ.. ಹಿಂಡಿ ಬೀಸ್ವವು ಯಾರು.. ಕಡೆಗೆ ಕರೆಂಟು ರಾಮಚಂದ್ರಪ್ಪಚ್ಚೀದಲ್ಲಾ" ಅಂಬ (ರಾಮಚಂದ್ರಪ್ಪಚ್ಚೀ ಅವನ ಅಪ್ಪ). ಅವನ ಮಾತಿನ ಧಾಟಿನೇ ಹಂಗೆ. ಇಡೀ ದಿನ ಖುಷಿಯಾಗಿಪ್ಪ.. ಉಳಿದವರನ್ನೂ ನಗ್ಯಾಡಸ್ತಾ ಇಪ್ಪ ವ್ಯಕ್ತಿತ್ವದ ಈ ನಮನಿ ಕುಶಾಲಗುಣ ಹುಟ್ಟಾ ಬಂದದ್ದೇಯಾಗಿಕ್ಕು 😬.
11 ನೇ ದಿನದ ಕಾರ್ಯಕ್ರಮ ಆ ದಿವ್ಸ. ಆ ದಿನ ಪಂಚಗವ್ಯ ಕೊಟ್ಟು, ಜನಿವಾರ ತೊಡ್ಸಿ ಮನೆ - ಮನಷರನ್ನೆಲ್ಲ ಶುದ್ಧ ಮಾಡಾದ ಮೇಲೆ ಒಂದು ಆಸ್ರಿಗೆ ತಗಂಡ ಭಟ್ರು ಉಳಿದ ಕಾರ್ಯಗಳ ಮುಂದುವರಿಸ್ತ್ರು. ರಾಶೀ ಕೆಲಸ ಇರ್ತು ಆ ದಿನ ಪಾಪಾ.
ಎಲ್ಲರಕಿಂತ ಮದಾಲು ಅಪ್ಪಿ ಅಣ್ಣ ಶುದ್ಧ ಆಗವಲೀ... ಭಟ್ರಿಗಿಂತ ಜಾಸ್ತಿ ಇವಂಗೇ ಗಡಬಡೆ.. "ಭಟ್ರೇ ಇವತ್ತೇ ನೀವು ಗೋಮೂತ್ರ ಗೋಮಯ ಹಾಕತ್ರ ?" ಕೇಳ್ದಾ.
ಇವನ ಭಾಷೆ ಬಲ್ಲ ಭಟ್ರು
"ಥೋ ಬಾರೋ ಮಾರಾಯಾ ನೀ ಮದಾಲು ತಗ.. ಹಂಗೇ ಹಗ್ಗ ಹಾಯ್ಕ" ಹೇಳಿ ಒಂದು ಜೋಡಿ ಜನಿವಾರನೂ ಕೊಟ್ರು... ಮಾತಿಗೆ ತಿರಗೇಟೂ ಕೊಟ್ರು. ಅಪ್ಪಿ ಅಣ್ಣ ಶುದ್ಧನಾಗಿ ಸೊಟಗ ಹೆಗಲೇರ್ಸಿ ಹೊಂಟ.
ಸಲ್ಪ ಹೊತ್ತಿಗೇ ಭಟ್ರು ಗಡಬಡೆ ಮಾಡದ್ರು.. "ಅಪ್ಪಿ ಅಣಾ ಹಾ.. ಚಾ ಮಾಡು ಬಿರಿ ಬಿರಿನೆ.. ತಡಾ ಆತು.. ಆವಾಗೇ ಹಗ್ಗ ಹಾಯ್ಕಂಜ್ಯಲಾ" ಅಂದ್ರು.
ಐದೇ ನಿಮಿಷಕ್ಕೆ ಅವಲಕ್ಕಿ ಉಪ್ಪಿಟ್ಟು (ದಾಣಿ) ಮತ್ತೊಂದು ರವೆ ಪಾಯ್ಸ ಬಡಸ್ಕಂಡು ಅಪ್ಪಿ ಅಣ್ಣ...
"ಭಟ್ರೇ ದಾಣಿ ಅಕ್ಕಚ್ಚೂ" ಅಂದಾ.
ಆಸ್ರಿ ಕುಡ್ಯಕಾರೆ "ಹೊಸ ನಮನಿ ರುಚಿ ಬಂಜಪಾ ರವೆ ಪಾಯ್ಸ ಅಪ್ಪಿ ಅಣಾ... ಮತ್ತೊಂದ್ ಸಲಿ ತಗ" ಅಂದ್ರು ಭಟ್ರು.
"ಭಟ್ರೆ .. ನೀವ್ ಗಡಬಡೆ ಮಾಡದ್ರಿ.. ಗಡಬಡೆ ಮಾಡ್ಕಳಡಿ.. ಸಕಾಶ ತಗಳಿ... ಪಾಯ್ಸಲ್ಲ, ಶಿರಾ ಅದು.. ಇವತ್ತೇ ಮಾಡದ್ದು... ಒಂದೇ ಶೆಕೆ ಮದ್ಲೇ ಇಳಿಸಿದ್ದೆ" ಅಂದಾ ಅಪ್ಪಿ ಅಣ್ಣ. 🤣😂
ಭಟ್ರ ಬಾಯಿಂದ ಮಾತೇ ಹೊರ್ಳಿದ್ದಿಲ್ಲೆ.. ಬಾಯಲ್ಲಿದ್ದದ್ದು ಶಿರಾ ಹೇಳಿ ತಲೆಗೇ ಹೊಳದ್ದಿಲ್ಲೆ😬😂😂
🙏
- ಶ್ಯಾಂ ಭಟ್, ಭಡ್ತಿ
(ಇಲ್ಲೇ ಹಲ್ಬಕಾರೆ ಮಾಡಿದ ಕಮೆಂಟುಗಳ ಸಂಘಟಿಸಿ ಒಂದು ರೂಪ ಕೊಟ್ಟಿದ್ದೆ ಅಷ್ಟೇ)
30/04/2022, ಹವಿಹಾಸ್ಯ - ಲಘುನಗು
No comments:
Post a Comment