Oct 16, 2012

ಪಟ್ಟಂಗ

ನಾ ಉಮ್ರ ಕಿ ಸೀಮಾ ಹೋ.. ನ ಜನ್ಮ್ ಕಾ ಹೋ ಬಂಧನ್ -
 ಜಗಜೀತ್ ಸಿಂಗ್ ರ ಗಝಲ್ ..."ಹೋಂಟೋ ಸೇ ಛೂಲೋ ತುಮ್.. ಮೇರಾ ಗೀತ್ ಅಮರ್ ಕರ ದೋ..."  ಕೇಳಿ... ಸುಂದರವಾಗಿ ಹಾಡತಾರೆ (ಹಾಡುವ ತಾರೆ) ಅವರು. ಅವರ ಶೈಲಿಯಿಂದಾಗಿಯೇ ಆ ಹಾಡು ತುಂಬ ಅರ್ಥಗರ್ಭಿತವಾಗಿದೆ ಅನಿಸಿಬಿಡತದೆ. ಸುಮ್ಮನೇ ಆ ಹಾಡಿನ ಸಾಹಿತ್ಯದೆಡೆಗೆ ಒಮ್ಮೆ ಯೋಚಿಸುವುದಕ್ಕಿಂತ ಅವರ ಹಾಡಿನ ಮಧ್ಯೆ ಮಧ್ಯೆ ಅವರು ಕೊಡುವ ವಿವರಣೆಗಳು ಆ ಹಾಡಿನ ಮಹತ್ವವನ್ನ ಸಾರುತ್ತವೆ ...ಹೊಗಳುತ್ತದೆ...ಅರ್ಥೈಸುತ್ತವೆ. ಆ ವಿವರಣೆಗಳೇ ಅವರನ್ನ ಜಗಜೀತ್ ಸಿಂಗ್ ರನ್ನಾಗಿಸಿರಬಹುದು ಎನ್ನಿಸಿಬಿಡತದೆ.
 ಹಾಡಿನ ಮಧ್ಯದ ವಂದು ಸಾಲು - "ನಾ ಉಮ್ರ ಕಿ ಸೀಮಾ ಹೋ.. ನ ಜನ್ಮ್ ಕಾ ಹೋ ಬಂಧನ್" ದ ಅರ್ಥ ಅವರ ವಿವರಣೆಯಿಂದ ಅರ್ಥಗರ್ಭಿತವಾಗತದೆ... ವಿವರಿಸುತ್ತಾರೆ ಅವರು... 

’ಪ್ರೇಮೀ ಥೇ ದೋ.... ವೋ ಶಾದೀ ಕರನಾ ಚಾಹತೇ ಥೇ... ತೋ ಅಪನೇ ಮಾ ಬಾಪ್ ಕೇ ಪಾಸ್ ಲೇ ಗಯಾ ಲಡಕಾ... ಲಡಕೀ ಕೋ ಮಿಲವಾಯಾ.. ಕಹಾ ಇಸ್ ಸೇ ಶಾದೀ ಕರನಾ ಚಾಹತಾ ಹೂಂ... ಬೋಲೇ ಠೀಕ್ ಹೈ....ಇಸಕೀ ಜನಮ್ ಪತ್ರೀ ಮ್ಯಾಚ್ ಕರತೇ ಹೈ.... ವೋ ಬೋಲೇ ಕೀ.. ಯೇ ಶಾದೀ ತೋ ನಹೀ ಹೋ ಸಕತೀ...ಕ್ಯೋಂ..ಕ್ಯೋಂ ನಹೀ ಹೋ ಸಕತೀ? .... ಲಡಕೀ ತುಮಾರೀ ಸೇ ಬಡೀ ಹೈ ದೋ ಸಾಲ್... ತೋ ಇಸ್ ಮೇ ಕ್ಯಾ ಹೈ...ದೋ ಸಾಲ್ ಕೇ ಬಾದ್ ಶಾದೀ ಕರೇಂಗೇ?!!’

’ಏಕ್ ಭಾಯ್ ಸಾಬ್ ನೇ Add ನಿಕಾಲಾ ಪೇಪರ್ ಮೇ... ಅಛ್ಛೇ ಥೇ... Agriculturist ಥೇ... ಕೀ I want to get married  ಔರ್ ಏಕ್ ಹೀ ಶರ್ತ್ ಹೈ... ಕೇ ಡೌರೀ ಮೇ... I want a Tractor.... ಔರ್ ನೀಛೇ underline ಕಿಯಾ ಹುವಾ ಥಾ Please send the Photograph of the tractor immediately.’

"ನಾ ಉಮ್ರ ಕೀ ಸೀಮಾ ಹೋ .. ನಾ ಜನಮ್ ಕಾ ಹೋ ಬಂಧನ್.. ಜಬ್ ಪ್ಯಾರ್ ಕರೇ ಕೋಯೀ ತೋ ದೇಖೇ ಕೇವಲ್ ಧನ್... ನಯೀ ರೀತ್ ಚಲಾಕರ್ ತುಮ್... ಯೇ ರೀತ್ ಅಮರ ಕರದೋ... ಮೇರಾ ಗೀತ್ ಅಮರ ಕರದೋ ..." ಎಂಬ ಸಲ್ಲುಗಳು ಅರ್ಥಗರ್ಭಿತವಲ್ಲವೇ? 
 ಹಾಡಿನ ಮಧ್ಯದ ಉಪಕಥೆಗಳು ಹಾಸ್ಯಮಿಶ್ರಿತವಾಗಿದ್ದರೂ ಅವುಗಳ ಅರ್ಥ ಹಾಡನ್ನು ಪೂರ್ಣಗೊಳಿಸುತ್ತವೆ ಇನ್ನೂ ಸುಂದರವಾಗಿಸುತ್ತವೆ ... ಆಹಾ 

ಉಲ್ಲೇಖ -  http://www.youtube.com/watch?v=VAKbHtOuxAs

   --------------------------------------------------------------------


(17 ಅಕ್ಟೋಬರ್ 2012)
ಮಕ್ಕಳು... ಹುಡ್ರು... ಹುಡಗ್ರು... ಶಣ್ ಮಕ್ಕ... ಅವರ ಮನಸು ಎಷ್ಟು ನಿರ್ಮಲ.... ಶುದ್ಧವಾಗಿರತು... ಪ್ರತಿಯೊಬ್ಬರ ಪ್ರೀತಿಗೆ ಸ್ಪಂದಿಸ್ತ ಅವು.... ಅಪ್ಪಿ ಮುದ್ದಾಡಿರೆ ಖುಷಿ ಕೊಡತ. ಯಾವಾಗಲೂ "ಶೀ ನೀ ವಾಸನೆ... ನಿನ್ನ ಮೈ ವಾಸನೆ" ಹೇಳತ್ವಿಲ್ಲೆ.
ಪ್ರೀತಿಯಲ್ಲಿ ತಾರತಮ್ಯ ಇಲ್ಲೆ ಅವಕೆ... ಹುಂ, ಅಪ್ಪ ಅಮ್ಮನ ಮ್ಯಾಲೆ ವಾತ್ಸಲ್ಯ ಮತ್ತು ಭರವಸೆ ಸಲ್ಪ ಜಾಸ್ತಿ ಇದ್ದರೂವ.... ಪ್ರೀತಿಯಲ್ಲಿ ತಾರತಮ್ಯ ಧೋರಣೆ ಗೊತ್ತಿಲ್ಲೆ ಅವಕೆ... ಮುಗ್ಧರು ಅವು....
ನಾವೂ ಆ ಬಾಲ್ಯಾವಸ್ಥೆಯ ದಾಟಿ ಬಂದಾಜು.... ಆದರೆ ಆ ಮುಗ್ಧತನ ನಮ್ಮಿಂದ ಯಾವಾಗ ಹೋತು ಹೇಳೇ ಗೊತ್ತಾಜಿಲ್ಲೆ... ಬಹುಶಃ ನನ್ನ ಮನಸಲ್ಲಿ ಅವ ಕೆಟ್ಟವ ಇವ ವಳ್ಳೆಯವ ಹೇಳಿ ಶುರುವಾದದ್ದೇ ೮ನೇತಿಗೆ ಹೋದ ಮ್ಯಾಲೆ... ಬಹುಶಃ ಈಗಿನ ಹುಡ್ರಿಗೆ ಇದಕ್ಕೂ ಮೊದಲೇ ಗೊತ್ತಾಗ್ತನ ಗೊತ್ತಿಲ್ಲೆ.
ಏನೇ ಆಗಲಿ ಮುಗ್ಧ ಮನಸನ್ನ ನಾವು ಮಗುವಿನಂಥಾ ಮನಸು ಹೇಳಿ ಹೊಗಳತ. ಮಗುವಿನ ಮನಸು ಶುದ್ಧ - ಪರಿಶುದ್ಧ. ಆ ಪರಿಶುದ್ಧ ಮನಸು ಯಾವುದು ವಳ್ಳೇದು ಕೆಟ್ಟದ್ದನ್ನು ನೋಡತಿಲ್ಲೆ. ಯಾವುದನ ಮಾಡವು ಕಾಣತ ಅದನ್ನೇ ಮಾಡತು... ಅದೇ ಹುಡುಗಾಟಿಕೆ. "ಹುಡಗಾಟಗತಿ ಮನಷಾ ಅಂವಾ" ಹೇಳದನ್ನ ಕೇಳಾಜು ನಾವು. ದೊಡ್ಡಾದ ಮ್ಯಾಲೂ ಶಣ್ ಹುಡ್ರಾಂಗೇ ಆಡದನ್ನ ಹುಡಗಾಟಿಕೆ ಬುದ್ಧಿ ಹೇಳಾಗತು ನಾವು.
ಈಗ ನಮ್ಮಲ್ಲಿ ಅವಶೇಷವಾಗಿ ಇಪ್ಪದು ಅಂದರೆ ಹುಡುಗಾಟಿಕೆ ಮಾತ್ರ. ಅದೂ ಯಾವುದೋ ಗೆಳೆಯರ ಸ೦ತಿಗೆ ವಾರಾ೦ತ್ಯಗಳಲ್ಲಿ ಕಳದೋಗತು. ಆ ಮಗುವಿನಂಥ ಮನಸ್ಸು ನಮ್ಮಲ್ಲಿಲ್ಲೆ ಈಗ. ಅದ್ಯಾವಾಗೋ ಕಳೆದೋಜು. ಆ ಮನಸು ಇದ್ರೆ ಎಷ್ಟು ಚೆಂದ!!
ಎಷ್ಟೋ ಸತಿ ಯೋಚನೆ ಮಾಡದಿದ್ದು..”ಆ ಹುಡುಗು ಮನಸ್ಸನ್ನ ಮತ್ತೆ ವಾಪಸ್ಸು ತ೦ದಕ್ಯಳವು..... ಕೊನೇ ಪಕ್ಷ ಪುರಸೊತ್ತು ಮಾಡಕ್ಯಂಡು ವಾರದಲ್ಲೊಂದಿನ.. ಅಥವ ತಿಗಳಲ್ಲೊಂದಿನ..... ಕಟ್ಟಕಡೆಗೆ ನಾಲ್ಕಾರು ತಿಂಗಳಿಗೊಂದು ದಿನವಾದರೂ  ಹುಡ್ರ ಹಾಂಗೇ ಆಡವು... ಆ ವಂದು ದಿನಕ್ಕಾರೂ ಹುಡ್ರ ಮನಸಿನ ಹಾಂಗೇ ನಮ್ಮ ಮನಸ ಪರಿವರ್ತನೆ  ಮಾಡಕ್ಯಳವು... ಯಾರ ಮ್ಯಾಲೂ ಕನಿಷ್ಟ ಆ ದಿನ ಬೇಜಾರು ಮಾಡಕ್ಯಳಲಿಲ್ಲೆ... ಶಿಟ್ಟು ಮಾಡಲಿಲ್ಲೆ... ಬೇಜಾರು ಮಾಡಲಿಲ್ಲೆ’  ಹೇಳಿ - ಆಗತಿಲ್ಲೆ.

ಹೋಗಲಿ, ಹೀಂಗೇ ವಂದು ದಿನ... ಸುಮ್ಮಂಗೆ ಮೌನ ವೃತ ಮಾಡವು ಅಂದಕ್ಯಂಡಿದ್ದಿ - ಅದೂ ಆಗತಿಲ್ಲೆ ಹಣೇಬರ.
ಯಾವುದೋ ವಂದು ದಿನ.... ಹುಡ್ರ ಹಾಂಗೇ ವಟವಟಾ ಹಲಬವು - ಆಗತಿಲ್ಲೆ
ಯಾವುದೋ ವಂದು ದಿನ .... ನಿಯಮಿತವಾಗಿ... ಕಟಕಟಿಯಾಗಿ .... ಉಪವಾಸ ಮಾಡವು - ಆಗತಿಲ್ಲೆ
ಯಾವುದೋ ವಂದು ದಿನ .... ಹುಡ್ರ ಹಾಂಗೇ ಕಂಡ ಕಂಡಿದ್ದ ತಿನ್ನವು .... ಮುಕ್ಕವು - ಆಗತಿಲ್ಲೆ 
ಯಾವುದೋ ವಂದು ದಿನ .... ಕವಳನೇ ಹಾಕಲಿಲ್ಲೆ - ಆಗತಿಲ್ಲೆ!
------------------------------------------------------------

ಕವಳ ಅಂದಕೂಡಲೇ ನೆನಪಾತು....
ಕವಳದ ವಂದೇ ವಂದು ತಲುಬು ಇದ್ದು ಯಂಗೆ. ಅದನ್ನ ಚಟ ಹೇಳಲೆ ಆಂ ರೆಡಿ ಇಲ್ಲೆ....
ತಲೆ ಬಿಸಿ ಆತ ಇಲ್ಯ... ಕವಳ ಹಾಕವು....ಈ ತಲೆಬಿಸಿಗೂ ಕವಳಕ್ಕೂ ನಂಟು ಇಪ್ಪದು ಕವಳ ಹಾಕವಕೇ ಗೊತ್ತು. ತಲೆಬಿಶಿ ಆದಾಗ ಕವಳ ಬೇಕು ಗನಾ ತ೦ಬಾಕಿನ ಕವಳ ಹಾಕದಾಗ ಕೆಮಿ ಬಿಶಿಯಾಗತು.... ವಟ್ಟೂ ಬಿಶಿಗೂ ಕವಳಕ್ಕೂ ನ೦ಟು ಹೇಳಲಕ್ಕು. ಅಲ್ಲ ಮತ್ತೂ ಕೆಲ ಸ೦ದರ್ಭದಲ್ಲಿ ಬೇಕಾಗತು ಈ ಕವಳ !
ಬೆಳಗಾಮುಂಚೆ ಆಸರಿ ಕುಡಕಂಡು (ಕೆಲವರು ಎದ್ದಕೂಡಲೇ ಹೋಗತ್ವಕು) ಮಾಡ ನಿತ್ಯಕರ್ಮ ಇದ್ದಲಿ... ಕವಳ ಹಾಕದ್ದೇ ಆಗತೇ ಇಲ್ಲೆ ಅದು.  ಅಲ್ಲ ಅದು ಯನ್ನ ಚಟ ಹೇಳಿ ವಪಗಂಬಲೆ ಯಾ ತಯಾರಿಲ್ಲೆ ಬಿಲ. ಯೆಂತಕೆ ಹೇಳಲೆ ಯಂದೇ ಆದ ತರ್ಕ ಇದ್ದು.  "ಕವಳ" ಇದು ಹವ್ಯಕರ ಮೂಲ ಪದ . ಯಾವುದೇ ವಂದು ವಿಷಯಕ್ಕಾಗಿ ಖೋರಂ ಕೂಡಲಿ... ಬೇಕಾರೆ ಅದು ಗಂಭೀರ ವಿಷಯವೇ ಆಗಿರಲಿ ಮೊದಲು ಎದುರಿಗೆ ಬಪ್-ದು ಕವಳದ ಬಟ್ಟಲು... ಕಡೆಗೆ ಕೇಳದು ಆಸರಿಯ. ದೇವಸ್ತಾನದ ಮೀಟಿಂಗ್ ಇರಲಿ... ಹೆಣ್ಣು ಗಂಡಿನ ಮಾತುಕಥೆಯಿರಲಿ... ಅಥವ ಕೊಡತಗಂಬ ವ್ಯವಾರ ಇರಲಿ.... ಬಂದವರ ಮೊದಲ ಗ್ರಹಿಕೆ ಹೋಪದೂ ಕವಳ ಬಟ್ಟಲ ಮ್ಯಾಲೇಯ. ನಾವು ಯೆಲ್ಲೇ ಇರಲಿ.. ಬೇಕಾರೆ ದೇಶ ಬಿಟ್ಟೇ ಹೋದರೂವ ಈ ಕವಳ ಬಿಡಲಾಗತಿಲ್ಲೆ. ಬಿಟ್ರೆ ಹವ್ಯಕತನನೇ ಬಿಟ್ಟಾಂಗೇಯ. ಜಾತಿ ಕೆಟ್ಟಾಂಗೆ. ಜನಿವಾರ ಮತ್ತೆ ಈ ಕವಳ ಎರಡನ್ನೂ ಬಿಡಡಿ ಹೇಳಂವಾ ಯಾನು...  ಈಗ ಊರು ಬಿಟ್ಟು ದೊಡ್ಡ ದೊಡ್ಡ ಸಾಪಟವೇರ್ ಕಂಪನಿ ಸೇರಕಂಡು ಕವಳ ಬಿಟ್ಟವಿದ್ದ ...ಅಥವ ಕವಳದ ರುಚಿನೇ ಗೊತ್ತಿಲ್ಲದ ಹೈಗರೂ ಇದ್ದ ಮತೇ. ಅವಕೆ ಧಿಕ್ಕಾರ ಇದ್ದು ಯಂದು. ಅಲ್ಲ ಇದು ಯನ್ನ ತರ್ಕ ಮಾತ್ರ. ಬೇಕಾದವು ಬೇಕಾದ ನಮನಿ ತಿಳಕಳ್ಳಿ... ಬೇಕಾರೆ ಇವಂಗೊಂದು ಹೆಳೆ ಬೇಕು ಹೇಳಲಿ. ಯಾರ ಮ್ಯಾಲೂ ಹೇರದಲ್ಲ  ಹೇರಲಲ್ಲ ಯಾ ಧಿಕ್ಕಾರ ಕೂಗಿದ್ದುವ.

ತಲೆಬಿಸಿಗೆ  ವಂದು ಕವಳದ ಈಡು ತುಂಬನ ಕಂಡತು. ಊರಲ್ಲಾದರೆ ಕವಳ ಹಾಕವು ಅನಸಿದಕೂಡಲೇ ಹಣ್ಣಡಕೆ ಇಲ್ದೋರೆ ನೀರಡಕೆ ವಾಸನ್ಯಾರೂ ಸೊಲದು (ಕಡೆಗೆ ಆ ಕೈ ತೊಳಕಂಬಲೆ ವಂದು ಬಾಲ್ಡಿ ನೀರು ವಂದ್ ಬಾರ್ ಶಾಬು ಖಾಲಿ ಆದರೂ ಅಡ್ಡಿಲ್ಲೆ)  ... ಯೆಲೆ ಇಲ್ಲದೋರೆ ತ್ವಾಟಕ್ಕೆ ಹೋಗಿ ಕೈ ಮುಟ್ಟದೇ ಹೋದರೂವ ಯಾರು ಏಣಿ ಎತಗ ಬತ್ತ ಹೇಳಿ ಆಳಸಿತನ ಮಾಡಿ ಕೈಗೆ ಸಿಕ್ಕ ಎಳೇ ಎಲೆನೇ ಚೂಟಗ ಬಂದು...... ಸುಣ್ಣದ ಅಂಡೆಲಿ ಸುಣ್ಣ ಇಲ್ಲದೋರೆ ಸಂಜಾದ್ರೂವ  ನೆಂಟರು ಬಂಜ ಹೇಳಿ ಸುಳ್ ಸುಳ್ಳೇ ಹೇಳಿ ಹಿತ್ಲಾಕಡಿಗ್ ಹೋಗಿ ಹಳೇ ಮಣ್ಣಿನ ಗಡಗಿ೦ದ ಸುಣ್ಣ ತಂದು (ಸಂಜಾದ ಮ್ಯಾಲೆ ಸುಣ್ಣ ತತ್ವಿಲ್ಲೆ... ಅದು ಹಿರೆಯವು ನಡೆಸ್ಕ ಬಂದ ಪದ್ದತಿ.. ಯೆಂತಕ್ಕ ಕಾರಣ ಗೊತ್ತಿಲ್ಲೆ) .... ಹೊಗೆಸೊಪ್ಪಿನ ದಂಟನೇ ಸೊಲದೂ ಸೊಲದೂ ಕವಳ ಹಾಕಾಗತು. ಆದರೆ ಹೇಳಿ ಕೇಳಿ ಅಲ್ಲಿಂದಿಲ್ಲಿಗೆ ಬಂದು ಇಲ್ಲೆಂತ ಮಾಡಿ ಸಾಯವು? ಅದಕೇಯ ಹತ್ರದಲ್ಲೇ ಇಪ್ಪ ವಂದು ಪಾನ್ ಬೀಡಾ ಅಂಗಡಿಯಂವನತ್ರೇ ಕವಳ ಹಾಕತಿ... ಕಟಸಗ್ಯ ಬತ್ತಿ .. ಹಾಂಗೇ ಕವಳ ಹಾಕೀ ಹಾಕೀ ಗುರತ ಯಂಗೆ ಅಂವ ಮತ್ತೆಂತ ದೊಡ್ ಸಂಬಂದ ಅಲ್ಲಾ . ಮದ ಮದಲು ಹಳೇ ಹರಕು ಅಂಗಿ ಹಾಕ್ಯತಿದ್ದ... ಈಗ ನೋಡಿರೆ ಅಂಗಿಗೆ ಇಸ್ತ್ರಿ ಇಲ್ಲದ್ದೇ ಅಂಗಡಿ ಬಾಗ್ಲು ತೆಗೇತ್ನಿಲ್ಲೆ.... ಅಲ್ಲ ಆಗಲಿ ... ಯಮ್ಮನೆ ಆಯಿ ಹೇಳಾಂಗೇಯ ನಾವಂತೂ ಸರೀ ಉದ್ಧಾರಾಜವಿಲ್ಲೆ ....ಯನ್ನಿಂದಾಗಿ ಅವನಾರೂ ಉದ್ಧಾರ ಆದನಲಿ ಹೇಳದೇ  ಖುಷಿ ವನ್ನಮನೀಯ.ಇರಲಿ.

ಈ ಕವಳ ಹಾಕ ’ನಮನಿ’ಇದ್ದಲೀ ಅದು ವಿಶೇಷ.... ಈ ಹಾಲಕ್ಕಿ ವಕ್ಕಲಿಗರು ಇದ್ವಲೀ... ಅವು ಕವಳ ಹಾಕ ನಮನೀ ನೋಡೀರಂತೂವ..... ಎಲ್ಲ ಬಿಟ್ಟ ಮಠದ ಗುರಗಳಿಗೂ ಕವಳ ಹಾಕವು ಹೇಳ ಚಟ ಎದ್ದೋಗವು.... ಆ ನಮನೀ ರಸವತ್ತಾದ ಕವಳ ಹಾಕತ ಅವು. ಅವರ ಕವಳ ಸಂಚಿಂದ ವಂದೊಂದೇ ಎಲೆ ಚೂರು, ಸುಣ್ಣ, ಅಡಕೆ ಹೋಳು ತೆಗದು ಹಾಕದ ನೋಡೀರೆ... ಆ ಸಂಚಿಲಿಪ್ಪ ಸಾಮಾನೇ ಅಮೃತ ಅನಸೋಗತು...

ನೆನಪಿನ ಅಮೃತ - "ಹಶೀ ಅಡಕೆ - ವಣಾ ಎಲೆ ಕವಳ ಹಾಕಲೆ ಆಂ ಯೆಂತ ಘಟ್ಟದ ಕೆಳಗಿನಂವನ?"  ಹೇಳ ವಾಕ್ಯ ...."ಬಿಟ್ಟ ಹೆಂಡತಿಯ ಮತ್ತೆ ಕಟಗ್ಯಂಬಲೆ ಆಂ ಯೆಂತ ರಾಮನ?" ಹೇಳದಾಂಗೇ ಇದ್ದು ಅಲ್ದ ?!! 
__________________________________________________________________

(11 December 2012)

ಕರವಸ್ತ್ರದ ಉಪಯೋಗ
          ಕರವಸ್ತ್ರ ಇಪ್ಪದೆಂತಕೆ? ನಾವು ಚೊಕ್ಕಿರವು ಹೇಳಿ. ಎಲ್ಲೋ ಹೊರಗೆ ಹೋದಾಗ ಊಟ ಮಾಡಿರೆ ಕೈವರಸಗಂಬಲೆ... ಯಾವದೋ ಕೆಟ್ ಗಳಗೇಲಿ ಶಿಮಲು ಬಂದೋದ್ರೆ  ಮೂಗ್ ಚೊಕ್ಕ ಮಾಡಕಂಬಲೆ.... ಕಣ್ಣಿಗೇನಾರೂ ಧೂಳ್ ಗೀಳ್ ಹೋದರೆ ವರಸಗಂಬಲೆ. ಇನ್ನು ಥಂಡಿ ಗಿಂಡಿ ಆದಾಗ ಅದೇ ಕರವಸ್ತ್ರ ನಮ್ಮ ಭೂತಾಯಿಯ  ಹೂಲಸು ಮಾಡಲಾಗ ಹೇಳ ಕಾಳಜಿಯಿಂದ ಅಲ್ಲದೇ ಹೋದರೂ ಯಾರಾರೂ ನೋಡೀರೆ ನಾಚಕೆ ಹೇಳಿ ಅತೀ ಅಮೂಲ್ಯ ಮೂಗನ್ನ ಚೊಕ್ಕ ಮಾಡಿ  ತನ್ನೊಳಗೇ ಇಟಗ್ಯಳವು ಹೇಳ ಸದುದ್ದೇಶದಿಂದ ಕರಚೀಪು ಇಟಗ್ಯಂಬವಿದ್ದ....

           ಆದರೆ ಯನ್ನ ಉದ್ದೇಶ ಅದಲ್ಲ. ಯಾವಾಗಲೂ ಕರವಸ್ತ್ರ ಯನ್ನ ಕಿಸಗೆಲಿ ಇರತು.... ಯಂದು  ವನ್ನಮನೀ ಗಜನೀ ಜನಾಂಗ ... ಶಾರ್ಟ್ ಟೈಮ್ ಮೆಮರೀ ಲಾಸ್ ಹೇಳ ದೊಡ್ಡ ರೋಗ ಇದ್ದು ಯಂಗೆ... ಅದಕಾಗಿ ಯಾನು ಕರವಸ್ತ್ರ ಇಟಗ್ಯತ್ತಿ. ಅಲ್ಲಿ ಇಲ್ಲಿ ಓಡಾಡಕಾರೇ ಯಾವಾಗಾರೂವ ಚೊಲೋ ಕೆಲಸ ನೆನಪಪ್ಪದು. ಆವಾಗ ನೆನಪು ಮಾಡಕ್ಯಂಡ ಕೆಲಸ ಮನಿಗೆ ಬಪ್ಪತಕ ಮರತೋಗತು.  ಅದಕಾಗಿ ಆನ್ ಕಂಡ್‍ಕಂಡ ಉಪಾಯ ಇದು... ಅನುಸರಿಸಿ ಬೇಕಾರೆ.

           ಹೀಂಗೆ ಯೆಂತಾರೂ ಕೆಲಸ ನೆನಪಾದರೆ ಕಿಸಗೆಲಿದ್ದ ಕರಚೀಪ ತೆಗೆಯಲೆ ಮರೀತ್ನಿಲ್ಲೆ ಯಾನು. ಆ ಕರವಸ್ತ್ರ ತೆಗದು ಅದಕೊಂದು ಗಂಟ್ ಬಿಗೀತಿ ತುದೀಗೆ. ತುದೀಗ್ ಯೆಂತಕಪಾ ಅಂದರೆ ವಂದ್ ತಿರಗಾಟದಲ್ಲಿ ನಾಲ್ಕೈದ್ ಕೆಲಸ ನೆನಪಪ್ಪದೂ ಇರತು ಕೆಲು ಸಲವಾ. ಮನೀಗ್ ಬಂದ ಮ್ಯಾಲೆ ದಪ್ತರ ಹೊತಾಕಿ ಪ್ಯಾಂಟ್ ಕಳಚಕಾರೆ ಹಂಬಲಾಗತಿಲ್ಲೆ ಅದೂವ... ನಾಳೆ ಬೆಳಗ್ಗೆ ವಸ್ತ್ರ ತೊಳ್ಯಲೆ ಹಾಕಕಾರೆ ಯಮ್ಮನೆ ಪ್ರಾಣೀಗಾರೂ ನೆನಪಾಗಲೀ ಹೇಳ ಸದುದ್ದೇಶದಿಂದನೇ ಗಂಟ್ ಹಾಕಿದ್ದು ಅದು. ಯಮ್ಮನೆ ಪ್ರಾಣಿ "ಕರಚೀಪಿಗೆ ನಾಲ್ಕ್ ಗಂಟ್ ಇದ್ದಲೀ" ಹೇಳ್ ವದರವೂ ಯಂಗ್ ಆ ನಾಕ್ ಕೆಲಸದಲ್ಲಿ ವಂದೆರಡಾರೂ ನೆನಪಾಗವು.

         ಆದರೂ ಹೆದರಲಿಲ್ಲೆ... ನಾಕರಲ್ಲಿ ಎರಡಾರೂ ನೆನಪಾಗತಲೀ ಹೇಳ ಸಮಾಧಾನ ಇಲ್ಲಿವರಿಗೂ ಇದ್ದಪ...ನಾಳೆ ಯಾರ್ ಕಂಡಿದ್ದ?
__________________________________________________________________________


(* ಇದೊಂದು ತರದ ’ಮನದಾಳದ ಮಾತುಗಳು’.... ಇವು ನನ್ನ ’ಹುಚ್ಚು ಮನಸ್ಸಿನ ಹತ್ತು ಮುಖಗಳು’...  .... ಯಾರೂ ಓದಲೆಂದು ಬರೆಯುವ ಬರಹವೇನಲ್ಲ.... ಮನಸು ಹಾಗೇ.... ಕಛೇರಿ ಕೆಲಸದ ಮಧ್ಯೆ.... ವಾಹನ ಚಾಲನೆಯ ನಡುವೆ ... ಬಸ್ಸು ರೈಲುಗಳ ಕಿಡಕಿಗಳಾಚೆ ಅದೋ ಆ ದಿಗಂತದೆಡೆಗೆ ಕಣ್ಣು ನೆಟ್ಟಾಗ ಬರುವ ಮನದಾಳದ- ಮನದೊಳಗಣ ಯೋಚನೆಗಳಿಗೆ ಯಾವುದೇ ಬೇಲಿ ಬೌಂಡರಿಗಳಿಲ್ಲ.... ಅದೂ ದಿಗಂತದಂತೇ ಸುಂದರ ...ಹಾಗಾಗಿ ಇದೊಂದು ತರಹದ ’ಮನಸಿಗೆ ಬಂದದ್ದ ಗೀಚಲಿಕ್ಕಿರುವ ಸ್ಥಳ’)

Aug 10, 2012

ವೈದ್ಯೋ ನಾರಾಯಣೋ ಹರಿಃ -ಎಷ್ಟು ಸತ್ಯ?

 ಎಷ್ಟೋ ದಿನಗಳಿಂದ ಅಂದುಕೊಂಡ... ನಮಗೆಲ್ಲರಿಗೂ ಗೊತ್ತಿರುವ ಇಂದಿನ ಸತ್ಯ ಇದು. ಇಂದಿನ ದಿನಗಳಲ್ಲಿ ವೈದ್ಯೋ ನಾರಾಯಣೋ ಹರಿಃ ಎಂಬುದು ಎಷ್ಟು ಸತ್ಯ?? ಎಷ್ಟು ಡಾಕ್ಟರುಗಳು ದೇವರಂತಿದ್ದಾರೆ?? ಈ ಡಾಕಟರುಗಳ ಪೂಜಿಸುವುದು ಅಥವ ಗೌರವಿಸುವುದು ಸರಿಯಾ?? ಎಂಬೆಲ್ಲ ಪ್ರಶ್ನೆಗೆ ಪೂರಕವಾಗಿ ಇಂದು ಬಂದ ವಂದು ಮೇಲ್ (ಮಿಂಚಂಚೆ) ಯೋಚನೆಗೆ ಹತ್ತಿಸಿದೆ. ಆ ಮೇಲ್ ನ ಯಥಾನಕಲು ಕೆಳಗಿದೆ

Wonder how much is widespread and how many are merely a few black sheep.

How Indian Doctors Loot Patients.


Most of these observations are either completely or partially true. Corruption has many names, and one of civil society isn't innocent either. Professionals and businessmen of various sorts indulge in unscrupulous practices. I recently had a chat with some doctors, surgeons and owners of nursing homes about the tricks of their trade. Here is what they said

1)      40-60% kickbacks for lab tests. When a doctor (whether family doctor / general physician, consultant or surgeon) prescribes tests - pathology, radiology, X-rays, MRIs etc. - the laboratory conducting those tests gives commissions. In South and Central Mumbai -- 40%. In the suburbs north of Bandra -- a whopping 60 per cent! He probably earns a lot more in this way than
the consulting fees that you pay.

2)      30-40% for referring to consultants, specialists & surgeons. When your friendly GP refers you to a specialist or surgeon, he gets 30-40%. 

3)      30-40% of total hospital charges. If the GP or consultant recommends hospitalization, he will receive kickback from the private nursing home as a percentage of all charges including ICU, bed, nursing care, surgery. 

4)      Sink tests. Some tests prescribed by doctors are not needed. They are there to inflate bills and commissions. The pathology lab understands what is unnecessary. These are called "sink tests"; blood, urine, stool samples collected will be thrown.

5)      Admitting the patient to "keep him under observation". People go to cardiologists feeling unwell and anxious. Most of them aren't really having a heart attack, and cardiologists and family doctors are well aware of this. They admit such safe patients, put them on a saline drip with mild sedation, and send them home after 3-4 days after charging them a fat amount for ICU, bed charges, visiting doctors fees.

6)      ICU minus intensive care. Nursing homes all over the suburbs are run by doctor couples or as one-man-shows. In such places, nurses and ward boys are 10th class drop-outs in ill-fitting uniforms and bare feet. These "nurses" sit at the reception counter, give injections and saline drips, perform ECGs, apply dressings and change bandages, and assist in the operation theatre. At night, they even sit outside the Intensive Care Units; there is no resident doctor. In case of a crisis, the doctor -- who usually lives in the same building -- will turn up after 20 minutes, after this nurse calls him. Such ICUs admit safe patients to fill up beds. Genuine patients who require emergency care are sent elsewhere to hospitals having a Resident Medical Officer (RMO) round-the-clock.

7)      Unnecessary caesarean surgeries and hysterectomies. Many surgical procedures are done to keep the cash register ringing. Caesarean deliveries and hysterectomy (removal of uterus) are high on the list. While the woman with labour -pains is screaming and panicking, the obstetrician who gently suggests that caesarean is best seems like an angel sent by God! Menopausal women experience bodily changes that make them nervous and gullible. They can be frightened by words like " and "fibroids" that are in almost every normal woman's radiology reports. When a gynaecologist gently suggests womb removal "as a precaution", most women and their husbands agree without a second's
thought.


8)      Cosmetic surgery advertized through newspapers. Liposuction and plastic surgery are not minor procedures. Some are life-threateningly major. But advertisements make them appear as easy as facials and waxing. The Indian medical council
has strict rules against such misrepresentation. But nobody is interested in taking action.

9)       Indirect kickbacks from doctors to prestigious hospitals. To be on the panel of a prestigious hospital, there is give-and-take involved. The hospital expects the doctor to refer many patients for hospital admission. If he fails to send a certain number of patients, he is quietly dumped. And so he likes to admit patients even when there is no need.

10)  "Emergency surgery" on dead body. If a surgeon hurriedly wheels your patient from the Intensive Care Unit to the operation theatre, refuses to let you go inside and see him, and wants your signature on the consent form for "an emergency
operation to save his life", it is likely that your patient is already dead. The "emergency operation" is for inflating the bill; if you agree for it, the surgeon will come out 15 minutes later and report that your patient died on the operation table. And then, when you take  delivery of the dead body, you will pay OT charges, anaesthesiologist's charges, blah-blah-

Doctors are humans too. You can't trust them blindly. Please understand the difference. 

Young surgeons and old ones. The young ones who are setting up nursing home etc. have heavy loans to settle. To pay back the loan, they have to perform as many operations as possible. Also, to build a reputation, they have to perform a large number of operations and develop their skills. So, at first, every case seems fit for cutting. But with age, experience and prosperity, many surgeons lose their taste for cutting, and stop recommending operations. 

Physicians and surgeons. To a man with a hammer, every problem looks like a nail. Surgeons like to solve medical problems by cutting, just as physicians first seek solutions with drugs. So, if you take your medical problem to a surgeon first, the chances are that you will unnecessarily end up on the operation table. Instead, please go to an ordinary GP first

-
Prof. B. M. Hegde, MD, FRCP, FRCPE, FRCPG, FRCPI, FACC, FAMS.
Padma Bhushan Awardee 2010.
Editor-in-Chief, The Journal of the Science of Healing Outcomes,
Chairman, State Health Society's Expert Committee, Govt. of Bihar, Patna.
Former Prof. Cardiology, The Middlesex Hospital Medical School, University of London,
Affiliate Prof. of Human Health, Northern Colorado University,
Retd. Vice Chancellor, Manipal University,
"Manjunath"
Pais Hills, Bejai.
MANGALORE-575004. India.
Tel: +91 824 245 0450.
web site: http://www.bmhegde.com/

ಉಪಸಂಹಾರ :
ಇಲ್ಲಿ ಕೇವಲ ಇಂದಿನ ಡಾಕಟರುಗಳ ದೂರಲಾಗದು.... ಇಂದಿನ ಸಮಾಜವೇ ಹಾಗಾಗಿದೆ.... ಡಾಕ್ಟರಿಕೆ (MBBS) ಓದಲು ಏನಿಲ್ಲವೆಂದರೂ ಕನಿಷ್ಟ ಸುಮಾರು 50 ಲಕ್ಷದಿಂದ 1 ಕೋಟಿ ರೂಪಾಯಿಗಳವರೆಗೆ ಖರ್ಚಾಗುತ್ತದೆ... ಮುಂದೆ ಯಾವುದಾದರೂ ಉನ್ನತ ವ್ಯಾಸಂಗಕ್ಕೆ ಮತ್ತೆ ಇದರ ಎರಡರಷ್ಟು ಖರ್ಚಾಗುತ್ತದೆ... ಹಾಗಂದ ಮೇಲೆ ಆ ಓದುವಿಕೆಗೆ ವಿನಿಯೋಗಿಸಿದ ಖರ್ಚನ್ನು ಎಲ್ಲಿಂದ ತರಬಲ್ಲ ವಬ್ಬ ಡಾಕ್ಟರ್?? ಅದನ್ನೆಲ್ಲ ತೆಗೆಯಲೇಬೇಕೆಂದರೆ ಈ ಮೇಲಿನವನ್ನೆಲ್ಲ ಮಾಡಲೇಬೇಕು.... ಹಾಗಾದರೆ ಇದೊಂದು ದಂಧೆಯಾಗಿದೆ ಎನ್ನದೇ ವಿಧಿಯಿಲ್ಲ... ಇದು ದಂಧೆಯಾಗಲು ಕಾರಣರ್ಯಾರು?? ನಮ್ಮ ಸಮಾಜ - ಸರಕಾರ.. ಅಂದರೆ ನಾವೇ... 

ಜನಸಾಮಾನ್ಯರಾಗಿ ನಾವು.... ಮಧ್ಯಮವರ್ಗೀಯರಾದ ನಾವು ಇದಕ್ಕೆ ಯಾವ ಉಪಾಯ ಕಂಡುಕೊಳ್ಳಬಹುದು?? 

ನಾವೂ ನಮ್ಮ ಮಕ್ಕಳನ್ನು ಡಾಕ್ಟರನ್ನಾಗಿಸುವುದೇ ಸರಿಯೇನೋ !! 

May 27, 2012

"ತಡೆ"

"ತಡೆ" ಹೇಳದು ಕ್ರಿಯಾಪದವಾಗಿ ’ತಡಿ, ನಿಲ್ಲು, ತಡಕ್ಯ, ಕಾದು ನೋಡು’ ಹೇಳಲ್ಲ... ನಾಮಪದ ಇಲ್ಲಿ.  
"ತಡೆ" ಹೇಳದು "ತಡೆ ಕಟ್ಟದು" ಹೇಳದರ ಶಾರಟ್ ಫಾರಮ್ಮು.
ದೊಡ್ ಹೊಡತ ಹೇಳವು ಅಂದರೆ ...
ಹಾವಿನ ದ್ವೇಷಕ್ಕೆ ತಡೆ ಹಾಕದು... ವನ್ನಮನೀ ಮೂಢನಂಬಿಕೆ ಅನಿಸಿರೂವ ಪ್ರಾಯೋಗಿಕವಾಗಿ ಅದು ನಿಜ ಹೇಳಿ ಹಿರಿಯವು ಹೇಳತ... ಇದರ ಸತ್ಯಾಸತ್ಯತೆಗಳ ಬಗ್ಗೆ ಮಾಹಿತಿ ಇಲ್ಲೆ ಯಂಗೆ

 ಇದು ವಂದು ರೀತಿಯ ಮಾಟ ಮಂತ್ರ ಇದ್ದಾಂಗೇಯ ...
ನಾಗರಹಾವು ಆಕಸಿಮಿಕವಾಗಿ ಮೆಟ್ಟಿ ಹೋದರೆ (ತುಳಿದರೆ) ಅಥವ ಅದಕ್ಕೆ ತೊಂದರೆ ಕೊಟ್ಟರೆ ಅದಕ್ಕೆ ಸಿಟ್ಟಿರತು ದ್ವೇಷ ಇರತು ಹೇಳತ... ಅದು ಆ ತುಳಿದವನ್ನೇ ತೌರ್ಕ್ಯಂಡು (ಹಿಂಬಾಲಿಸಿ) ಬತ್ತು .... ದ್ವೇಷ ಇಟಗ್ಯಂಡು ಕಚ್ಚತು ಹೇಳಿ ನಂಬಿಕೆ...
ಆ ಹಿಂಬಾಲಿಕೆಯ ದಾರಿ ತಪ್ಪಿಸಲೆ ಮಾಟಗಾರರು ಮಾಡ ಮಂತ್ರ... ಆ ಮಂತ್ರದಿಂದ ಜಪಿಸಿ ಕೊಟ್ಟ ಮಣಿ ಅಥವ ಯಾವುದೋ ವಂದು ವಸ್ತುನ ಹಿಡಕ್ಯಂಡು ಓಡಾಡಿರೆ... ಅವನ ದಾರಿ ತಿಳೀದೇ ಹಾವಿಗೆ ದಾರಿ ತಪ್ಪೋಗತು ಹೇಳ ನಂಬಿಕೆ ಇದ್ದು... ಇದು ಸತ್ಯವೇ ಆಗಿಕ್ಕು ಹೇಳಲೆ ಪ್ರಮಾಣ ಇಲ್ದೋರೂವ ಯನಗಾದ ವಂದು ಅನುಭವ ಹೇಳಿರೆ ನಿಂಗಕೆ ಆಶ್ಚರ್ಯ ಆಗದ್ದೇ ಹೋಗತಿಲ್ಲೆ 

 ಹುಂ ಮತ್ತೊಂದು....ಈ ತಡೆ ಕಟ್ಟಿದ ಕೆಲವೇ ದಿನಗಳಲ್ಲಿ ಆ ಹಾವು ನರಳಿ ನರಳಿ ಸಾಯತು ಹೇಳಿ ನಂಬಿಕೆ ..(ಅಲ್ಲ ಎಷ್ಟ್ ದಿನಾ ಹೇಳಿ ಹೆದರಕ್ಯೋತ ಬದಕದು? ಅದಕೇಯ ಈ ’ತಡೆ’)
ಅದಕೇ ಈ ಕಥೆ... ನಾ ನೋಡಿದ್ದು... ಅರ್ಥ ನಿಂಗವು ಮಾಡಕ್ಯಳಿ ...ನಂಬದು ಬಿಡದು ನಿಂಗಕ್ಕಿಗೆ ಬಿಟ್ಟಿದ್ದು
  


 ಆ ಆರನೇತಿಗೆ ಹೋಪ ಮಾಣಿ ಆವಾಗ....
ದಿನಾ ಶಾಲೆಗೆ ಹೋಪಕಾರೆ ಬಪ್ಪಕಾರೆ ವಂದು ವಳದಾರಿ
(ಶಾರ್ಟ್ ಕಟ್) ಉಪಯೋಗಿಸ್ತಿದ್ಯ.... ಯೆಂತಕೆ ಅಂದ್ರೆ ಮೇನ್ ರೋಡಿಂದ ಹೋದರೆ ಸುಮಾರು ಅರ್ಧ ಕಿಲೋಮೀಟರ್ರು ಜಾಸ್ತಿ ಆಗತಿತ್ತು... ಬರೀ ಯಂಗ ಹುಡ್ರೊಂದೇ ಅಲ್ಲ ...ಈ ಸೈಕಲ್ ನವು.... ಸ್ಕೂಟರ್ ಬೈಕ್ ನವು ಅದೇ ವಳದಾರಿ  ಉಪಯೋಗಿಸ್ತಿದ್ದ... 


ವಂದಿನವಾ ಯಂಗ ಹುಡ್ರೆಲ್ಲ ಆಡಕ್ಯೋತ ಹೋಗತ ಇಪ್ಪಕಾರೆ ಹಿಂದಬದಿಂದ ಇಬ್ಬರು ಕುಂತ ಬೈಕು ಸರ್ರನೇ ಮುಂದೋತು ... ಏನೋ ಬೀಳಲಾಗಿದ್ದ ಯಂಗ ಹುಡ್ರೆಲ್ಲ ಹೆಂಗೆಂಗೋ ಸಂಭಾಳಿಸಗ್ಯಂಡು ನಗ್ಯಾಡತ ಇದಿದ್ಯ ಮನಸಲ್ಲೇ ಶಾಪ ಹಾಕ್ಯೋತವ... ವಬ್ಬಿಬ್ರು ದೊಡ್ದಕ್ಕೇ ಬಯ್ಯದ್ವನ ಬೌಶ.



 ಅಷ್ಟೊತ್ತಿಗೆ... ಮುಂದೆ ಹೋದ ಬೈಕಿನ ಬ್ಯಾಲೆನ್ಸ್ ತಪ್ಪತ ಅಥವ ಯೆಂತೋ ಆತು ಹೇಳಿ ಯಂಗಳ ಅಂದಾಜು.... ಬಿದ್ದ ಇಬ್ಬರೂವ... ಯಂಗಕ್ಕೆ ಖುಷಿ. ಯಂಗಳೆರೂನೂ ದೂಡಾಕಲೆ ಮಾಡಿದಿದ್ಯಲ.... ಬಿದ್ದೆ ಹದಾ ಹೇಳಿ ಓಡಕ್ಯತ್ತ ಮುಂದೆ ಹೋದರೆ.... ಬಿದ್ದವರಲ್ಲೇ ವಬ್ಬಂವಾ ಎದ್ದಕ್ಯಂಡು "ಹುಡ್ರಾ ಮುಂದೆ ಬರಬೇಡಿ ಹಾವೂ ಹಾವೂ" ಹೇಳಿ ಕೂಗದ..
ಯಂಗವೆಲ್ಲ ಅಲ್ಲೇ ನಿಂತ್ಯ.. ಹಾವ ನೋಡೇಬುಡವು ಹೇಳಿ ವನ್ನಮನೀ ಕುತೂಹಲ ಆದರೂ ಹೆದರಿಕೆ. ಅಷ್ಟೊತ್ತಿಗೆ ಬಿದ್ದ ಮತ್ತೊಬ್ಬವನೂ ಎದ್ ಬಂದ....ಹಾಂಗೇ ದಾರಿಲಿ ಹೋಗತಿದ್ದ ಮತ್ತಿಬ್ಬರೂ ಗಟಾರದ ಬದಿಗೆ ನೋಡಕ್ಯಂಡು "ದೊಡ್ ಹಾವೇಯ.. ಗಾಡಿ ಹತ್ತೋಯತ?" ಕೇಳದ



 ಆ ಇಬ್ಬರೂವ ತಡ ಮಾಡಿದ್ವಿಲ್ಲೆ "ಥೋ ..ಹೌದ" ಅಂದವೇಯ ಗಾಡಿ ಹತ್ತಿ ಗುರ್ ಗೆಡಿಸಗ್ಯಂಡು ಪರಾರಿ. ಯಂಗವೂ ಧೈರ್ಯ ಮಾಡಕ್ಯಂಡು ನೋಡಲೆ ಹೋದ್ಯ ಹಾವ... ಹಾವಿಗೆ ಪೆಟ್ಟೇನೂ ಆಗಿತ್ತಿಲ್ಲೆ ಕಾಣತು.... ಬುಸ್ ಬುಸ್ ಗೆಡತಿತ್ತು.... ಜನ ಕೂಡಿದ್ದ ನೋಡಕ್ಯಂಡು ಹೆದರಕೆ ಆಗಿರವು... ಬೈಕಿನವು ಹೋದ ಶಬ್ದನೂ ಆತ ಇಲ್ಯ ...ಅದೂ ಸರ ಸರನೆ ಮುಳ್ ಹಿಂಡ್ ಹಿಂದಬದಿಗೆ ಸರದೋತು... ಯಂಗವೂ ಮನಿಗೆ ಬಂದ್ಯ

 ಆವಾಗೆಲ್ಲವ ಬೆಳಗ್ಗೆ ಮಜ್ಜಾನ್ನ ಎರಡು ಹೊತ್ತೂ ಶಾಲೆ ಇರತಿತ್ತು... ಮಧ್ಯಾಹ್ನ ೧೧ ರಿಂದ ೨ ಗಂಟೆವರಿಗೆ ಮನಿಗೆ ಹೋಗಿ ಉಂಡಕ್ಯ ಬಪ್ಪಲೆ ಹೇಳಿ. ಮಧ್ಯಾಹ್ನ ಆನು ಬ್ಯಾಗನೇ ಹೊಂಟಿ... ಸಂತಿಗೆ ಯನ್ನ ದೋಸ್ತರು ಯೆಲ್ಲವ ಸೇರಕ್ಯಂಡ.. ಹೋಪಕಿರೆ ಅದೇ ದಾರಿಂದ ಹೋಪಲೆ ಹೆದರಿಕೆ ಆದರೂವ ವನ್ನಮನೀ ಕುತೂಹಲನಪ... ಹೋದ್ಯ...

 ಯಂಗವು ಆ ಜಾಗಕ್ಕೆ ಹೋಪಲೂ ಎದುರು ಬದಿಂದ ವಂದು ಬೈಕ್ ಬಪ್ಪಲೂ ಸರೀ ಆತು.ಆ ಹಾವು ಯೆಲ್ಲಿತ್ತ ಯೆಂತ ಸುಟ್ಟಿದ್ದ... ಬಡಕ್ಕನೆ ಬೈಕಿನ ಮ್ಯಾಲೆ ಹಾರಿದ್ದೊಂದ ನೋಡಿದ್ಯ... ಯಂಗವೆಲ್ಲ ದಿಕ್ಕಾಪಾಲು. !!

 ಆ ದಿನದ ಮ್ಯಾಲೆ ಶಾಲೆಗೆ ಹೋಪಕಾರೆ ಬಪ್ಪಕಾರೆ ದೊಡ್ದರಸ್ತೆಯಿಂದನೇ ಹೋಪದು ಬಪ್ಪದು ಮಾಡತಿದ್ಯ...ಮ್ಯಾಲಿಂದ ಮನೆಯವು ಆ ಬದಿಂದ ಹೋಗಡಿ ಹೇಳಿದಿದ್ವ ಇಲ್ಯ... ಹೆದರಿಕೆ.
೩ ೪ ದಿನ ಆಗಿತ್ತನ.. ನೆನಪಿಲ್ಲೆ... ಆ ದಿನ ಶಾಲೆ ಮಲ್ಲಿ ಪೊಕ್ಕ (ಪ್ರಕಾಶ ಹೇಳಿ ಅವನ ಹೆಸರು ಬಿಲ) ಹೊಸ ಸುದ್ದಿ ಹೇಳದ. "ಆ ಹಾವು ಸತ್ತೋಗದೆ ಇವತ್ತು ... ತಡೆ ಕಟಸೀರಂತೆ... ದಿನಾ ಹೋಗ್ ಬರೂ ಗಾಡಿಗೆಲ್ಲ ಹಾರತಿತ್ತಂತೆ" !


 ತಡ್ಯಲ್ ಆಜಿಲ್ಲೆ... ಮಾಸ್ತರ್ರಿಗೂ ಹೇಳದ್ದೇ ಹೋಗಿ ನೋಡೇಬುಡವು ಕಂಡಚು ವಂದ ಸಲವಾ... (ಮಾಸ್ತರೆಂತ ಯನ್ನ ಅಪ್ಪನ ಬಿಡಲೆ) ಶಾಲೆ ಬಿಟ್ಟು ಮನಿಗೆ ಹೋಪಾಕರೆ ನೋಡೇಬಿಡವು...ಹ್ಯಾಂಗೂ ಹಾವು ಸತ್ತೋಜು... ಹೆದರಿಕೆ ಇಲ್ಲೆ ಈಗ ಹೇಳಿ ಹೋದ್ಯ..... ಅಲ್ಲಿ ಸುಮಾರು ೨೫ - ೩೦ ಜನ ಸೇರಿದಿದ್ವೇನ. ಸತ್ತೋದ ಹಾವ ನೋಡಲೆ. 

ನೋಡಿರೆ ಆ ಮದಲನೇ ದಿನ ಹಾವನ ಮ್ಯಾಲೆ ಹತ್ತಿ ಬೈಕಿಂದ ಬಿದ್ದ ಇಬ್ಬರೂ ಇದ್ದಿದ್ದ ಅಲ್ಲಿ. ಎಲ್ಲರೂ ಸೇರಿ ಆ ಸತ್ತೋದ ಹಾವ ವಂದು ಗೋಣೀ ಚೀಲದಲ್ಲಿ ಹಾಕಿ ಆ ಬೈಕ್ ನವಕೆ ಕೊಟ್ವಪ.... ಅವು ಅದನ್ನ ಹಿಡಕ್ಯಂಡು ಗಾಡಿ ಮ್ಯಾಲೆ ಹೋಗೇಬುಟ... ಪಾಪ ಹಾವು ಕಂಡಚು ವಂದ್ಸಲವಾ 



 ಕಡೀಗೆ ಗೊತ್ತಾಗಿದ್ದೆಂತಪ ಅಂದರೆ... ಆ ಎರಡೂ ಜನ ಹಾವಿಗೆ ಗಾಯ ಮಾಡಿದವಿದ್ವಲೀ... ಅವಿಬ್ರೂ ಅದೇ ದಿನ ವಾಪಸ್ ಬಂದಿದಿದ್ವಡ... ಸಂತಿಗೆ ಯಾವನೋ ’ತಡೆ’ ಕಟ್ಟವನ ಕರಕ್ಯಂಡು. ಆ ಜಾಗದ ಮಣ್ಣೆಲ್ಲ ತುಂಬಕ್ಯಂಡು ಹೋಜ್ವಡ... ತಡೆ ಕಟ್ಟಸಿದ್ದ ಹೇಳಾತು... 

"ತಡೆ ಕಟ್ಟಿಸಿದ್ದಕ್ಕೇಯ ಮೂರ್ನಾಕೇ ದಿನದಲ್ಲಿ ಆ ಹಾವು ಸತ್ತೋತು.. ಇಲ್ದೋರೆ ಬಿಡತಿತ್ತಿಲ್ಲೆ"  ಹೇಳಿ ಊರಲ್ಲೆಲ್ಲ ಸುದ್ದಿ.....
ಹುಂ ಗೋಣಿ ಚೀಲದಲ್ಲಿ ತುಂಬಕ್ಯಂಡು ಹೋಗಿ ಆ ಹಾವಿಗೆ ಅಂತ್ಯಸಂಸ್ಕಾರನೂ ಮಾಡಿದ್ವಡ ಕಡಿಗೆ ಹೇಳಿ ಅಡಾಪಡಾ ಹೇಳಿದ್ದ....


 ಉಪಸಂಹಾರ:
೧) ಈಗ ... ಆ ಹಾವು ನಿಜವಾಗಲೂ ಪೆಟ್ಟಾಗಿ ಆ ಜಾಗ ಬಿಟ್ಟು ಹೋಪಲಾಗದ್ದೇ ಇದ್ದಿರವು..... ಅದಕೇ ಬೈಕಿನ ಶಬ್ದ ಆದಾಗೆಲ್ಲ ಮತ್ತೆ ಪೆಟ್ಟಾಗಬುಟ್ರೆ ಹೇಳಿ ಹೆದರಿಕೆ ಆಗತ ಇರವು..... ೩ - ೪ ದಿನ ಆಹಾರ ಇಲ್ಲದ್ದೇಯ .. ಮತ್ತೆ ಆ ಆದ ಗಾಯದ ನೋವಿಂದ ಸತ್ತಿರವು.
೨) ಖರೆಯಾಗಲೂ "ತಡೆ" ಹೇಳ ವಂದು ಮಂತ್ರ ಕೆಲಸ ಮಾಡಿರವು. ಯೆಂತಕೆ ಅಂದರೆ ಗಾಯ ಆದಾಂಗೆ ಕಂಡಿದ್ದಿಲ್ಲೆ ಆ ದಿನ. ನಿಜವಾಗಲೂ ದ್ವೇಷ ಸಾಧಿಸ್ತ ಇತ್ತಗರವು.... ತಡೆ ಕಟ್ಟಿಶಿ ತೆಗದ.  ಮನುಷ್ಯ ಎಷ್ಟು ಸ್ವಾರ್ಥಿ.... 
೩) ನಿಜವಾಗಲೂ ಮನುಷ್ಯ ನಾಗರ ಪಂಚಮಿ ಹೇಳಿ ಪೂಜೆ ಮಾಡತ....... ನಾಗಸೇವೆ ಮಾಡತ (ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ) ನಾಗಮಂಡಲ ಮಾಡತ ಆದರೂ ನಿಜದ ನಾಗರ ಕಂಡರೆ ಹೆದರತ.... ವಂದು ಕಾಗೆನ... ನಾಯಿಯ ರಸ್ತೆ ಮ್ಯಾಲೆ ಪೆಟ್ಟಾಗಿ ಬಿದ್ದಿದ್ದ ನೋಡಿರೆ ಪಾಪ ಅದಕೆ ನೀರು ಹಾಲು ಹಾಕಿ ಕರುಣೆ ತೋರಿಸ ಜನ, ನಾಗರಹಾವು ಸಾಯಲ್ ಬಿದ್ರೂ ಹಾಲು ನೀರು ಇಲ್ಲದ್ದೇ ಸಾಯಾಂಗೆ ಮಾಡಿದ್ವಲೀ... 

ಮೂ.ಪ್ರೇ.(ಮೂಲ ಪ್ರೇರಣೆ) - ಫೇಸ್ ಬುಕ್ ಮತ್ತು ನಿಚ (ನಿರಂತರ ಚಲನೆಯಲ್ಲಿರು ಖ್ಯಾತಿಯ ಪ್ರಶಾಂತ) 
ಧನ್ಯವಾದಗಳು - 
೧) ಈ  ಘಟನೆಯನ್ನು ನಿಜವಾಗಲೂ ಕಥೆಯಾಗಿಸಿದ ಮೂ.ಪ್ರೇ (ಮೂಕಪ್ರೇಕ್ಷಕರು) - ಹರಿ, ಧರ್ಮಿ, ಲೋಕೇಶಣ್ಣ ಮತ್ತು ಇತರರು 
೨) ಈ ಕಥೆ ಬರಿಯಕಾರೆ ನಿಜವಾಗಲೂ  ಮೂಪ್ರೇ ಆಗದ್ದೇ ಅಡ್ದಗಾಲಾಕಿ ತ್ರಾಸು ಕೊಟ್ಟ ಅದೇ ಟೀಂಮು.

Apr 18, 2012

ಶೃದ್ಧಾಂಜಲಿ

ದಿನ ಯಾರೋ ಒಬ್ಬರ ಟೇಪ್ ರೆಕಾರ್ಡರ್ ಒಂದನ್ನು ರಿಪೇರಿಗೆ ಅಂತ ತಂದಿದ್ದೆ ...
ನಾನೇನೂ ಪಕ್ಕಾ ನುರಿತ ರಿಪೇರಿಯವನಾಗಿರಲಿಲ್ಲ... ಸಣ್ಣ ಪುಟ್ಟ ರಿಪೇರಿಯ ಹುಚ್ಚು ನನ್ನಲ್ಲಿತ್ತು .... ಅದನ್ನು ಸರಿ ಮಾಡುವೆನೆಂಬ
ವಿಶ್ವಾಸವಿಲ್ಲದಿದ್ದರೂ ಮತ್ತೆ ಜಾಸ್ತಿ ಕೆಡಿಸುವುದಿಲ್ಲವೆಂಬ ಆತ್ಮವಿಶ್ವಾಸ ನನ್ನಲ್ಲಿರುತ್ತಿತ್ತು. ಅದನ್ನು ಕೊಡುವ ಗ್ರಾಹಕನಿಗೆ, 'ಇವ ರಿಪೇರಿಮಾಡುವ'ನೆಂಬ ವಿಶ್ವಾಸ ವಿಲ್ಲದಿದ್ದರೂ "ಒಂದು ವೇಳೆ ಸರಿ ಹೋದರೆ ಪುಕ್ಕಟೆಯಲ್ಲಿ ಆಯ್ತಲ್ಲ" ಎಂಬ ಭಾವವಿರುತ್ತಿತ್ತು. ಅಂದರೆ ಒಂದು ಲೆಕ್ಕದಲ್ಲಿ ಇಬ್ಬರೂ ತಮ್ಮ ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಿದ್ದೆವು ಎನ್ನಬಹುದು !!


ರವಿವಾರವಿರಬೇಕು, ಹಾಗೆ ಮಧ್ಯಾಹ್ನ ಊಟ ಮಾಡಿ ಅದನ್ನು
ಬಿಚ್ಚಿ 'ನಾ-ದುರಸ್ತಿಯ' ಕಾಯಕದಲ್ಲಿ ತೊಡಗಿ ಚಂಚಲವಾದ ಮನಸ್ಸನ್ನು ಹತ್ತಿಕ್ಕಲಾಗದೆ ಬಿಚ್ಚಿದ್ದ ವಸ್ತುಗಳನ್ನು ಹಾಗೆ ಬಿಟ್ಟು ಎಲ್ಲೋ ಹೊರಟು ಹೋದೆ
 
ಸಂಜೆ ವಾಪಸ್ಸು ಬಂದು ನೋಡುವಾಗ ಬಿಚ್ಚಿಟ್ಟಿದ್ದ ಟೇಪ್ ರೆಕಾರ್ಡರ್ ಜಾಗದಲ್ಲಿ ಇರಲಿಲ್ಲ. ಸೀದಾ ಆಯಿಯಲ್ಲಿ ಕೇಳಿದೆ. "ಅವ್ರುಏನೋ ಚೊಕ್ಕ ಮಾಡ್ತಾ ಇದ್ದಿದ್ರು ನೋಡು" ಎಂಬ ಉತ್ತರ ಬಂತು.


ಅಪ್ಪನಲ್ಲಿ ಕೇಳಿದೆ - "ಅಪ್ಪಯ್ಯ, ಇಲ್ಲಿ ಬಿಚ್ಚಿಟ್ಟಿದ್ದ ಟೇಪ್ ರೆಕಾರ್ಡರ್ ಎಲ್ಲೋತು?" "ಹರಡ್ಕ ಬಿದ್ದಿತ್ತು, ತೆಗದು ಚೀಲದಲ್ಲಿ ಹಾ
ಕಿಟ್ಟಿದ್ದೆ ನೋಡು ಗಿಳಿಗುಟ್ಟಕ್ಕೆ" ಅಪ್ಪಯ್ಯನ ಉತ್ತರ.
ಕಿರಾಣಿ ತರುವ ಆರಾಮ ಕುರ್ಚಿ ಅರಿವೆಯಿಂದ ಮಾಡಿದ್ದ ಚೀಲವದು. ಟಿಪಿಕಲ್ ಹವ್ಯಕರ ಮನೆಗಳ ಚೀಲ ... ಗಿಳಿಗುಟ್ಟಕ್ಕೆನೇತಾಡುತ್ತಿತ್ತು.


ಸಿಟ್ಟು ನೆತ್ತಿಗೇರಿತು. ನಮ್ಮದಲ್ಲದ ವಸ್ತು .. ಒಂದೋ ಎರಡೋ ಸ್ಕ್ರೂ ಕಳೆದರೂ ದಂಡ ತೆರುವ.. ಮರ್ಯಾದೆ ಪ್ರಶ್ನೆ.. !!
"ಥೋ... ಅಪ್ಪಯ್ಯ ಎಂತಕೆ ತೆಗದ್ಯ?" ಅಪ್ಪಯ್ಯನ ಮೇಲೆ ಹರಿ ಹಾಯ್ದೆ. "ಹರಡ್ಕ ಬಿದ್ದಿತ್ತಾ" ಅಪ್ಪಯ್ಯನ ಸಮಝಾಯಿಷಿ. "ಮಳ್ಳನಾ .. ಒಂದು ಸ್ಕ್ರೂ ಕಳೆದರೂ ಹೋತು.... ತಂದ್ ಕೊಡ್ತ್ಯಾ? ಮಳ್ಳಲಾ ಅಪ್ಪಯ್ಯ... ಬುದ್ದಿ ಇಲ್ಯನಾ.. ಹ್ಯಾಪನ ಹಾಂಗೆ ಆತಲ
... ಥೋ " ಸಿಟ್ಟು ವಿವೇಕ ಕೆಡಿಸಿತ್ತು.... ಅವಿವೇಕ ಅಪ್ಪನೆಂದೂ ನೋಡಲಿಲ್ಲ.. ಮೂರ್ಖನಾಗಿದ್ದೆ... 
 
ಅಷ್ಟರಲ್ಲೇ ಅಪ್ಪ ಚೀಲ ತೆಗೆದು ಸ್ಕ್ರೂ ಹುಡುಕಲು ಪ್ರಾರಂಭಿಸಿದ್ದರು ಪಾಪ. ಅದರಲ್ಲಿ ನಿಜವಾಗಲೂ ಒಂದು ಮುಖ್ಯವಾದ ಸ್ಕ್ರೂ ಸಿಗಲಿಲ್ಲ. ಮತ್ತೆ ವಟ ವಟ ಅಂತ ಅಪ್ಪನಿಗೆ ಬಯ್ಯುತ್ತಲೇ ಇದ್ದೆ. ಅಪ್ಪ ಇಡೀ ಜಗುಲಿಯಲ್ಲಿ ಪೊರಕೆ ಹಿಡಿದು ಗುಡಿಸಿ ಕಸಗಳ ನಡುವೆಯೂ ಹುಡುಕತೊಡಗಿದರು ಪಾಪ.
ತುಟಿ ಪಿಟಕ್ಕೆಂದು ಮಾತನಾಡದೆ - " ಅದೆಲ್ಲೋ ಇಲ್ಲೇ ಇರ್ತು, ನಂಗೆ ಗೊತ್ತಾಯ್ದಿಲ್ಲೆ " ಎಂದರು ಕ್ಷಮಾಪಣೆಯ ದನಿಯಲ್ಲಿ ಅಷ್ಟೇ.


ಎಷ್ಟೋ ನಿಮಿಷ ಹುಡುಕಾಟದ ನಂತರ ಮಹಾ ಸ್ಕ್ರೂ ಅಪ್ಪನಿಗೆ ಸಿಕ್ಕಿತು. ಅವರಿಗೆ ಇವನಿಂದ ಕಾಟ ತಪ್ಪಿತಲ್ಲ ಎಂದು ಖುಷಿಯಾಯ್ತೋ .. ಗೊತ್ತಿಲ್ಲ .. ನನಗೆ ಮಾತ್ರ ಆಗ ನನ್ನ ವಿವೇಕ ಹಿಂದಿರುಗತೊಡಗಿತ್ತು . ಆದರೆ ಕಾಲ ಮಿಂಚಿತ್ತು. ಮಾತು ಆಡಿದರೆಹೋಯಿತು .. ಮುತ್ತು ಒಡೆದರೆ ಹೋಯಿತು ಎಂಬ ಹಾಗೆ - ನಾನು ಏನೇನೋ ಬಯ್ದಿದ್ದೆ. ಮಗನ ಹುಚ್ಚಾಟ ವನ್ನು ನೋಡಿ - 'ತಾಕೊಟ್ಟ ಸಂಸ್ಕೃ
ತಿ' ಇದೆಯಾ ಎಂದು ಆಶ್ಚರ್ಯಪಟ್ಟಿರಬೇಕು ಅಪ್ಪ. . ನಾನು "ಸಾರೀ" ಎಂದೆನಾದರೂ ಹೆತ್ತ ತಂದೆಗೆ ಬಯ್ದಿದ್ದಕ್ಕೆ ಕ್ಷಮೆ ಇದೆಯಾ? ಸಮಾಧಾನವಂತೂ ಆಗಿಲ್ಲ ನನಗೆ.

ಇದಾದ ಕೆಲವೇ ದಿನಗಳಲ್ಲಿ ನಾ ಊರು ಬಿಟ್ಟಿದ್ದೂ - ಅಪ್ಪನ ಕಾಯಿಲೆ ವೃದ್ದಿಸಿದ್ದೂ - ಅವರು ನಮ್ಮನ್ನಗಲಿದ್ದೂ ಆಗಿ ಹೋಯಿತು. 


 ಒಂದೇ ಒಂದು ಸಲ ಅವರನ್ನಪ್ಪಿ "ಅಪ್ಪಯ್ಯ ತಪ್ಪಾತು... I'm sorry" ಎಂದು ಚಿಕ್ಕ ಮಗುವಿನಂತೇ ಅವರ ಕೆನ್ನೆಯ ಮೇಲೊಂದು ಮುತ್ತಿಡಬೇಕೆಂಬ ಬಯಕೆ ಬಯಕೆಯಾಗಿಯೇ ಉಳಿದುಹೋಗಿದೆಯೀಗ.
 

ನಿಮ್ಮಗಳ ಕಾಟವೇ ಬೇಡ, ಮಕ್ಕಳು ದೊಡ್ದವರಾಗುವಲ್ಲಿಯವರೆಗೆ ತಾವಿರಬಾರದು ಎಂದುಕೊಂಡಿರಾ ಅಪ್ಪಾ?
sorry ಅಪ್ಪಯ್ಯಾ.

ಅಜ್ಜನ ಪೆನ್ನು

ಅಜ್ಜನ ಮೇಲೆ ಅಷ್ಟೇನೂ ಪ್ರೀತಿಯಿರಲಿಲ್ಲ ನನಗೆ. ಬಹುಷಃ ಅವನ ಹತ್ತಿರ ಇರುವ ಒಂದೇ ಒಂದು ಹೀರೋ ಇಂಕ್ ಪೆನ್ನು ನನ್ನ ಆಕರ್ಷಣೆಗೆ ಕಾರಣವಾಗಿತ್ತೇನೋ ..!! ದಿನಕ್ಕೆ ಒಮ್ಮೆಯೂ ಬರೆಯುವ ಮಹಾ ಬರಗಾಲ ಅವನಿಗೇನೂ ಇರಲಿಲ್ಲ...... ಆದರೂ ಆ ಪೆನ್ನನ್ನು ಆತ ಮಕ್ಕಳಾರಿಗೂ ಸಿಗದ ಗೋದ್ರೆಜ್ ಕಪಾಟಿನ ಮೇಲಿದ್ದ ಕೂಜಳ್ಳಿ ಮಾಣಿ ಪೆಟ್ಟಿಗೆಯಲ್ಲಿಡುತ್ತಿದ್ದ.

ಒಮ್ಮೆ ಅಣ್ಣ ಆ ಪೆನ್ನನ್ನು ಕದ್ದು ತಂದು ಏನೋ ಬರೆಯುತ್ತಿದ್ದ. ನನಗೋ ಖುಷಿಯೋ ಖುಷಿ. ರಂಪ ಮಾಡಿ ಅವನಿಂದ ಇಸಗೊಂಡೆ. ನನ್ನ ದುರ್ದೈವವೋ ಎಂಬಂತೆ ನನ್ನ ಕೈಲ್ಲಿರುವುದನ್ನು
ಅಜ್ಜ ಕಂಡುಬಿಟ್ಟ.
ತಗಳಿ, ರಂಪಾಟ ಶುರುವಾಗಿದ್ದೇ ಅಲ್ಲಿಂದ.

ಸೀದಾ ಆಯಿಯಲ್ಲಿ ದೂರು. ಅಜ್ಜನಿಗೆ ನನ್ನ ಬಯ್ಯುವ ಅಥವಾ ಶಿಕ್ಷಿಸುವ ಧೈರ್ಯವಿರಲಿಲ್ಲವೋ - ನೈತಿಕತೆಯಿರಲಿಲ್ಲವೋ ಗೊತ್ತಿಲ್ಲ.... ಪ್ರತೀ ವಿಷಯಗಳಲ್ಲೂ ನನ್ನ ಮತ್ತು ಅಜ್ಜನಿಗೆ ವರಟಾಗುತ್ತಿತ್ತು.... ಆಯಿ ಚಂಡೀ ಚಾಮುಂಡಿಯಾಗಿ ಬಂದಳು.
" ಹೇಳು ಎಂತಕೆ ತೆಗ್ದೆ?" ಧುಧುಂ ... ಬಿತ್ತು ಬೆನ್ನ ಮೇಲೆ ಎರಡು. ಅದು ಹಾಗೇ  ಅಜ್ಜನ ಮೇಲಿನ ಸಿಟ್ಟಿನಿಂದ ಬಿದ್ದ ಪೆಟ್ಟುಗಳು. ಇಂದಿಗೂ ಅಂದುಕೊಳ್ಳುತ್ತೇನೆ.
ಆ ಪೆಟ್ಟು ನನಗಲ್ಲ ಅಜ್ಜನಿಗೆ.... ಮಾವನೊಬ್ಬನಿಗೆ ಸೊಸೆಯಿಂದ ಬಿದ್ದ ಪೆಟ್ಟುಗಳವು!!
ನೋವು ತಡೆಯಲಾಗಲಿಲ್ಲ. ಅಜ್ಜನ ಎದುರು ಅಳಲೂ ಒಂಥರಾ "ಮರ್ಯಾದೆ ಪ್ರಶ್ನೆ" ಎಷ್ಟೇ ತಡಕೊಂಡರೂ ಕಣ್ಣಲ್ಲಿನ ನೀರು ಉಕ್ಕಿ ಹರಿಯುವುದನ್ನು ತಡೆಯಲಾಗಲಿಲ್ಲ.
ಮೊದಲು ಸತ್ಯವೇ ಹೊರಬಿತ್ತು ನನ್ನ ಬಾಯಿಂದ. "ಅಣ್ಣ ತಂದು ಕೊಟ್ಟ. ನಾ ತೆಗದಿದ್ದಲ್ಲ , ಅಣ್ಣ".
ಆಯಿಯ ಕೈ ಅಣ್ಣನ ಮೇಲೆ ಹರಿ ಹಾಯತೊಡಗಿತ್ತು. "ಅಜ್ಜನ ಪೆ
ನ್ನು ನಿಂಗಕ್ಕೆ ಎಂತಕ್ರ, ನಿಂಗಕ್ಕೆ ಎಂತ ಪೆನ್ನಿಗೆ ಗತಿ ಇಲ್ಯ? ಆ ಪೆನ್ನ್ ಎಂತಕೆ ತೆಗ್ದೆ ಹೇಳು" ನನ್ನ ಡಬಲ್ ಪೆಟ್ಟು ಅವಂಗೆ ಬಿತ್ತು. ಬೀಳ್ತಾನೆ ಇತ್ತು.
ಆ ಸಣ್ಣ 9 ನೇ ವಯಸ್ಸಿನ ನನ್ನ ಮನಸ್ಸಲ್ಲಿ ಆಗ ಏನು ನಡೆಯಿತೆಂಬುದನ್ನು ನಾನೀಗ ವರ್ಣಿಸಲಾರೆ. ಅಣ್ಣನಿಗೆ ಬೀಳುತ್ತಿದ್ದ ಪೆಟ್ಟಿನ ನೋವಿನಿಂದ ಆದ ಅವನ ಮುಖ ನೋಡಿ ಅಯ್ಯೋ ಅನಿಸಿಹೋಗಿತ್ತು. ಪಾಪ ಅನಿಸಿತ್ತು.... ನಂಗೆ ಪೆಟ್ಟು ಬಿದ್ದರೆ ಸಹಿಸಬಲ್ಲೆ ಅಣ್ಣ ಸಹಿಸಲಾರ ಪಾಪ ಅನಿಸಿಹೋಯಿತು.....ಒಂದೇ ಸಮ ಅಳುತ್ತಲೇ ಕೂಗಿದೆ -
" ಅವಂಗೆ ಹೊಡ್ಯಡದೇ, ತೆಗ್ದದ್ದು ನಾನೇಯಾ"
ಮತ್ತೆ ಆಯಿ ನನ್ನ ಮೇಲೆ ವಕ್ಕರಿಸಿ ಮತ್ತೆರಡು ಬಾರಿಸಿ ಪೆನ್ನು ಕಿತ್ತುಕೊಂಡಳು.
ಆ ಅಳು ಸೇರಿದ ಕೂಗಿನಲ್ಲಿ ಅಣ್ಣನ ಮೇಲಿನ ವಾತ್ಸಲ್ಯವಿತ್ತಾ? ಅಥವಾ ನನ್ನ ಮನಸ್ಸು ಅಷ್ಟೊಂದು ಮುಗ್ಧವಾಗಿತ್ತಾ ? ಅಣ್ಣನ ನೋವನ್ನು ನನ್ನ ಮನಸ್ಸು ಅನುಭವಿಸುತ್ತಿತ್ತಾ ?
ಇಷ್ಟೆಲ್ಲಾ ಆದರೂ ನನಗಿಂತ 5 ವರ್ಷ ದೊಡ್ಡವನಾದ ಅಣ್ಣ ಒಂದೂ ಮಾತಾಡದಿರುವುದು ಆಗ ಆಶ್ಚರ್ಯವಾಗಿರಲಿಲ್ಲ.!! ಅವನ ಮನಸ್ಸು ಅಷ್ಟೊಂದು ಮಾಗಿತ್ತಾ? ಅಥವಾ ಆಗಲೇ ಅವನು ಬದುಕಲು ಕಲಿತಿದ್ದನಾ? ಈಗಲೂ ಉತ್ತರ ಸಿಗದ ಪ್ರಶ್ನೆಗಳು

ಚಿಕ್ಕ ಮನಸ್ಸು ಎಷ್ಟೊಂದು ಮುಗ್ಧವಾಗಿರುತ್ತದೆ, ಎಲ್ಲರ ಮೇಲೆ ಅಕ್ಕರೆ ವಾತ್ಸಲ್ಯ ಇರುತ್ತಲ್ಲ ...ಆ ಪುಟ್ಟ ಹೃದಯ ಎಲ್ಲರನ್ನೂ ವಂದೇ ತರ ನೋಡುತ್ತಲ್ಲ..... ಮಕ್ಕಳಿದ್ದಾಗ ನಮಗೆ ಹಿರಿಯರು ಬಯ್ದಿದ್ದಕ್ಕೆ ನಾವು ಬೇಸರಪಟ್ಟುಕೊಂಡಿದ್ದಿಲ್ಲವಲ್ಲ !! ಈಗ ಯಾಕೆ ಬೇಜಾರಾಗುತ್ತದೆ?? !!


ಜೊತೆಗೇ ವಂದೇ ರಕ್ತ ಹಂಚಿಕೊಂಡು ಹುಟ್ಟಿದ ತಮ್ಮದೇ ಕರುಳಿನ ಕುಡಿ... ಮೊಮ್ಮಕ್ಕಳಿಗೆ ಕೊಡುವ ಪ್ರೀತಿಯಲ್ಲೂ ತಾರತಮ್ಯ ಇರಬಹುದಾ ಎಂಬ ಸಂಶಯವೂ ಇದೆ. ಕೇಳುವುದ್ಯಾರಲ್ಲಿ ??!!

ಅಪಶಕುನ

ಪ್ಪನಿಗೆ ಅಷ್ಟೇನೂ ವಯಸ್ಸಾಗಿರಲಿಲ್ಲ, ಆದರೆ 36 ನೇ ವಯಸ್ಸಿನಿಂದ ಕಾಡಿದ ಡಯಾಬಿಟೀಸ್, ಬಿ.ಪಿ. ಅವರನ್ನು ಹಣ್ಣಾಗಿಸಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ಕಾಲಿನ ಗಾಯದ ಆಪರೆಶನ್ನಿಗಾಗಿ ಮಲಗಿದ್ದರು. ನಾನು ಪಿ.ಯು.ಸಿ. ಓದುವ ಹುಡುಗ ಆಗ. ಮನೆಯಲ್ಲಿ ಇದ್ದೆ.
ಅಮ್ಮ ಹೇಳಿದ್ದಳು "ದಿನಾ ಸಂಜೆ ದೇವರ ದೀಪ ಮಾತ್ರ ತಪ್ಪಿಸಡ ತಮಾ"
ಅದರಂತೆ ಆ ದಿನ ಕೂಡ ದೀಪ ಹಚ್ಚುತ್ತಲಿದ್ದೆ. ಅಪ್ಪ ನೆನಪಾದರು. ಅಪ್ಪ 'ನಮ್ಮ ಬಿಟ್ಟು ಹೋಗಿಬಿಟ್ರೆ' ಎಂಬ ಭಯ ಮೂಡಿ ಕಣ್ಣೀರು ಬಂತು.

"ದೇವರೇ ನನ್ನ ಭವಿಷ್ಯ ಹಾಳಾದರೂ ಚಿಂತಿಲ್ಲ - ಅಪ್ಪನ ಬದುಕಿಸು" ಎಂದೇ ಬೇಡಿದೆ.
ಕಣ್ಣೀರಿನ ಒಂದು ಹನಿ ದೀಪದ ಮೇಲೆ ಬಿದ್ದು ದೀಪ ಇನ್ನೇನು ಆರಿತು ಎಂದು ಕಳವಳಗೊಳ್ಳುವಷ್ಟರಲ್ಲಿ ಮತ್ತೆ ಉರಿಯಿತು. ಸಮಾಧಾನದ ನಿಟ್ಟುಸಿರು ಬಿಟ್ಟೆ. ಅಪ್ಪ ಒಂದೇ ವಾರದಲ್ಲಿ ಮನೆಗೆ ಬಂದರು -
ಆದರೆ ಆ ವರ್ಷದ ಪರೀಕ್ಷೆಯಲ್ಲಿ ನಾ ಫೇಲಾದೆ !!!.

5-6 ವರ್ಷಗಳ ನಂತರ ಮತ್ತೆ ಅಪ್ಪನ ಸ್ಥಿತಿ ಹದಗೆಟ್ಟಿತು, ಈ ಸಲ ಹೃದಯಾಘಾತ. ಹೃದಯ ಚಿಕಿತ್ಸೆಗಾಗಿ (open heart surgery) ಮಂಗಳೂರಿಗೆ ಹೋಗುವ 2 ದಿನ ಮುಂಚೆ ಅ
ಮ್ಮ ಹೇಳಿದಳು
"ತಮಾ ಆ ಕೆಲಶಿಗೆ ಹೇಳಿಕ್ಕಿ ಬಾ, ಅವರ ಕೂದಲು ಕಟ್ ಮಾಡ್ಸವಡ".
ನಾನು ಯಾವ್ದೋ ಕೆಲಸದ ನಿಮಿತ್ತ ಬೆಳಗಿನ ವೇಳೆಯಲ್ಲಿ ಹೋಗಲಾಗಲಿಲ್ಲ, ಸಂಜೆ ಹೊರಟಾಗ ಅಮ್ಮ ಬೇಡ ಅಂದರೂ ಕೇಳದೆ ಹೋಗಿ ಹೇಳಿ ಬಂದೆ. (ಹಳ್ಳಿಗರು ಸಂಜೆಯ ಸಮಯದಲ್ಲಿ ಕೆಲಶಿಯ ಕರೆಯುವುದು ಬಿಡಿ, ಮಾತನ್ನಾಡಿಸುವುದೂ ಇಲ್ಲ, ಅದು ಮೂಢನಂಬಿಕೆ) ಮರುದಿನ ಕೆಲಶಿ ಬಂದು ಮುಂಡನ ಮಾಡಿ ಹೋದ.
ಆಗೇ ಸುಮಾರು ದಿನಗಳಿಂದ ಸುಟ್ಟಗಣ್ಣ ಹಕ್ಕಿ (ಒಂದು ರೀತಿಯ ವಿಚಿತ್ರ - ಭಯಗೊಳಿಸುವ ಧ್ವನಿಯಲ್ಲಿ ಕೂಗುವ ಹಕ್ಕಿ ಎಂದು ಅಮ್ಮ ಹೇಳಿದ್ದು - ನಾ ಕೇಳಿದ್ದು, ನೋಡಿಲ್ಲ) ಪದೇ ಪದೇ ಕೂಗುತ್ತಿತ್ತು. ಅದು ಕೂಗಿದರೆ ಯಾರಿಗೋ ಪ್ರಾಣಭಯವಿದೆ ಎಂಬರ್ಥವಂತೆ.

ಅದೇ ಮರುದಿನ ಮಂಗಳೂರಿನ ಆಸ್ಪತ್ರೆಗೆ ಅಪ್ಪನನ್ನು ಕರೆದುಕೊಂಡು ಹೋಗಿ - ಆಪರೇಶನ್ ಮುಗಿದಿದೆ ಎಂದು ಡಾಕ್ಟರು ಹೇಳಿದಾಗ ನಾವೆಲ್ಲ ಸರಿಯಾಗಿ ಉಸಿರಾಡಿದ್ದೆವು. ಆದರೆ ವಿಧಿ ಲಿಖಿತ ಏನಿತ್ತೋ ಬಲ್ಲವರಾರು?. ಅಪ್ಪ ಚೇತರಿಸಿಕೊಳ್ಳಲಿಲ್ಲ. ಪೂರಾ 18 ಬಾಟಲು ರಕ್ತ ಕೊಟ್ಟರೂ ಅಪ್ಪನ ರಕ್ತಸ್ರಾವ ನಿಲ್ಲಲಿಲ್ಲ. ಮತ್ತೆ ದುಗುಡ ನಮ್ಮನ್ನಾವರಿಸಿತ್ತು. ಮರುದಿನ ಬೆಳಿಗ್ಗೆ ಅಲ್ಲೇ ಪಕ್ಕದ ಗಣೇಶನ ಗುಡಿಗೆ ಅರ್ಚನೆ ಮಾಡಿಸಲೆಂದು ಹೋದೆವು ನಾನು - ಅಮ್ಮ ಜೊತೆಯಲ್ಲಿ ಅಣ್ಣ. ಗುಡಿಯಲ್ಲಿ ಪೂಜೆಯ ವೇಳೆ ಭಟ್ಟರು ತೆಂಗಿನ ಕಾಯಿ ಒಡೆಯುವಾಗ ಒಂದು ಕಾಯಿಕಡಿ ಮಗುಚಿ ಬಿತ್ತು. ತಕ್ಷಣ ನಾನು ಅಮ್ಮನ ಮುಖ ನೋಡಿದ್ದೂ - ಅಮ್ಮ ಅಣ್ಣನಮುಖ ನೋಡಿದ್ದೂ -ಅಣ್ಣ ನನ್ನ ಮುಖ ನೋಡಿದ್ದೂ ಆಗಿ ಹೋಯಿತಲ್ಲ. ಇದು ಮನಸ್ಸಿನ ಭ್ರಮೆಯೇ?
ಮರುದಿನ ಅಪ್ಪ ನಮ್ಮನ್ನಗಲಿದರು .ಆಯಿ ಅಳಲಿಲ್ಲ. "ತಮಾ ಬೆಳಗ್ಗೆನೇ ಗೊತ್ತಾಗಿತ್ತು ಬಿಡು" ಅಂದಳಷ್ಟೇ.
ಈಗ ಯೋಚಿಸುತ್ತಿದ್ದೇನೆ....
ಈ ಮೂಢನಂಬಿಕೆಗಳು ನಿಜವಾ? ನಂಬಲಹ್ರವಾ? ಆ ಹಕ್ಕಿ ನಿಜವಾಗಲೂ ಅಪಶಕುನದ ಹಕ್ಕಿಯಾ? ತೆಂಗಿನ ಕಾಯಿ ಮಗುಚಿಬೀಳುವುದೂ ಒಂದು ಪೂರ್ವ ಸೂಚನೆಯಾ?? ಪೂರ್ವಜರು ತಮ್ಮ ಅನುಭವದಿಂದ ಈ ಎಲ್ಲ ನಂಬಿಕೆಗಳನ್ನು ಪಾಲಿಸಿಕೊಂಡು ಬಂದಿದ್ದರಾ? ನಾನು ಫೇಲಾಗಲು - ಅಪ್ಪ ನ ಸಾವಿಗೆ ಅವೆಲ್ಲ ಮುನ್ಸೂಚನೆಗಳಾಗಿದ್ದವಾ? ಅಗೋಚರ ಶಕ್ತಿಯೊಂದು ಇಡೀ ಜ
ಗದ ಜೀವಕೋಟಿಯ ನಿಯಂತ್ರಿಸುತ್ತಿದೆಯಾ? ಒಂದೂ ಅರ್ಥವಾಗುತ್ತಿಲ್ಲ.

ದಾಡ್ ಪೀಡ್

ಸೋ ಅ೦ತ ಮಳೆ ಸುರಿಯುತ್ತಿತ್ತು. ಗೋಪಾಲಭಟ್ಟರು ತಾಳಿಸಿದ ಹಲಸಿನ ಕಾಯಿ ಹಪ್ಪಳ, ಕಾಯಿಬಾಗ ಮೆಲುಕಾಡಿಸುತ್ತಮಳೆಯನ್ನು ನಿಲ್ಲಿಸಲು ಸಾಧ್ಯವಿದೆಯೇ ನೋಡಿದರು.ಮನೆಯ ಹೆ೦ಗಸರು- ಮಕ್ಕಳೆಲ್ಲ ಹೊಳ್ಳಿಯ ಮೇಲೆ ಕ೦ಬಳಿ ಹೊದ್ದುಕೊ೦ಡು ಕತೆ ನಡೆಸಿದ್ದರು. ಭಟ್ಟರ ಅಜ್ಜಿ - ಮುದುಕಿ - ಬೇಜಾರಿಲ್ಲದೇ ಕಾಕಣ್ಣ ಗುಬ್ಬಣ್ಣನ ಕತೆಯನ್ನು ಹೇಳುತ್ತಿದ್ದಳು. ಮಳೆ ಹೊಳವಾಗುವ ಲಕ್ಷಣವೇ ತೋರಲಿಲ್ಲ.
ಅ೦ತೂ ತೋಟಕ್ಕೆ ಹೋಗಿ ಕಾರಿಗೆಗಳಲ್ಲಿ ನೀರು ನಿ೦ತಿತೋ ಹೇಗೆ, ಬರಣಗಳಲ್ಲಿ ನೀರು ನೆಲೆಸಿ ಮರದ ಬುಡಕ್ಕೆ ಹಾಕಿದ ಗೊಬ್ಬರಗಳನ್ನು ತೊಳೆಯಿತೋ ಹೇಗೆ - ಎ೦ದು ನೋಡಿಕೊ೦ಡೂ ಬರಲೂ ಸಾಧ್ಯವಿಲ್ಲವೆ೦ದು ಅವರಿಗೆ ತೋರಿತು. ಏನೇ ಆದರೂ ಇ೦ದು ಸೋರಕಾಲ ಆಚೆಗೆ ಕಾಲು ಹಾಕುವುದೇ ಇಲ್ಲವೆ೦ದು ನಿಶ್ಚಯಿಸಿ ಕವಳ ಜಗೆದರು. ಕೊಟ್ಟೆಕಡ್ಡಿ ಕೆತ್ತಲೂ ಮನಸ್ಸಾಗಲಿಲ್ಲ. ಇನ್ನೇನು ಮಾಡುವುದು? ಕೇರಿಯ ಗ್ರಾಸ್ತರೂ ಮನೆ ಬಿಟ್ಟು ಹ೦ದುವ೦ತಿಲ್ಲ. ಒ೦ದು ಪ್ರಸ೦ಗ ಮಾಡಲಿಕ್ಕೆ, ಒ೦ದು ಗಡದ್ದಾದ ಇಸ್ಪೀಟಿನ ಆಟ ಆಡಲಿಕ್ಕೆ ಅ೦ತಹ ದಿನ ಬೇರೆ ಸಿಗಲಿಕ್ಕಿಲ್ಲ ಅ೦ತ ಅವರಿಗೆ ಅನಿಸಿತು.

ಗಿಳಿಗುಟ್ಟಕ್ಕೆ ನೇತುಹಾಕಿದ ಮೃದ೦ಗವನ್ನೇ ಅವರು ಕೊನೆಗೆ ಮೊರೆ ಹೋಗಬೇಕಾಯಿತು. ತಮ್ಮಷ್ಟಕ್ಕೇ ತಾವೇ ಹಾಡಿಕೊಳ್ಳುತ್ತ ಬಾರಿಸಹತ್ತಿದರು. ಮಕ್ಕಳು ಕತೆಯನ್ನು ಬಿಟ್ಟು ಭಟ್ಟರ ಹತ್ತಿರ ಬ೦ದು ಕುಳಿತರು. ಮಳಯ ಸದ್ದನ್ನು ಮೀರಿಸಿ ಮೃದ೦ಗ ಧು೦ ಧೋ೦ಗುಡಹತ್ತಿತು.

ಕೇರಿಯ ಗ್ರಾಸ್ತರಿಗೂ ಇದೇ ಬೇಕಾಗಿತ್ತು. ಗೋಪಾಲಭಟ್ಟರ ಮನೆಗೆ ಹೋಗಿ ಒ೦ದು ಇಸ್ಪೀಟಿನ ಆಟವನ್ನಾದರೂ ಜಪ್ಪುವ ಎ೦ದು ಅವರು ವಿಚಾರಿಸುತ್ತಿದ್ದರು. ಆದರೆ ಮಳೆಯಲ್ಲಿ ಹೊರಡುವುದು ಯಾರಿಗೂ ಬೇಡವೆನಿಸಿತು.ಅಷ್ಟು ತ್ರಾಸು ತೆಗೆದುಕೊ೦ಡು ಹೋದರೆಭಟ್ಟರು ಮನೆಯಲ್ಲಿ ಇಲ್ಲದಿದ್ದರೆ,.... ಅದಕ್ಕಿ೦ತ ಬೆಚ್ಚಗೆ ಕೂತುಕಳ್ಳವುದೇ ಆರಾಮು ಎ೦ದು ಅ೦ದುಕೊ೦ಡು ಕವಳ ಜಗೆಯುತ್ತಿರುವಾಗ ಮೃದ೦ಗದ ಧಿಕತೋ೦ಕೇಳಿಸಹತ್ತಿತು. ಅದನ್ನು ಕೇಳೀ ಸುಮ್ಮನೆ ಕೂತುಕೊಳ್ಳುವುದು ಸಾಧ್ಯವೇ?
ಒಬ್ಬೊಬ್ಬರು ಒ೦ದೊ೦ದು ಪದ ಗುಣುಗುತ್ತ ಕ್ರಮವಾಗಿ ಭಟ್ಟರ ಮನೆಗೆ ಬರಹತ್ತಿದರು. "ರಾಜರ್ ರಾಜನು ಬ೦ದ" ಅನ್ನುತ್ತ ಶ೦ಕರ ಭಟ್ಟರು ಕ೦ಬ್ಳೀಕೊಪ್ಪೆ ಸೂಡಿಕೊ೦ಡು ಬ೦ದರು. ಸಣ್ಣಪ್ಪನ೦ತೂ ತೋಯಿಸಿಕೊ೦ಡೇ ಓಡಿಬ೦ದ. "ಕೇಳೀ ಕೇಳೀ ಬಾರದಿರಬಹುದೇ l ಮೃದ೦ಗವ ಕೇಳೀ ಕೇಳೀ......." ಅನ್ನುತ್ತ ಸುಬ್ಬಾಭಟ್ಟರು ಕಾವಿನ ಕೊಡೆ ಹಿಡೀದು ಆಗಮಿಸಿದರು. ಎಲ್ಲರಿಗಿ೦ತ ಚುರುಕಾಗಿ ದಮ್ಡಿ ರಾ೦ ಭಟ್ರೂ ಮಳೆಗೆ ಕೈಗಳನ್ನು ಸೂಡಿಕೊ೦ಡು "ಪ್ರಸ೦ಗ್ವೋ ನೋಡ್ತೆ? " ಅನ್ನುತ್ತ ಹಾಜರಾದರು.
ಗೋಪಾಲ ಭಟ್ಟರಿಗೆ ’ಇನ್ನು ಬೇಕಾದ ಹಾಗೆ ಮಳೆ ಹೊಯ್ಯಲಿ’ ಅನ್ನಿಸಿಬಿಟ್ಟಿತು. "ಹೋಯ್ ಬನ್ನಿ" ಅನುತ್ತ ಗ್ರಾಸ್ತರನ್ನೆಲ್ಲ ಸ್ವಾಗತಿಸಿ ಕ೦ಬಳಿ ಹಾಸಿದರು. ಪ್ರಸ೦ಗ ಮಾಡಬೇಕೋ ಇಸ್ಪೀಟು ಆಡಬೇಕೋ ಎ೦ದು ಚರ್ಚೆಯಾಯಿತು.

ಕೊನೆಗೆ ಇಸ್ಪೀಟಿಗೇ ಬಹುಮತ ಬಿತ್ತು ಭಟ್ಟರು ತಮ್ಮ ಮಾಣಿಯನ್ನು ಕಳುಹಿಸಿ ಶಿವರಾ೦ ಭಟ್ಟರ ಮನೆಯಿ೦ದ ಇಸ್ಪೀಟಿನ ಪಟ್ಟು ತರಿಸಿದರು. ಇಷ್ಟು ಹೊತ್ತು ಮುದುಡಿಕೊ೦ಡು ಕುಳಿತ ಮಾಣಿಗೆ ಇಸ್ಪೀಟಿನ ಆಟ ನೋಡುವ ಉತ್ಸಾಹ ಬ೦ದು ಮಳೆಯನ್ನು ಲೆಕ್ಕಿಸದೇ ಓಡಿಹೋಗಿ ತ೦ದ.

ಭಟ್ಟರು ಒ೦ದು ತಪ್ಪಲೆ ತು೦ಬ ಚಹ, ಒ೦ದು ಹರಿವಾಣ ತು೦ಬ ಅವಲಕ್ಕಿ, ಒಬ್ಬರಿಗೆ ಎರಡೆರಡು ತಾಳಿಸಿದ ಹಪ್ಪಳ ತರಿಸಿದರು. ಬೆಚ್ಚಗೆ ಚಹ ಕುಡಿದು ’ದಾಡು ಪೀಡು’ ಆಡಲು ಸುರು ಮಾಡಿದರು.

ನಡುನಡುವೆ ಜಗೆಯುವ ಕವಳಕ್ಕಾಗಿ ಇಡೀ ಒ೦ದು ಹೊಗೆಸೊಪ್ಪು, ಶಿಲ್ಕು ಇದ್ದ ಎಲ್ಲಾ ಬೀಡಿಗಳು ಪುಡಿಯಾದವು.

ಮಳೆ ಹೊಳವಾಯಿತು. ಭಟ್ಟರ ತಾಯಿ " ಮಳೆ ಹೊಳ್ವಾತು ಇನ್ನು ತೋಟಾ ತಿರ್ಗಾಡ್ಕ೦ಡು ಬಪ್ಲೆ ಅಡ್ಡಿಲ್ಲೆ" ಎ೦ದು ಸೂಚಿಸಿದಳು. "ತೋಟ್ದ ಕೆಲ್ಸ ಯಾವಾಗ್ಲೂ ಇದ್ದದ್ದೇಯಾ. ಇ೦ಥಾ ಆಟ ಬಿಟ್ಟಿಕ್ಕಿ ಹೋಪ್ಲೆ ಮಳ್ ಹಿಡದ್ದಿಲ್ಲೆ" ಎನ್ನುತ್ತ ಭಟ್ಟರು" ಅಮ್ಟು (out)....... ಜೋನ್ ಅಮ್ಟು" ಹೊಡೆದರು.

ಮಧ್ಯದಲ್ಲಿ ಅಡಿಕೆಯ ಸೊಕ್ಕು ಏರಿ ಶ೦ಕರ ಭಟ್ಟರಿಗೆ ತಲೆ ತಿರುಗಹತ್ತಿತು. ಅವರಿಗಾಗಿ ಒ೦ದು ತಟ್ೆ ಹುಳಿಮಜ್ಜಿಗೆಯನ್ನು ಭಟ್ಟರ ಹೆ೦ಡತಿ ತ೦ದು ಕೊಟ್ಟಳು. ಅವರಿಗೆ ಒಬ್ಬರಿಗೇ ಏಕೆ? ಎಲ್ಲರಿಗೂ ಒ೦ದೊ೦ದು ತಟ್ಟೆ ಮಜ್ಜಿಗೆ ಬೆರೆಸಿಕೊ೦ಡು ಬ೦ದರೆ ಬಹಳ ವಳ್ಳೆಯದಾಗುವುದೆ೦ದು ಭಟ್ಟರು ಮಡದಿಗೆ ಹೇಳಿದರು.

ಆಟದ ನಡುವೆಯೇ ಮಜ್ಜಿಗೆಯನ್ನು ಕುಡಿದರು. ಸ೦ಜೆಯಾಯಿತು. ದೀಪ ಬ೦ತು. ಕಡೆಯ ಆಟ ಹೂಡಿದರು. ಭಟ್ಟರ ಮಾಣಿ ರೂಢಿಯ ಪ್ರಕಾರ ಮು೦ಚೇ ಎಲ್ಲರಿಗೂ ಸೂಡಿಗಳನ್ನು ತ೦ದು ಬಾಗಿಲ ಬಳಿಗೆ ಇಟ್ಟಿದ್ದ.

ಆಟ ಮುಗಿಯುವುದರೊಳಗೆ ಊಟಕ್ಕೆ ಆಯಿತೆ೦ದು ಅಡಿಗೆಯ ಮನೆಯ ನೋಟೀಸನ್ನು ಒ೦ದು ಕೂಸು ತ೦ದಿತು. ಕಾಲು ತೊಳೆದುಕೊಳ್ಳಲು ನೀರಿನ ಚೊ೦ಬುಗಳು ಬ೦ದವು. ಭಟ್ತರು ಎಲ್ಲರಿಗೂ "ಇಲ್ಲೇ ಉ೦ಡ್ಬುಡ್ವೋ. ಉ೦ಡಾದ್ಮೇಲೆ ಬೇಕಾರೆ ಒ೦ದ್ ತಾಸು ಕುಟ್ವೋ" ಅ೦ದರು. "ಛೆ ಛೆ. ಮನೆಗೆ ಹೋಪ್ದೇಯ" ಅನ್ನುತ್ತ ಎಲ್ಲರೂ ಸೂಡಿ ಹಚ್ಚಿ ಹೊರಟರು. ಭಟ್ತರ ಮನೆಯಲ್ಲಿ ಕೆಲವರಿಗಾಗಿ ಅಡಿಗೆಯಾಗಿತ್ತು. ಎಲ್ಲರೂ ಹೊರಡುವುದನ್ನು ನೋಡಿ ಭಟ್ತರ ಹೆ೦ಡತಿ "ಅತೋ! ಎಲ್ಲರೂ ಹೊರ್ಟ್ವಲಿ. ಯಾ ನಿ೦ಗೊಕ್ಕೆಲ್ಲಾ ಅನ್ನ ಮಾಡಿಕಿದೆ" ಅ೦ದಳು. ಭಟ್ಟರೂ ಒತ್ತಾಯ ಮಾಡಿದರು. ಯಾರೂ ನಿಲ್ಲಲಿಲ್ಲ. ಮನೆಯಲ್ಲಿ ಮತ್ತೆ ಆರೆ೦ಟೇ ಜನರಾದರು. ಭಟ್ತರಿಗೆ ಭಣ ಭಣ ಅನಿಸಿತು. ಎಷ್ಟು ಒತ್ತಾಯ ಮಾಡಿದರೂ ನಿಲ್ಲಲಿಲ್ಲವೆ೦ದುಕೊ೦ಡು ಅವರು ತುಸು ಬೇಸರ ವ್ಯಕ್ತ ಮಾಡಿದರು. ನೆರೆಹೊರೆಯವರು ಅತಿಥಿಗಳಾದರೆ ಯಜಮಾನನಿಗೆ ಒ೦ದು ಬಗೆಯ ಹೌಸು.

ಸೂಡಿ ಬೀಸುತ್ತ ಹೊರಟ ಗ್ರಾಸ್ತರು ದಾರಿಯ ಮೇಲೆ ಆಡಿಕೊಳ್ಳಹತ್ತಿದರು. "ನೋಡ್ದ್ಯಾ ಗೋಪಾಲಭಟ್ಟ ! ಎ೦ಥಾ ಪಕ್ಕಾ ! ಸೂಡಿ ತರ್ಸಿಟ್ಟು ವಳ್ಕಳೀ ಹೇಳಿ ವತ್ತಾಯ ಮಾಡ್ತ !"
"ಭಾರೀ ಪಕ್ಕಾ ಮನ್ಶಾ ಅವ. ನೋಡ್ದ್ಯ, ಸಕ್ರೆನೇ ಹಾಕದ್ದೇ ಚಪೆ ಚಾ ಕುಡೀಸ್ದ."
"ಚಾಕ್ಕ೦ತೂ ಸಕ್ರೆ ಕಮ್ಮಿ ಹೇಳು. ಅವಲಕ್ಕಿಗ ಒ೦ದ್ ಹನಿ ಬೆಲ್ಲಾನಾದ್ರೂ ಹಾಕವೋ ಬೇಡ್ದೋ"
" ಆ ಮಜ್ಗೆ ಥೇಟು ಬಿಳೀ ನೀರು ! ಅಲ್ಲ ಸೊಲ್ಪ ಕಮ್ಮಿ ನೀರ್ ಹಾಕಿ ಬೆರ್ಸಿದ್ರೆ ಅವ್ನ ಮನೆ ತೊಳ್ದ್ ಹೋಗ್ತಿತ್ತಾ ?"
ಸೂಡಿಗಳು ಉರಿಯುವ ವರೆಗೂ ಇ೦ಥ ಮಾತುಗಳು ನಡೆದವು.

Apr 13, 2012

ಸರದಾರ

ಸರದಾರರ ಮೇಲಿನ ಜೋಕುಗಳು ಚುಟಕುಲೆಗಳು ಮತ್ಯಾವ ಜಾತಿ ಜನಾಂಗದ ಮ್ಯಾಲೂ ಇರದು. ಸಂತಾ ಬಂತಾ ನ  ಹಾಸ್ಯ ಚಟಾಕಿಗಳು ಬಹಳ. ಆದರೆ ಅದೇ ಈ ಸರದಾರರ ಬಗ್ಗೆ ನಮಗೆಷ್ಟು ಗೊತ್ತು? ಅವು ಏನು?  ಮೊನ್ನೆ ಮೊನ್ನೆ... ಫೇಸ್ ಬುಕ್ ನಲ್ಲಿನ  ಸರದಾರನ ಮೇಲಿನ ವಂದು ಹಂಚಿಕೆ (share) ನನ್ನ ಹಳೆಯ ನೆನಪುಗಳ ಮೆಲುಕು ಹಾಕಿಸಿದ್ದಂತೂ ಹೌದು.ಈ ಐದಾರು ವರ್ಷದ ನನ್ನ ಉತ್ತರ ಭಾರತದ ವೃತ್ತಿ ಜೀವನದಲ್ಲಿ ಕಂಡು ಕೇಳಿದ ಸರದಾರರ ಸತ್ಯಗಳಿವು. 

ಈ ಸರದಾರರು ಮುಖ್ಯವಾಗಿ ಸಿಖ್ ಸಮೂದಾಯಕ್ಕೆ ಸೇರಿದವರು. ಸಿಖ್ ಎಂಬ ಪಂಥ ಹಿಂದೂ ಮುಸ್ಲಿಂ ಸಮ್ಮಿಳಿತ ಜನಾಂಗ. ಬಹುಶಃ ಗುರು ನಾನಕರ ಉದ್ದೇಶವೇ ಅದಿತ್ತೋ ಏನೋ... ಹಿಂದೂ ಮುಸ್ಲಿಂರನ್ನು ಒಂದೇ ಸೂರಿನಡಿಯಲ್ಲಿ ತರುವ ಪ್ರಯತ್ನದ ಫಲವೇ ಇನ್ನೋಂದು ಸಿಖ್ ಎಂಬ ಜನಾಂಗದ ಉಗಮಕ್ಕೆ ಕಾರಣವಾಯಿತು ಎನ್ನಬಹುದು. ಈ ಸಿಖ್ ಪಂಥಿಗರು ದೇವಸ್ಥಾನಗಳಿಗೂ ಹೋಗುತ್ತಾರೆ... ಹಾಗೆಯೇ ಮಸೀದಿ ದರ್ಗಾಗಳಿಗೂ ಹೋಗುತ್ತಾರೆ. ಗುರುದ್ವಾರಗಳಲ್ಲೂ ಮಾಥಾ ಠೇಕನಾ ಮಾಡುತ್ತಾರೆ ಕೂಡ. ಇವರ ಹಾವ ಭಾವ ಮತ್ತು ಉಡುಪು ಬದುಕಿನ ಪದ್ದತಿ ನೋಡಿ. ಮುಸ್ಲಿಮರ ಮುಲ್ಲಾಗಳ ತರ ಗಡ್ಡ ಬಿಡುತ್ತಾರೆ. ಮುಸ್ಲಿಮರಲ್ಲಿ ಒಂದು ಮುಷ್ಠಿಯಾಗುವಷ್ಟು ಗಡ್ದ ಬಿಡುವುದು ಪದ್ದತಿಯಾದರೆ... ಸಿಖರಲ್ಲಿ ಗಡ್ಡಕ್ಕೆ ಮತ್ತು ತಲೆಯ ಕೂದಲಿಗೆ  ಕತ್ತರಿ ಮತ್ತು ಹಣಿಗೆ ತಾಗಿಸದಿರುವುದೇ ಪದ್ದತಿ. ಕಟ್ಟಾ ಸಿಕ್ಕನೊಬ್ಬ ಕತ್ತರಿ ಮತ್ತು ಹಣಿಗೆಯನ್ನು ಕೈಯಿಂದ ಮುಟ್ಟುವುದಿಲ್ಲ*. ಹೀಗೆಯೇ ಹಿಂದೂ ಮುಸ್ಲಿಮರ ಎಷ್ಟೋ ಬಗೆಯ ರೀತಿ ರಿವಾಜುಗಳು ಇವರಲ್ಲಿವೆ. ಇವರು ತಲೆಗೆ ಪೇಟ ಸುತ್ತಿಕೊಳ್ಳುವ ಉದ್ದೇಶ ತಲೆಯ ಮೇಲಿನ ಆ ಕೂದಲಿನ ಮುಡಿಯನ್ನು ಮುಚ್ಚಿಡಲೇ ಆಗಿರಬಹುದು.. 

ಈ ಸರದಾರರು ತುಂಬ ಕಷ್ಟವಾನಿಗಳು. ವಿವಿಧತೆ ಮತ್ತು ಪರಿವರ್ತನೆಗೆ ಹೊಂದಿಕೊಂಡ ಜನಾಂಗ.ವಿಭಜನೆಯ ಸಂದರ್ಭದಲ್ಲೂ ತಮ್ಮತನವನ್ನು ಕಾಪಾಡಿಕೊಂಡು ಬದುಕುಳಿದ ಕಷ್ಟ ಸಹಿಷ್ಣುಗಳು. ಸಂದರ್ಭ ಬಂದರೆ ಸರ್ದಾರ್ಜಿಯೊಬ್ಬ ಲಾರಿ ಓಡಿಸುತ್ತಾನೆ ಅಥವ ರಸ್ತೆಯ ಪಕ್ಕದಲ್ಲೇ ವಂದು ಗ್ಯಾರೇಜೋ ಡಾಭಾನೋ ತೆರೆಯುತ್ತಾನೆ.... ಹಣ್ಣಿನಂಗಡಿ ನಡೆಸುತ್ತಾನೆ.. ಬಡಗಿಯ ಕೆಲಸ ಮಾಡಬಲ್ಲ .. .ಆದರೆ ಭಿಕ್ಷೆ ಯೆತ್ತಲಾರ.! ವಂದು ಸಮೂದಾಯದ  ಸಫಲತೆಯ ಹಿಂದಿರುವ ಗುಟ್ಟೇ ಅದು .. ಅವರಲ್ಲಿರುವ ಯಾವುದೇ ಕೆಲಸವನ್ನು ತನ್ಮಯತೆಯಿಂದ, ಪ್ರೀತಿಯಿಂದ, ಗೌರವದಿಂದ ಮಾಡುವ ಮನೋಭಾವ. ಯಾವ ಕೆಲಸವೂ ಕೀಳಲ್ಲ ಎಂಬ ಮನೋಭಾವ. 

ಹುಂ ಮತ್ತೊಂದು ಮಾತು.... ಯಾವಾಗಲಾದರೂ ನೀವು ಸಿಗರೇಟ್ ಸೇದುತ್ತಿರುವ ಅಥವಾ ತಂಬಾಕು ತಿನ್ನುತ್ತಿರುವ ಅಥವಾ ಯಾವುದೇ ಚಟ ಹೊಂದಿರುವ ಸರದಾರನ ಕಂಡಿದ್ದೀರಾ?? ಇವರಿಗಿರುವ ವಂದೇ ವಂದು ಚಟ ಅಂದರೆ ಊಟ. ಸರದಾರನೊಬ್ಬ ಕುಂತ ಬೈಟಕ್ ನಲ್ಲಿ ೧೫ ರಿಂದ ೨೦ ರೊಟ್ಟಿ ಇಳಿಸಬಲ್ಲ. ಇದೇ ಕಾರಣಕ್ಕೆ ಹೇಳುವುದು. ... ಭಾರತದಲ್ಲಿ ಪಂಜಾಬಿನ ಗಂಡು... ಕೇರಳದ ಹೆಣ್ಣು ಗಟ್ಟಿ. ನಿಜವಾಗಲೂ ಸತ್ಯದ ಮಾತು ಅದು. ದೇಹದಾರ್ಢ್ಯತೆಗೆ ಹೆಸರೇ ಸರದಾರ. (ಕೇರಳದ ಹೆಮ್ಮಕ್ಕಳೂ ಕೂಡ ಮೈ ಮಾಟದಲ್ಲಿ ಅವರ ಮೀರಿಸುವರ್ಯಾರು?? ಬಣ್ಣ ಬಿಡಿ) 


ಸರದಾರರ ಬಗೆಗಿನ ಬೆಚ್ಚಿಬೀಳಿಸುವ ವಿವರಗಳ ನೋಡಿ: ನಮ್ಮದೇಶಕ್ಕೆ ಸರ್ದಾರ್ಜಿಗಳ ಒಟ್ಟೂ ಕೊಡುಗೆ -
* 33% ಆದಾಯ ಕರ ಕೊಡುವ ಏಕೈಕ ಸಮೂದಾಯ.

* 67% ದಾನ (charity)
* 45% ಭಾರತೀಯ ಸೇನೆಯಲ್ಲಿ ಸರದಾರರು
* 59,000++ ಗುರುದ್ವಾರಗಳು ಪ್ರತಿದಿನ ಒಟ್ಟೂ  5,900,000+ ಜನರಿಗೆ  ’ಲಂಗರ್’ **
(ಅನ್ನದಾನ) ಎಂಬ ಹೆಸರಿನಲ್ಲಿ  ಊಟ ಬಡಿಸುತ್ತದೆ.  
ಇವೆಲ್ಲ ವಿಶೇಷತೆಯುಳ್ಳ ವಂದು ಸಮೂದಾಯದ ಒಟ್ಟೂ ಜನಸಂಖ್ಯೆ ಭಾರತದ ಜನಸಂಖ್ಯೆಯ ಕೇವಲ 1.4% 

ಆಶ್ಚರ್ಯವಲ್ಲವೇ ?? 


ಇವೆಲ್ಲ ಸರಿ ಸರದಾರರ ಬಗ್ಗೆ ಇಷ್ಟೊಂದು ಮಾಹಿತಿ ಸಿಕ್ಕಿದ್ದೇನೋ ಸರಿ ಒಂದು ವಿಷಯ ಇನ್ನೂ ನಿಗೂಢವಾಗಿಯೇ ಇದೆ.. 

"ಸರದಾರಕೋ ಬಾರಾ ಕ್ಯೋಂ ಬಜತಾ ಹೈ?" ***

ಈ ಸಿಖ್ ಸರದಾರರ ವಿಷಯದಲ್ಲಿ ನಾ ಕಂಡು ಅನುಭವಿಸಿದ ಕೆಲ ಅಪರೂಪದ ಕುತೂಹಲಕಾರೀ ಅನುಭವಗಳನ್ನು ಹಂಚಿಕೊಳ್ಳಲೇಬೇಕು. 
 
ಒಮ್ಮೆ ಪಂಜಾಬಿನ ಅಮೃತಸರಕ್ಕೆ (ಸುಂದರ ನಗರವೆನ್ನಲಾಗದಿದ್ದರೂ ಸ್ವರ್ಣ ಮಂದಿರ ಹಾಗೂ ಪಕ್ಕದ ಜಲಿಯನ್ ವಾಲಾ ಬಾಗ್ ನೋಡತಕ್ಕ ಸ್ಥಳಗಳು) ಕಂಪನಿಯ ಕಾರ್ಯ ನಿಮಿತ್ತ ಹೋಗಿದ್ದೆ.  ಡಿಸೆಂಬರ್ ತಿಂಗಳ ಒಂದು ಬೆಳ್ಳಂಬೆಳಿಗ್ಗೆ ಸುಮಾರು ೫ ಗಂಟೆಗೆ ರೈಲಿನಿಂದ ಇಳಿದೆ. ಇಳಿಯುವಲ್ಲಿಯವರೆಗೆ ರೈಲಿನ ಎಸಿಯ ಕಾರಣದಿಂದಾಗಿ ಚಳಿಯ ಅನುಭವವಾಗೇ ಇರಲಿಲ್ಲ. ಹೇಳೀ ಕೇಳಿ ಕರಾವಳಿಯಲ್ಲಿ ಹುಟ್ಟಿ ಬೆಳೆದ ನನಗೆ ಚಳಿ ಅಂದರೆ ಬೆಂಗಳೂರಿನ ಚಳಿ ಗೊತ್ತು. ಅದನ್ನು ತಡೆಯಲೋಸುಗ ಒಂದು ಜಾಕೆಟ್ ಅಷ್ಟೇ ನನ್ನಲ್ಲಿರುವುದು....ಸಾಕೆಂದುಕೊಂಡಿದ್ದೆ. ಆದರೆ ಇಳಿದ ತಕ್ಷಣ ಅಲ್ಲಿನ ಚಳಿಗೆ (ಆ ದಿನ ೨ ಡಿಗ್ರಿ ಉಷ್ಣತೆಯಿತ್ತೆಂದು ಆಮೇಲೆ ತಿಳಿದಿದ್ದು) ನಡುಗತೊಡಗಿದೆ. ಜಾಕೆಟ್-ನ ಜಿಪ್ ಅನ್ನು ಹಾಕಿಕೊಂಡರೂ ಚಳಿ ತಡೆಯಲಾಗುತ್ತಿಲ್ಲ. ಚಹಾ ಕುಡಿದರೆ ಸರಿಯಾಗಬಹುದೆಂದುಕೊಂಡು ಅಕ್ಕ ಪಕ್ಕ ಹುಡುಕತೊಡಗಿದಾಗ ತಿಳಿಯಿತು. ಎಲ್ಲರೂ ಬರೇ ಜಾಕೆಟ್ ನಲ್ಲಿರುವ ನನ್ನನ್ನು ವಿಚಿತ್ರವಾಗಿ ನೋಡಹತ್ತಿದ್ದರು. ಚಹಾ ಸಿಗಲಿಲ್ಲ. ರೈಲ್ವೇ ಸ್ಟೇಷನ್ನಿನಿಂದ ಹೊರಗಡೆ ಬಂದೆ... ಅಲ್ಲಿ ಇನ್ನೂ ಚಳಿ ಜಾಸ್ತಿಯಾಯಿತು. ಅಲ್ಲೇ ಪಕ್ಕದಲ್ಲಿ ವಂದು ಟೀ ಅಂಗಡಿ ಜೊತೆಯಲ್ಲೇ ಬೆಂಕಿಯ ಮುಂದೆ ಕುಳಿತು ಚಳಿ ಕಾಸುತ್ತಿದ್ದ ಕೆಲ ಕೂಲಿಯವರೂ ಕಂಡರು. ಖುಷಿಯಾದೆ ...ದಾಪುಗಾಲಿಟ್ಟೆ.... ’ಚಾಯ್ ದೇನಾ’ ಎನ್ನುತ್ತ ಬೆಂಕಿಯ ಮುಂದೆ ನಾನೂ ಕುಕ್ಕರಿಸುತ್ತಿದ್ದಂತೇ ಮುದುಕ ಸರದಾರನೊಬ್ಬ ಪಂಜಾಬಿಯಲ್ಲಿ ಕೇಳಿದ. ’ಆಂ’ ಎಂದೆ ಅರ್ಥವಾಗದೇ. 
’ಕಹಾಂ ಸೇ ಆಯೇ ಹೋ?’ ಎಂದ ’ಮುಂಬಯ್ ಸೇ’ ಎಂದೆ ಅರ್ಥವಾದ ಪ್ರಶ್ನೆಗೆ ಉತ್ತರಿಸುತ್ತ. 
’ಬೇಟಾ ಯೇ ಬಂಬಯ್ ನಹೀ ಹೈ.... ಪಂಜಾಬ್ ಹೈ ಪಂಜಾಬ್.. ಯಹಾ ಟಂಡ್ ಪಡತಾ ನಹೀ ಲಗತಾ ಭೀ ಹೈ. ನ ಶಾಲ್ ನ ಟೋಪಿ.. ನಂಗಾ ಆಯೇ ಹೋ’ ಎಂದು ಮರ್ಯಾದೆ ತೆಗೆದ ಎಂದುಕೊಂಡೆ. ಹಾಗೆಂದವನೇ ತನ್ನ ಪಕ್ಕದಲ್ಲಿದ್ದ ಹಳೆಯ ಹರುಕು ಚಾದರ ನನ್ನೆಡೆಗೆ ಎಸೆದು ಹೊದ್ದುಕೋ ಎಂದ. ಜಡ್ಡು ತುಪ್ಪದ ವಾಸನೆಯಾದರೂ ಅದನ್ನೇ ಸುತ್ತಿಕೊಂಡೆ ನಾಚುತ್ತ. 

 ಸರದಾರರ ಬಗೆಗೆ ಗೌರವ ಬಂದಿದ್ದೇ ಆವಾಗ. ಸಾಮಾನ್ಯವಾಗಿ ಸರದಾರರು ಸಹೃದಯರು.... ಪರೋಪಕಾರಿಗಳು. ಅವರೇ ಹೇಳುವಂತೇ ’ಸರ್ದಾರ್ ಹೂಂ ಸರ್ದಾರ್... ಬಡೇ ದಿಲ್-ವಾಲಾ ಹೂಂ’. ಅದು ಸತ್ಯ ಅನ್ನಿಸಿಹೋಗಿತ್ತು ಅಂದು.


* ಕಟ್ಟಾ ಸಿಖನೊಬ್ಬ ಹಣಿಗೆ ಮತ್ತು ಕತ್ತರಿ ಮುಟ್ಟುವುದಿಲ್ಲ.
ಹೌದು ಕಟ್ಟಾ ಸಿಖ್ಖನೊಬ್ಬ ಹಣಿಗೆ ಮತ್ತು ಕತ್ತರಿಯನ್ನು ಜೀವಮಾನದಲ್ಲೇ ತಮ್ಮ ದೇಹದ ಯಾವುದೇ ಭಾಗದ ಕೂದಲಿಗೆ ತಾಕಿಸುವುದಿಲ್ಲ.  ತಲೆ ಕೂದಲಂತೂ ಬಿಡಿ ಮುಡಿ ಕಟ್ಟಿ ಮುಂಡಾಸು (ಪಗಡಿ ಅನ್ನುತ್ತಾರೆ ಅವರದನ್ನು) ಸುತ್ತುತ್ತಾರೆ. ಗಡ್ಡವನ್ನೂ ಕೂಡ ಟ್ರಿಮ್ ಮಾಡುವುದಿಲ್ಲ. ಗಡ್ಡಕ್ಕೆ ಸಲ್ಪ ವ್ಯಾಸಲೀನ್ ಹಚ್ಚಿ ಸರಿಯಾಗಿ ಕೂರುವಂತೇ ನೀವುತ್ತಾರದನ್ನು. ಕುತೂಹಲಕಾರಿ ಘಟನೆಯಿದೆ ಇಲ್ಲಿ. 
ಅದೇ ದಿನ ಬೆಳಿಗ್ಗೆ ಅಂತೂ ಇಂತೂ ನಡುಗುತ್ತ ಚಳಿಯಲ್ಲಿ ಸೈಕಲ್ ರಿಕ್ಷಾದಲ್ಲಿ ಕೂತುಕೊಂಡು ಮೊದಲೇ ಕಾದಿಟ್ಟಿದ್ದ ಹೊಟೇಲ್ ರೂಂ ತಲುಪಿದೆ. ನಾಲ್ಕಿಂಚು ದಪ್ಪಗಿನ ರಜಾಯಿ ಹೊದ್ದು ಸುಮಾರು ೮ ಗಂಟೆಯವರೆಗೂ ಮಲಗಿದ್ದ ನನಗೆ ಅಲ್ಲಿನ ವಿತರಕ (Distributer) ಫೋನಾಯಿಸಿದಾಗಲೇ ಎಚ್ಚರಾದದ್ದು. ಮೊದಲು ದೂರವಾಣಿಯಲ್ಲಿ ಮಾತಾಡಿ ಪರಿಚಯವಷ್ಟೇ ಬಿಟ್ಟರೆ ಮುಖಪರಿಚಯ ಇರಲಿಲ್ಲ ನನಗೆ. ಸರಿ ರೂಮಿಗೆ ಬಂದು ಕರಕೊಂಡು ಹೋಗುವೆನೆಂದ.... ನಾ ಎದ್ದು ಸ್ನಾನ ಮುಗಿಸಿ ಬಚ್ಚಲಿನಿಂದ ಹೊರಬರುತ್ತಿದ್ದೆ... ಆಗಲೇ ತಲುಪಿಬಿಟ್ಟಿದ್ದ ಸರದಾರ. ನಾನು ಬಟ್ಟೆ ತೊಟ್ಟು ತಯಾರಾದೆ... ಕೂದಲು ಬಾಚಲು ಹಣಿಗೆಗಾಗಿ ತಡಕಾಡಿದೆ... ಇರಲಿಲ್ಲ. ಗೆಳೆಯರೊಟ್ಟಿಗಿನ ಸಲುಗೆಯಿಂದ ಅದೇ ಸರದಾರನಲ್ಲಿ ’ಹಣಿಗೆ ಇದೆಯಾ?’ ಎಂದೆ ಒಮ್ಮೆ. ’ಆಂ?’ ಎಂದ ಮರುಪ್ರಶ್ನೆಯಂತೇ. ಮತ್ತೊಮ್ಮೆ ಕೇಳಿದೆ ’ಕಂಗೀ ಹೈ ತೋ ದೇನಾ ಜರಾ’. 

ಅದೇ ನಾ ಮಾಡಿದ ಪ್ರಮಾದ. ’ಭಾಯ್ ಸಾಬ್ ಬಾಡ್ ಮೇ ಜಾವ್... ಕರ್ಪಾನ್ ಹೈ ದೂಂ?’ ಎಂದ ಅಚಾನಕ್ಕಾಗಿ. ನನಗೋ ಆಶ್ಚರ್ಯ. (ಕರ್ಪಾನ್ ಎಂದರೆ ಚಾಕುವಿನ ಹೋಲಿಕೆಯಿರುವ ವಂದು ಚಿಕ್ಕ ಕತ್ತಿ... ಅದನ್ನು ಸಿಖ್ ಪಂಥೀಯರು ವಂದು ದಾರಕ್ಕೆ ಕಟ್ಟಿ ಬ್ರಾಹ್ಮಣರ ಜನಿವಾರ ಧರಿಸುವ ರೀತಿಯ ಉಲ್ಟಾ ನೇತುಕೊಂಡಿರುತ್ತಾರೆ)   ಇದೇಕೆ ಇವನು ಹೀಗೆಂದ? ಆದರೂ ಸಮಝಾಯಿಶಿ ಕೊಡುವ ಪ್ರಯತ್ನ ಮಾಡಿದೆ. ’ಸರ್ ಜೀ ಕಂಗೀ ಲಾನಾ ಭೂಲ್ ಗಯಾ.... ಇಸ್ ಲಿಯೇ ಮಾಂಗ್ ರಹಾ ಥಾ ಸಾರಿ’ ಎಂದೆ. ಆಗ ಬಹುಶಃ ಅರ್ಥವಾಗಿರಬೇಕು ಅವನಿಗೆ ಇವನು ಅಮಾಯಕನೆಂದು.
 ಹೇಳಿದ... "ನೋಡು ಗೆಳೆಯ ನಾನೊಬ್ಬ ಸರದಾರ.. ಪಕ್ಕಾ ಸರದಾರನೊಬ್ಬ ಹಣಿಗೆ ಮತ್ತು ಕತ್ತರಿ ಉಪಯೋಗಿಸುವುದಿಲ್ಲ... ಮತ್ತು ನಮ್ಮ ಧರ್ಮದ ಪ್ರಕಾರ ಆ ಎರಡೂ ವಸ್ತುಗಳನ್ನು ಇಟ್ಟುಕೊಳ್ಳಲೂಬಾರದು. ಅಷ್ಟೇ ಅಲ್ಲ ... ಯಾರಾದರೂ ನಮ್ಮಲ್ಲಿ ಆ ವಸ್ತುವನ್ನು ಕೇಳಿದರೂ ಊಡ ನಮಗೆ ಸಿಟ್ಟು ಬರುತ್ತದೆ.. ಮತ್ತು ಕರ್ಪಾನ್ ತೆಗೆಯಲೂ ನಾವು ಹಿಂಜರಿಯುವುದಿಲ್ಲ" 


ಅಬ್ಬಾ ಬಚಾವಾದೆ ... ಆಗ ನನ್ನ ಬೊಡ್ಡು ತಲೆಗೆ ವಿಷಯ ಹೊಳೆಯಿತು. ಇವನ ಸಿಟ್ಟಿಗೆ ಕಾರಣ ಇದು. ಒಂದೊಮ್ಮೆ ಅವರಲ್ಲಿರದ... ಅವರಿಟ್ಟುಕೊಳ್ಳದ ಆ ಹಣಿಗೆ ಕತ್ತರಿಯನ್ನು ಕೇಳಿದರೆ ಅವರಿಗೆ ತಮ್ಮನ್ನು ಕೀಟಲೆ ಮಾಡುತ್ತಾರೆಂದೇ ಅನ್ನಿಸುತ್ತದೆ... ಅಷ್ಟೊಂದು ಮುಂಗೋಪಿಗಳೂ ಕೂಡ ಆಗಿರುತ್ತಾರೆ 


ಕ್ಷಮೆ ಯಾಚಿಸಿದೆ ಅವನಲ್ಲಿ.. ... ’ನನಗೆ ನಿಮ್ಮ ಮತದ ಬಗ್ಗೆ ಅಷ್ಟೊಂದು ಮಾಹಿತಿಯಿಲ್ಲ ಗುರುವೇ... ನೀನೊಬ್ಬನೇ ನನಗೆ ಸರದಾರ ಪರಿಚಯವಿರುವುದು. ಈಗ ತಿಳಿಯಿತು ಕ್ಷಮಿಸು” ಎಂದು ವಿನಂತಿ ಮಾಡಿದೆ. ’ಕೋಯೀ ನಹೀ ಮೆರೇ ಭಾಯಿ’ ಎಂದು ದೊಡ್ಡ ಹೃದಯದವನಾದ .. ಬಂದು ಜಾದೂ ಕೀ ಝಪ್ಪೀ ಕೊಟ್ಟ ಪುಟ್ಟ ನಾಯಿಮರಿಯೊಂದನ್ನು ಅಪ್ಪಿದಂತೇ. !!


(ಮುಂದಿದೆ)
** ಲಂಗರ್ 
***  ಸರದಾರಕೋ ಬಾರಾ ಕ್ಯೋಂ ಬಜತಾ ಹೈ?



Apr 12, 2012

ಹೆಸರಿನ ತಲೆಬಿಸಿ

ಆಗ ಅಮ್ಮನ ತೊಡೆಯ ಮ್ಯಾಲೆ ಬೆಚ್ಚಗೆ ಮಲಗಿದ್ದ ನಂಗೆ .... ಅಜ್ಜನೆಂಬ ಹಿರಿಯನ ಆದೇಶದ ಮೇರೆಗೆ ಈ ಇದೇ ನಮ್ಮ ಅಗ್ನಿಹೋತ್ರಿ ರಾಂ ಭಟ್ ಮಾಸ್ತರಿದ್ರಲೀ ಅವರ ದೊಡ್ದಪ್ಪನೋ ಅಜ್ಜನೋ ಆಗಿರವು ಪುರೋಹಿತರು.....ಅವರ ಎದುರಿಗೆ ಯನ್ನ ಅಪ್ಪ ಅಕ್ಕಿ ಕಾಳಿನ ಮ್ಯಾಲೆ ಬರದು ಜಾತಗ ಮಾಡಿಸಿದ ಹೆಸರು - ಮೇಘಶ್ಯಾಮ

ಮತ್ತೆ ನನ್ನ ಬಲಗೈ, ತಲೆಯ ಮ್ಯಾಲಿಂದವಾ ಎಡಗಿವಿಯ ಮುಟ್ಟತ ಇಲ್ಯ ಹೇಳಿ ನೋಡಿಯಾದ ಮೇಲೆ (ನನ್ನ ಜನ್ಮದಿನಾಂಕ ನೆನಪಿದ್ದರೂವ ಹಿರಿಯರು ನಡೆಸಿಗಂಡು ಬಂದ ವಿದ್ಯೆ - ರಿವಾಜು - ರೂಢಿ ಹೇಳಿ) ನನ್ನ ಶಾಲೆಗೆ ಸೇರಸಕಾರೆ ಭಟ್ಟ ಎಂಬ ಹೆಸರು ಬಪ್ಪಲಾಗ ಎಂಬ ಕಾರಣಕ್ಕ ಅಥವ  ಮುಂದೆಂದಾರೂ ಕಾನೂನೂ ಬದಲಾಗಿ ಹೆಸರನ್ನೊಂದೇ ನೋಡಿ  ಮೀಸಲಾತಿ ಕೊಡಗು ಎಂಬ ದೂರಾಲೋಚನೆಯಿಂದಲೋ ಮತ್ತೆ ಅದೇ ಅಜ್ಜನ ಅಧಿಕಾರದ ಆದೇಶದ ಮೇರೆಗೆ ಇಟ್ಟ ಅಧಿಕೃತ (official) - ಶಾಲಾ ನೋಂದಣಿಯ ಹೆಸರು ಬಿ ಪಿ ಎಮ್ ಶ್ಯಾಮ. ಪೂರ ಇದನ್ನು ಬಿಡಿಸಲೆ ಹೋದರೆ ’ಭಡ್ತಿ ಪರಮೇಶ್ವರನ ಮಗ ಮೇಘ ಶ್ಯಾಮ’ ಹೇಳಾಗವಡ (ಅದೇ ಅಜ್ಜನೇ ಹೇಳಿದ್ದು)  ಹೇಳಿ ತಿರಚಿ...ಖುದ್ದು ನಿಂತು ಇಟ್ಟ ಹೆಸರನ್ನೇ  ಛಿದ್ರ ಛಿದ್ರವಾಗಿಸಿದ (ಅಕ್ಕಿ ಕಾಳಿನ ಮರ್ಯಾದೆ ತೆಗದು) ಯನ್ನಜ್ಜ - ಪುಣ್ಯಾತ್ಮ ಅಂವ. ಅಲ್ಲ ಅವನ ತಪ್ಪಿಲ್ಯಪ... ಆವಾಗ ವನ್ನಮನೀ ಅಲೆ ಇತ್ತು.

ಸರಿ ಶಾಲೆಗೆ ಹೋಗಿ ಬಂದು ಮಾಡತಿದ್ದ ನಂಗೆ ನನ್ನ ಹೆಸರು ಬಿ ಪಿ ಎಮ್ ಶ್ಯಾಮನಿಂದ ಬದಲಾಗಿ ಬಿ ಪಿ ಎಮ್ ಶ್ಯಾಮು ವಾಗಿ ಪರಿಣಮಿಸಿದ್ದು ಗೊತ್ತಾಗಿದ್ದೇ ೭ ಮುಗದು ೮ ನೆತ್ತಿಗೆ ಹೋದಾಗ. ಆವಾಗ ಯನ್ನ ಮಾತ ಕೇಳವ್ಯಾರು?

ಸರಿಯಪಾ ಅಂತೂ ಇಂತೂ ಆಡ ಆಡತವ ೧೦ ಮುಗತ್ತು ... ಎಸ್ಸೆಸ್ಸೆಲ್ಸಿ ಸರ್ಟಿಪಿಕೇಟು ಬಂದಾಗ ಗೊತ್ತಾದದ್ದು - ಹಾಂ ನನ್ನ ಹೆಸರು ಶ್ಯಾಮು ಬಿ ಪಿ ಎಂ.

ಸರಿಯಪಾ... ಮುಗತ್ತು ಎಲ್ಲ ಯನ್ನ ಜೀವನದ ವ್ಯಾಸಂಗದ ಸಂಗ ಸಾಕು ಹೇಳಿ ಸರ್ವ ವ್ಯಾಸಂಗ ಪರಿತ್ಯಾಗಿಯಾಗಿ ನೌಕರಿಗೆ ಹೊರಟೆ. ಎರಡೆ ಮೂರೇ ವರ್ಷದಲ್ಲಿ ಯನ್ನ ಪಾನ್ ಕಾರಡು (PAN Card) ಮಾಡಸವು ಹೇಳದ ಕಂಪನಿಯವ್ವು. ಅದೆಂತಕೋ ಬೇಕಾಗ್ತಡ. ’ಸರಿ ನಿಂಗನೇ ಮಾಡಸಗಳಿ’ ಹೇಳಿ ಅನುಮತಿ ಕೊಟ್ಟೆ ತಗಳಪಾ.... ಯನ್ನ ಹೆಸ್ರನ ವನ್ನಮನಿ ಮತ್ತೊನ್ನಮನಿ ತಿದ್ದುಬುಟ ಅವು. ಮ್ಯಾಲಿಂದ ಅದೆಂತೋ ಅಪ್ಪನ ಹೆಸರೂ ಸೇರಿ ಬರವಡ ಹೇಳಿ ಯನ್ನ ಹೆಸರ ’ಶ್ಯಾಮ ಪರಮೇಶ್ವರ ಭಟ್ಟ’ ಹೇಳಿ ಮಾಡದ. ವನ್ನಮನೀ ಸರೀನೇಯ ಅನಿಸ್ತು ಯಂಗೆ ಆವಾಗ. ಯನ್ನ ಸಂತಿಗೆ ಅಪ್ಪಯ್ಯನೂ ಬಂದ ಹೇಳಿ ಖುಷಿನೇ ಆತು.

ಆತು ಅದಕೂ ತಲೆ ಕೆಡಿಸ್ಗಂಡಿದ್ನಿಲ್ಲೆ...... ಈಗ ಪಾಸಪೋರಟ ಮಾಡುವ ಪ್ರಸಂಗ ಬಂತು. ದರಿದ್ರ ಅದು. ಯಾನೇ ಬ್ಯಾರೆ ಬ್ಯಾರೆ ಹೇಳಾಗೋತು. ಈ ಬಿಪಿಎಂ ಶ್ಯಾಮು... ಶ್ಯಾಮು ಬಿಪಿಎಮ್ .....ಶ್ಯಾಮ ಪರಮೇಶ್ವರ ಭಟ್ಟ ಈ ಮೂರರಲ್ಲಿ ನೀ ಯಾರು ಅಂದ ಪೋಲೀಸನಂವಾ. ಆತ ಇಲ್ಯ. ಸಾಕಪಾ ಸಾಕು. !!

ಸರೀ .. ಈವಾಗ ಅಪ್ಪದಾಜು... ಮುಂದೆಂತ ಮಾಡವಪಾ ಹೇಳಿ ಅವಂದೇ ಭಾಷೆ (ಹಿಂದಿ) ಯಲ್ಲಿ ಕೇಳದೆ ಪೋಲೀಸಮಾವನ. ಅವನೇ ಉಪಾಯ ಹೇಳದ ಯೆಂತಪಾ ಅಂದ್ರೆ.... "ನೋಟರೀ ಹತ್ರ ಹೋಗು ... ವಂದು  ಅಫಿಡವಿಟ್ ಮಾಡಸು.... ಅದರ ಕಾಪಿ ತಗಂಡೋಗಿ ಯಾವುದಾದರೂ ಎರಡು ಪೇಪರಲ್ಲಿ (ದಿನಪತ್ರಿಕೆ .. ಅದೂ ವಂದು ಇಂಗ್ಲೀಷು ಇನ್ನೊಂದು ಸ್ಥಳೀಯ ಭಾಷೆಯಲ್ಲಿರವು) ಕೊಡು. ಕಡೆಗೆ ಮತ್ತೆ ಅರ್ಜಿ ಗುಜರಾಯಿಸು" ಹೇಳಿ... ಆತಾ... ಸರಿಯಪಾ ಅದೆಲ್ಲ ಮಾಡಿ ಈಗ ವನ್ನಮನಿ ಪಾಸಪೋರಟ್ ಮಾಡಕಂಡಾತು ಹೇಳಾತು. ಆದ ಖರ್ಚು ಬಿಡು... ಗಂಡ ಸತ್ತ ದುಃಖ ಬ್ಯಾರೆ.. ಬೋಳ್ ಕೆತ್ತದ ನೋವು ಬ್ಯಾರೆ ಹೇಳಿ ಹೇಳತ್ವಲೀ ಹಾಂಗೇಯ. ಈಗ ಎಲ್ಲ ನಿಶ್ಚಿಂತೆ ಹೇಳವಾಂಗೇನೂ ಇಲ್ಲೆ.... ಬ್ಯಾಂಕ್ ಅಕೌಂಟ್ ಲ್ಲಿ ವಂದು ಹೆಸರು.... ಪಾಸಪೋರಟಲ್ಲಿ ವಂದು ಹೆಸರು... ಎಲ್ಲ ವನ್ನಮನಿ ಚಿಂದಿ ಚಿತ್ರಾನ್ನ. 

ಹೋಗಲಿ ಈ ತಲೆಬಿಸಿ ಹೋಗಲಿ ಹೇಳೇ ಬರೆದ ಬರವಣಿಗೆ ಇದು ಬಿಲ.... ಈಗ ಗಜಾನನ ಗಣಪತಿ ಹೇಳಿ ಹೆಸರಿಟಗಂಡು ಗಜ್ಜು.. ಗಣು ಗಪ್ಪತಿ.. ಗಪ್ಪು ಹೇಳಿ ಕರೆತ್ವಿಲ್ಯ??!! ಅದಕಿಂತ ಯನ್ನ ಹೆಸರೇ ಅಡ್ಡಿಲ್ಲೆ,,... ಬಗೇಲಿ ಹೆಚ್ಚು ಕಮ್ಮಿ ಆದ್ರೂವ ಒಂಚೂರಾರು ಇದ್ದಲಿ... ತೊಂದರಿಲ್ಲೆ ಹೇಳಿ ಸಮಾಧಾನಮಾಡಕಂಡು ಬದಕ್ತ ಇದ್ದಾಜಪಾ... ದೇವರಿದ್ದಾ... ನೋಡಕತ್ತಾ... ದೊಡ್ಡಂವಾ ...ಅಲ್ದ?!! 





Feb 20, 2012

ಕೂಸಿನ ಕಥೆಗಳು - ವ್ಯಥೆ - ವಂದು ಪಿಟೀಲು

"ಕೂಸಿನ ಕಥೆ" ಅಂದಮಾತ್ರಕ್ಕೆ ಅದು ಕೂಸಿನ ಮಲಗಿಸವು ಹೇಳಿ ಹೇಳಿದ ಬಂಡು ಕಥೆ ಅಥವ ಮಕ್ಕಳ ಕಥೆ ಹೇಳಿ ತಿಳಕಂಬದು ಸಹಜ. ’ಕೂಸು’ ಅಂದರೆ ನನ್ನ ಮಗಳು ಹೇಳಿ ಸಾಮಾನ್ಯದ ಅರ್ಥ ಅಲ್ಲ. ’ಮಗು’ ಎಂಬ ಸಮಷ್ಟಿಯ ಅರ್ಥದಲ್ಲಿ ಹೇಳಿದ್ದು ಇಲ್ಲಿ. ಪ್ರತಿಯೊಬ್ಬ ತಂದೆ ತಾಯಿ ಮಕ್ಕಳ ದೊಡ್ಡ ಮಾಡಕಾರೆ ಇದೊಂದು ಪ್ರಮುಖ ಹಂತ. ಈ ಕಥೆಗಳು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ನಾವು ಪಾಲಕರು ಕೊಡಬಹುದಾದ ವಂದು ಸಣ್ಣ ಕೊಡುಗೆ. ಈ ಕಥೆಯೊಳಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನ ತುಂಬಿ ಆ ಮಗುವಿಗೆ ಉಣ್ಣಿಸಲಕ್ಕು.

 ಇನ್ನು ಇವತ್ತಿಗೆ... ಈ ’ನಿಮಿಷ’ಕ್ಕೆ ಪುರಾಣ ಪುರುಷರ ಬಗ್ಗೆ ಒಲವು - ಆಸಕ್ತಿ ಬಂಜು ... ಟಿವಿಯಲ್ಲಿ ಬಪ್ಪ ರಾಮಾಯಣ ಮಹಾಭಾರತ, ಕೃಷ್ಣ - ಹನಮಂತರ ನೋಡುಲೆ ಹಾತವರಿತು ಕೂಸು ಹೇಳಾದರೆ ಅದಕ್ಕೆ ಮೂಲ ಕಾರಣನೇ ಪ್ರತೀ ರಾತ್ರಿ ಆಕಳಿಸ್ತವ ಯಾ ಹೇಳ್ವ ಈ ಕೂಸಿನ ಕಥೆಗಳು.

ಈ ಕಥೆಗಳಲ್ಲಿ ಕೆಲವು ನೀತಿಪಾಠಗಳನ್ನು ಹೇಳುವ ಪ್ರಯತ್ನ ಮಾಡಿದ್ದೆ. ಕಥೆನ ಕೂಸಿಗೆ ಹೇಳಕಾರೆ ಏನೋ  ಮನಸ್ಸಲ್ಲಿ ಹೊಳೆದ ಕಥೆ ಕೆಲವಾದರೆ.. ಇನ್ನು ಕೆಲವು ಕರ್ಮ ಧರ್ಮ ಸಂಯೋಗದಿಂದ "ಕವಿ ಸಮ್ಮೇಳನ"ದಲ್ಲಿ ಕಿಮಿಗೆ ತಾಗಿ  ಹೋದ (ನಾಟಿದ) ಕಥೆಗಳು ಕೆಲವು. ಆ ಕಥೆಗೇ ಸಲ್ಪ ಬೆಣ್ಣೆ, ಉಪ್ಪು, ಖಾರ (ಮಸಾಲೆ) ಹಚ್ಚಿ ಶಣ್ಣದೊಂದು ಕಥೆಯ ರಾತ್ರಿ ಹಲವು ’ನಿಮಿಷ’ಗಳ ಕಥೆಯಾಗಿ ಹೇಳಕಾಗತು. ಅದು ನಂದೊಂದೇ ಅಲ್ಲ ...ಎಲ್ಲ ಅಪ್ಪ ಅಮ್ಮಂದಿರ ಖರ್ಮ. !!

 ಮಕ್ಕಳ ಕಥೆಗಳಲ್ಲಿ ಹಕ್ಕಿ ಹಾರಸೂಲಾಗತಿಲ್ಲೆ.... ಕೋಗಿಲೆ ಕೂಗತಿಲ್ಲೆ. ಅಂದರೆ ಸಾಹಿತ್ಯವಾಗಿ ಇದನ್ನ ನೋಡಿರೆ ಕೇವಲ ಕಥೆಗಳನ್ನಿಸಗು. ಆದರೆ ಈ ಕಥೆಗಳಲ್ಲಿ ನಾವು ಬದುಕಿದ - ಬದುಕುವ .. ನಮ್ಮ ಬದುಕಿನ ಚಿತ್ರಣಗಳ ಕೊಡುವ ಪೂರ್ಣ ಪ್ರಯತ್ನ ಮಾಡಲಕ್ಕು. ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿಪ್ಪ ಹಾಸ್ಯ... ಸೃಷ್ಟಿ ರೂಪ-ಕುರೂಪಗಳೇ ಇಲ್ಲಿ ಸಾಹಿತ್ಯವಪ್ಪದನ್ನ ಒಳಗಣ್ಣಿಂದ ನೋಡಲಕ್ಕು. 

 ಕಥೆಗಳ ಮಧ್ಯೆ  ಮಕ್ಕಳ ಸಂಶಯ ನಿವಾರಣೆನೂ ಮಾಡಕಾಗತು. ಯಾವುದೋ ವಂದು ಅರ್ಥವಾಗದ ಪದ ಬಂದರೆ ಅದಕ್ಕೇ ಹೇಳೇ ಬೇರೊಂದು ಕಥೆಯ ಹೇಳಕಾಗತು. ಇಲ್ಲಿ ನಮಗೆ ತಾಳ್ಮೆ-ಸಹನೆ ಎರಡೂ ಅವಶ್ಯ. ಇಲ್ಲದಿದ್ದರೆ ಕಥಾಭಾಗದ ಮುಂದರಿಕೆಗೆ ಹುಡ್ರು ಅವಕಾಶ ಕೊಡದೇ ನಂಗಳ ಇಡೀ ರಾತ್ರಿ ನಿದ್ದೆಗೆಡಿಸ ಸಂದರ್ಭನೂ ಇರಲಕ್ಕು ಮತೇ. ಎಷ್ಟೋ ಸಲ ಇನ್ನುಮುಂದೆ ಯಾವ ಕಥೆಯಲ್ಲೂ ಹೊಸ ಪದಗಳ ಪ್ರಯೋಗ ಮಾಡೂಲಾಗ ಹೇಳಿ ತೀರ್ಮಾನ ಅಲ್ಲ ಯೋಚನೆ ಮಾಡಿದ್ದು ಇದ್ದು. (ಅಲ್ಲ ತೀರ್ಮಾನನೇ ಮಾಡಿರೂವ ಅಪ್ಪ ಹೋಪ ಕೆಲಸಲ್ಲ ಅದು) !! 

ಹುಂ ಇನ್ನು ಕೆಲವು ಸಲ ನಮ್ಮ ಕಥೆಯ ಓಘ ಮತ್ತು ಧ್ವನಿಯ ಏರಿಳಿಕೆಯ ಗಮನಿಸ್ತ ಹುಡ್ರು. ಕೆಲವೊಂದು ಸಲ ಗೊತ್ತಾಗದ್ದೇ ಇದ್ದ ಶಬ್ದಕ್ಕೆ ಪ್ರಶ್ನೆ ವಗದರೂವ  ನಮ್ಮ ಧ್ವನಿ ಏರತ ಇದ್ದು ಹೇಳದನ್ನ ಗಮನಿಸಿ ’ಬಯ್ಸಗಂಬದು ಬ್ಯಾಡ’ ಹೇಳಿ ಹೊಂದಕತ್ತ. ಅದು ಹುಡುಗರಲ್ಲಿಪ್ಪ ಆ ಸಮಯದ ಮೂಡನ ಮೇಲಿರತು.  ’ತಡೆ ಮಲಯಾಳಕ್ಕೆ ಹೋಪಕಿಂತ ಮೊದಲೇ ಕಿಮಿ ಹರ್ಕಳಡಾ, ಹೇಳತೆ’ ಹೇಳಿರೆ ಕೆಲವೊಂದು ಸಲ ಸುಮ್ಮನಾಗತ. ಅದು ಮೊದಲೇ ಹೇಳದಾಂಗೇ ಅವರ ಮೂಡು ಮತ್ತು ನಾವು ಹೇಳುವ ಕಥೆಯ ಕುತೂಹಲದ ಪ್ರಮಾಣದ ಮೇಲೇ ಅವಲಂಬಿಸಿರತು. 

ಕೆಲವೊಂದು ಸಲ ಕಥೆ ಬೋರಿಂಗ್ ಆಗಿದ್ದಾಗ ಹುಡ್ರು ಬೇಗ ಮಲಗಿಬುಡತ. ಹಾಂಗೇಳಿ ಬೋರ್ ಆದರೆ ಬೇಗ ಮಲಗತ ಹೇಳಿ ತಿಳಕಂಡು ಬೋರಿಂಗ್ ಕಥೆನೇ ಹೇಳಿರೆ ಪಡ್ಚ. ಯೆಂತ ಮಾಡಿರೂ ಕಷ್ಟ ಮಕ್ಕಗೆ. ವಂದೊಂದು ಸಲ ಕಥೆ ಕುತೂಹಲಕಾರಿ ಆಗಿದ್ರೂ ಪಾಪ ತ್ರಾಸಾಗಿದ್ದಕ್ಕ ಏನ ....(ಇಡೀ ದಿನ ಗೆಯ್ಯತ್ವಲೀ ಹುಡ್ರು) ವರಗಿಬುಟಿರತ. ಆವಾಗ ಮತ್ತೊಂದು ಕಷ್ಟ ಯೆಂತು ಗೊತ್ತಿದ್ದ?? ನಾಳೆ ಬೆಳಗ್ಗಿಂದನೇ ಶುರುವಾಗತು ವರಾತ. ’ನಿನ್ನೆ ಹೇಳಿದ ಕಥೆಯ ಮತ್ತೊಂದು ಸಲ ಹೇಳು’  ...ಸರಿ ಹೇಳಿ ನಿಂಗವು ಮರದಿನನೂ ಅದೇ ಕಥೆ ಶುರು ಮಾಡಿರೆ...... ಹುಶಾರಾಗಿರವು. ಮುಂಚಿನ ದಿನ ಹೇಳದಾಂಗೇ ಹೇಳವು. ಹನಿ ಹೆಚ್ಚು ಕಮ್ಮಿ ಆತ... ಕೆಟ್ಟಾಂಗೇಯ.. ’ ಹಾಂಗಲ್ಲ ಪಪ್ಪಾ ಹೀಂಗೆ’ ನಮಗೇ ಕಲಿಸ್ತ. ಎಷ್ಟೋ ಸಲಿ ಮನಸಲ್ಲೇ ಅಂದಕಂಡಿದ್ದು ಇದ್ದು... ’ನೀ ಹುಟ್ಟುವ ೩೦ ವರ್ಷ ಮೊದಲೇ ಹುಟ್ಟಿದ್ದೆ ಯಾನು... ಯಂಗೇ ಕಲಿಸ್ತ್ಯ’ ಹೇಳಿ.... ಆದರೆ ಹುಡ್ರ ಎದರಿಗೆ ಧೈರ್ಯ ಬತ್ತಿಲ್ಲೆ... ಅದೂ ರಾತ್ರಪಾಗ!!

ಹುಂ .. ಕಥೆ ಹೇಳಿ ನಿಂಗಕ್ಕೆ ಬೇಜಾರು ಬಂದರೂವ... ಮಗು ಮಲಗತ ಹೇಳಿ ನೋಡೂಲಿಲ್ಲೆ.... ಆ ಪ್ರಯತ್ನನೇ ಯಾವ ಕಾರಣಕ್ಕೂ ಮಾಡೂಲಾಗ. ಮಾಡಿರೆ ಅವರ ವರಕನ ಮುಂದೂಡಿದ (ಪೋಸ್ಟ್ ಪೋನ್) ಹಾಂಗೇಯ. ಮತ್ತೊಂದು ಕಥೆ ಹೇಳುವ ಪ್ರಸಂಗ ಬಂದ್ರೂ ಬಂತು. ಸುಮ್ಮ ಸುಮ್ಮನೇ ಬಿಲಕ್ಕೆ ಕೈ ಹಾಕಿ ಕಚ್ಚಸಗಂಬಲಾಗ ಹೌದ

 ಕೊನೆಯದಾಗಿ ಆದರೆ ಮುಖ್ಯವಾಗಿ (ಲಾಸ್ಟ್ ಬಟ್ ನಾಟ್ ಲೀಸ್ಟ್)  ’ವ್ಯಥೆ’ ಅಂದ ಮಾತ್ರಕ್ಕೆ ಅದು ನಿಜವಾದ ವ್ಯಥೆ ಹೇಳಿ ತಿಳಕಳವು ಹೇಳಿಲ್ಲೆ. ಇದು ಇಛ್ಚಾ ಪ್ರಾರಬ್ದ ಹೇಳತ್ವಲೀ .. ಹಾಂಗೇಯ. ಕಿವಿಗೆ ಮೂಗಿಗೆ ಚುಚ್ಚಿಸಗಂಡರೆ ನೋವಾಗತು ಹೇಳಿ ಗೊತ್ತಿದ್ದೂ ಚುಚ್ಚಿಸಗಂಡು ಆಗತಿಲ್ಯ? ಅದು ಸುಖಕ್ಕೆ ಬೇಕು ಹೇಳಿ. ಹಾಂಗೇಯ... ಕೂಸು(ಮಗು) ಬೇಕು ಹೇಳಿ ಮಾಡಕಂಡದ್ದು. ಅದಕ್ಕೆ ಕಥೆ ಹೇಳೂ ಖರ್ಮನೂ ವಂತರ ಸುಖ ... ಅನುಭವಿಸಿದಾಗೇ ಗೊತ್ತಾಗವು.

 ಈ "ಕೂಸಿನ ಕಥೆಗಳು" ಹೇಳ ಶೀರ್ಷಿಕೆಯ ಯೆಲ್ಲ ಕಥೆಗಳನ್ನೂ ಓದಿ. ಓದಿರೆ ಮಾತ್ರ ಇದೆಲ್ಲ ಅರ್ಥ ಆಗತು... ಹವ್ಯಕ ಭಾಷೆ ಓದುಲೆ ಮೊದ ಮೊದಲು ಕಷ್ಟ ಆದರೂವ ಬರ ಬರತ ಯನ್ನ ಭಾಷೆ ವಗ್ಗತು ಹೇಳಿ ನಂಬಿಕೆ ಇದ್ದು. ಮಜಾ ಬರಲಕ್ಕು ಹೇಳಿ ಆಶೆ. ನೋಡ್ವ.

Feb 15, 2012

ಮರ್ಯಾದಾ ಪುರುಷೋತ್ತಮ ರಾಮ


ವಂದು ಸಲವಾ ರಾವಣ ಗೋಳೋ ಹೇಳಿ ಹತ್ತು ಬಾಯಿಂದ ತೀಡತ ಕುಂತಿರತ. ಊಟನೂ ಮಾಡತ್ನಿಲ್ಲೆ.  ರಾವಣನ ಹೆಂಡತಿ ಮಂಡೋದರಿ ಎಷ್ಟೇ ವತ್ತಾಯ ಮಾಡಿರೂ ಊಟ ಮಾಡತ್ನಿಲ್ಲೆ. ’ಯಂಗೆ ಹಶಿವಿಲ್ಲೆ” ಹೇಳತ.

ಮಂಡೋದರಿ ಆದರೂ ಬಿಡದೇ ಪ್ರೀತಿ ಮಾಡಕಂಡು ’ಎಂತಾ ಆತೂ ಅದನಾರೂ ಹೇಳಿ... ಸುಮ್ ಸುಮ್ಮನೇ ಹಶಿವಿಲ್ಲೆ ಅಂದರೆ ಯಾ ನಂಬತ್ನಿಲ್ಲೆ .. ಹತ್ ಬಾಯಲ್ಲಿ ಹತ್ ಮಣ ಅನ್ನ ತಿಂಬವು ನೀವು.. ಯಂಗೊತ್ತಿಲ್ಯ... ಇವತ್ತೆಂತೋ ಬೇಜಾರಲ್ಲಿ ಬಂಜ್ರಿ... ಯೆಂತ ಆತು ಹೇಳಕಳಿ.... ಮನಸೂ ಹಗೂರಾಗತು’ ಹೇಳತು 

'ಎಂತ ಹೇಳಕಂಬದೇ? ಸಾಯಲಿ... ಆ ಸೀತೆ ಯಂಗೆ ವಲೀತಿಲ್ಲೆ..... ಯೆಂತ ಮಾಡವೇ ಯಾನು.... ಅದು ವಂದ್ ಸತಿ ಕಣ್ಣೆತ್ತಿ ಯನ್  ಮೊಕ ನೋಡಬುಟಿದ್ರೆ ಉದ್ದಾರಾಗೋಗತಿದ್ದೆ... ಅದಕ್ ಹಠ... ನೋಡುಲೇ ತಯಾರಿಲ್ಲೆ’ ಹೇಳತ ರಾವಣ.

’ಅಯ್ಯ ಇಷ್ಟಕ್ಕೇ ತೀಡೂದ? ನಿಮಗೆ ಹೇಕೊಡವ? ಮಾಯಾ ರಾವಣ ಹೇಳಿ ಕರೆತ ನಿಮಗೆ ಯೆಲ್ಲವ...ಮಾವನ್ನೇ ಚಿನ್ನದ ಜಿಂಕೆ ಮಾಡಿದ್ರಿ ...ರಾಮನ ಹಾಂಗೇ  ವೇಷ ಹಾಯ್ಕಂಡು ಹೋಗಿ ಸೀತೆ ಹತ್ರಕ್ಕೆ... ನಿಮ್ಮನೇ ರಾಮ ಹೇಳಿ ತಿಳಕಂಡು ವಲೀಗು’ ಹೇಳಿ ಐಡಿಯಾ ಕೊಡತು ಮಂಡೋದರಿ. ಎಷ್ಟಂದರೂ ರಾವಣ ಬುದವಂತ.... ಸಾವಾಸದಿಂದ ಮಂಡೋದರಿನೂ ಹುಶಾರಾಗಿತ್ತು. 

’ಅಯ್ಯ ಮಳ್ ಮಂಡೋದರಿ... ಯಾ ಯೆಂತ ದಡ್ಡ ಮಾಡಕಂಬುಟ್ಯ?? ಅದೆಲ್ಲ ಮಾಡಿ ನೋಡಿದ್ನೇ... ಆಗತಿಲ್ಲೆ... ನಾ ರಾಮನ ವೇಷ ಹಾಯ್ಕಂಡು ಹೋಗವು ಹೇಳಿ ಸುಮಾರು ಸಲ ಪ್ರಯತ್ನ ಮಾಡಿದ್ದೆ.... ಆದರೆ ಯಾವಾಗ ನಾ ರಾಮನ ವೇಷ ಹಾಯ್ಕತ್ನ ಆವಾಗೆಲ್ಲ ಕಂಡ ಕಂಡ ಹೆಂಗಸರೆಲ್ಲ ಅಮ್ಮನ ಹಾಂಗೇ ಕಾಣತ್ವೇ. ಆ ರಾಮ ಯೆಂಥ ಮಹಾಪುರುಷ ಹೇಳಿ ಅರ್ಥ ಆತೇ ಈಗ’ ಅಂದ್ನಡಾ

(" ರಾಮನ ವೇಷ ಹಾಯ್ಕಂಡ್ರೇ ರಾಮನ ಗುಣ ಬತ್ತು ಹೇಳಾದರೆ ಖುದ್ದು ರಾಮ ಎಷ್ಟು ಆದರ್ಶ ಆಗಿಕ್ಕು...ರಾಮನ ವ್ಯಕ್ತಿತ್ವಕ್ಕೆ ಇದಕ್ಕಿಂತ ಉದಾಹರಣೆ ಬೇಕ?" ಹೇಳಿ ಮುಗಿಸಕಾಗಿತ್ತು ಕಥೆಯ... ಆದರೆ ಯಾವಾಗನ ಹಾಂಗೇಯ ಕೆಲ ಕ್ಲಿಷ್ಟ ಪದ ನಮಗೇ ಮುಳ್ಳಾಗತಲೀ ಹೇಳಿ ಮನಸಲ್ಲಿ ಬಂತು. ಸುಮ್ಮಂಗಾದೆ)
 (ಇಷ್ಟು ಕಥೆ ಕೇಳತ ಕೇಳತ ಬಹುಶಃ ಮಲಗಿಕ್ಕು ಕೂಸು ಹೇಳಿ ಮೊಕ ನೋಡೀರೇ ಕಣ್ಣು ಮುಚ್ಚಕಂಡೇ ಇತ್ತು ಕೂಸು. ಸರಿ ಹೇಳಿ ನಾನೂ ಕಣ್ ಮುಚ್ಚುವ ತಯಾರಿ ಮಾಡದೆ.... ೫-೬ ಸೆಕೆಂಡಲ್ಲೇ.... ’ಇಷ್ಟ್ ಸಣ್ ಕಥೇ.... ಮತ್ತೊಂದು ಹೇಳು ಟೂ ಟೂ ಕಥೆ ಹೇಳು ಪಪ್ಪಾ’ ಹೇಳಿದ್ದ ಕೇಳಿ ಕಣ್ ಬಿಡಕಾತು. ”ಹಣೇಬರವೇ.... ಮಧ್ಯಾಹ್ನ ಜಾಸ್ತಿನೇ ಮಲಗ್ಸ್-ಬುಟಿತ್ತಕು ಯಮ್ಮನೆ ಪ್ರಾಣಿ ಥೋ’ ಹೇಳಿ ಮನಸಲ್ಲೇಯ ಹೆಂಡತಿಗೆ ಶಾಪ ಹಾಯ್ಕಂಡು ಮತ್ತೊಂದು ಕಥೆ ಹೆಣದೆ ...ಹೆಣಗಾಡದೆ.)

ಮತ್ತೊಂದ್ ಬದೀಗೇ ಬೀಚ್ ನಲ್ಲಿ ವಾನರ ಸೇನೆ ಹನಮಂತನ ಮುಂದಾಳತ್ವದಲ್ಲಿ ಲಂಕೆಗೆ ಹೋಪುಲೆ ದಾರಿ ಬೇಕಾತಲೀ..... ರಾವಣನ ಸೋಲಸಿ ಸೀತೆ ಕರ್ಕ ಬಪ್ಪುಲೆ. ಅದಕೆಯ ಸೇತುವೆ (ಬ್ರಿಜ್) ಕಟ್ಟೂ ತಯಾರಿ ಮಾಡತ ಇರತ. ಬ್ರಿಜ್  ಕಟ್ಟುಲೆ ದೊಡ್ ದೊಡ್ ಕಲ್ಲ ಗುಡ್ಡದಿಂದ ತಗಂಬಂದು ಸಮುದ್ರಕ್ಕೆ ಹಾಕತ ಇರತ. ಆದರೆ ಪಾಪ ಎಷ್ಟ್ ಕಲ್ಲ್ ಹಾಕಿರೂವ ಹಾಕಿದ ಕಲ್ಲೆಲ್ಲವಾ ಮುಳಗೇ ಹೋಗತು ಪಾಪ. ಆ ಸಮುದ್ರಕ್ಕೆ ಯಾವ ಕಲ್ಲೂ... ಎಷ್ಟ್ ದೊಡ್ ಕಲ್ಲೂ ತಾಗತಿಲ್ಲೆ. ಹನಮಂತಂಗೆ ತಲೆಬಿಶೀ ಆಗೋಗತು. ರಾಮ್ ರಾಮಾ ಹೇಳಕತ್ತ ರಾಮನ ಹತ್ರ ಬತ್ತ. 
"ವಡ್ಯ, ವಾನರ ಸೇನೆ ಸೇತುವೆ ಕಟ್ಟವು ಹೇಳಿ ಹೆಣಗಾಡತ ಇದ್ದು. ಆದರೆ ಯೆಂತ ಮಾಡವು ಹೇಳೇ ಗೊತ್ತಾಗತ ಇಲ್ಲೆ. ಸಮುದ್ರಕ್ಕೆ ಹಾಕಿದ ಕಲ್ಲೆಲ್ಲವ ಮುಳಗಿ ಹೋಗತಿದ್ದು. ಯೆಂತಾರೂ ಮಾಡಿ ಸ್ವಾಮಿನ" ಹೇಳಿ ಕೈ ಮುಗದ್ನಡ.  

(ಇಲ್ಲಿ ಕಥೆಯ ಹೆಣೆತ ಮತ್ತು ಓಘದ ಮದ್ಯೆ ’ವಡ್ಯ’ ಹೇಳೂ ಶಬ್ದ ಕೂಸಿಗೆ ಹೊಸದು ... ಹೊಸ ಶಬ್ದ ಪ್ರಯೋಗ ಮಾಡೂಲಾಗ ಹೇಳೂದೇ ಮರತೋಗಿತ್ತು. ಸಿಕ್ ಬಿದ್ದಿದ್ದೆ. "ಹೇ ಹೆ... ವಡ್ಯಾ... ವಡ್ಯ ಹೇಳಿ ಯಾರಿಗೆ ಹೇಳತ ಹನಮಂತ? ಯೆಂತಕೆ ಹೇಳತ?" ಹೇಳಿ ವಟ್ಟೊಟ್ಟಿಗೇ ಬಂದ ಪ್ರಶ್ನೆಗೆ ಆಹುತಿ ಆದೆ. "ವಡ್ಯ ಅಂದರೆ ಬಾಸ್ ಹೇಳದಾಂಗೆ... ಸರ್ ಹೇಳದಾಂಗೇ.... ಹನಮಂತ ರಾಮಂಗೆ ಹಾಂಗೇ ಕರೆತಿದ್ದ" ಹೇಳಿ ಒಕ್ಕಣೆ ಕೊಡಕಾತು. ಇದರಿಂದ ಕೂಸಿನ ವರ್ಕಕ್ಕೂ ಪೋಸ್ಟ್ ಪೋನ್ ಕೊಟ್ಟಂಗಾತು....”ದೇವರೇ ಮೂರನೇ ಕಥೆ ಹೇಳೂ ಪ್ರಸಂಗ ಬರದೇ ಇರಲಪ’ ಹೇಳಿ ಬೇಡಕಂಡೆ) 

 ಆವಾಗ ರಾಮ ಹನಮಂಗೆ ಹೇಳತ.... ’ಹೆದರಡ ಹನಮಂತ..ನಿಂಗೆ ವಂದು ಕಲ್ಲ ಮಂತ್ರಿಸಿ ಕೊಡತೆ... ಸಮುದ್ರ ರಾಜಂಗೆ ಕೈ ಮುಕ್ಕಂಡು ಸಮುದ್ರಕ್ಕೆ ಹಾಕು.. .ಎಲ್ಲ ಸುರಳೀತ ಆಗತು’ ಹೇಳಿ ವಂದು ಕಲ್ಲ ಮುಟ್ಟಿ ಮಂತ್ರ ಮಾಡಿ ಹನಮಂತಂಗೆ ಕೊಡತ. ಹನಮ ಭಕ್ತಿಯಿಂದ ಆ ಕಲ್ಲ ಹೆಗಲ ಮ್ಯಾಲೆ ಹೊತಗಂಡು ಹೋಗಿ ಆ ಕಲ್ಲಿನ ಮ್ಯಾಲೆ ’ಶ್ರೀರಾಮ’ ಹೇಳಿ ಬರದು ಸಮುದ್ರಕ್ಕೆ ಹಾಕತ.... ಆಕಲ್ಲು ಮುಳುಗದೇಯ ಗಟ್ಟಿ ಕುಂತಗತ್ತು.

ಕಡೆಗೆ ಹನಮಂತ ಅವನ ವಾನರ ಸೇನೆ ಯೆಲ್ಲ ಕಲ್ಲಿನ ಮ್ಯಾಲೂವ ’ಶ್ರೀರಾಮ’ ಹೇಳಿ ಬರದೂ ಬರದೂ ಸಮುದ್ರಕ್ಕೆ ಹಾಕತ... .ಕಲ್ಲಿನ ಸೇತುವೆ ತಯಾರಾಗತು.

(ಕೂಸು ಮಲಗತ ಹೇಳಿ ಪರೀಕ್ಷೆ ಮಾಡಿ ನೋಡ್ವ ಕಂಡತು... ತಂಗೀ ನಿದ್ ಬಂತ ಕೇಳಿದ್ದಕ್ಕೆ ಉತ್ತರ ಬರದ್ದೇ... ’ಮುಂದ್ ಹೇಳು’ ಹೇಳಿ ಆರ್ಡರ್ ಬಂತು. ವಟೂ ಇವತ್ತು ಕಷ್ಟಿದ್ದಪ ಅನ್ಸಿ ಹೋತು)

ಸೇತುವೆ ತಯಾರಾದ ಸುದ್ದಿ ಲಂಕೆವರೆಗೂ ಮುಟ್ಟತಡ.  ಲಂಕೆಯ ಎಲ್ಲ ಜನ  ಮಾತಾಡಕಂಬಲೆ ಶುರು ಮಾಡದ್ವಡ. ಹೀಂಗಡಾ ಹಾಂಗಡಾ.. ರಾಮನ ಹೆಸರು ಬರದ್ರೆ ಕಲ್ಲು ತೇಲತಡಾ ಹೇಳಿ ಸುದ್ದಿ ಆಗಿ ಜನ ಸಮುದ್ರ ದಂಡೆಗೆ ಹೋಗಿ ರಾಮ ರಾಮ ಹೇಳಿ ಬರದೂ ಬರದೂ ಸಮುದ್ರಕ್ಕೆ ಹಾಕಿ ಪರೀಕ್ಷೆ ಮಾಡೂಲೆ ಹಣಕದ್ವಡ. ಆದರೆ ವಂದು ಕಲ್ಲೂ ತೇಲಿದ್ದಿಲ್ಯಡ ಲಂಕೆಯ ಸಮುದ್ರದಲ್ಲಿ.

ಈ ಅಡಾಪಡಾ ಸುದ್ದಿ ಮಂಡೋದರಿ ಕಿವಿಗೂ ಬಿತ್ತು ಹೇಳಾತು... ಹೆಂಗಸರಿಗೇ ಮೊದಲು ಸುದ್ದಿ  ಗೊತ್ತಪ್ಪುದು. ರಾವಣನ ಹತ್ರ ಬಂದು ಹೇಳತಡ.. ’ಹೌದಾ .. ಕೇಳತಾ?? ನೋಡಕಾಗಿತ್ತು.. ಅದು ಹೇಂಗೆ ತೇಲತು ಹೇಳಿ.... ಆದರೆ ಇಲ್ಲಿ ರಾಮ ಹೇಳಿ ಬರದು ಹಾಕದ ಕಲ್ಲು ತೇಲತಿಲ್ಯಡ... ಯೆಂತನ ವಿಚಿತ್ರನಪಾ!’ 
ರಾವಣ ’ಓ ಅದೇನು ಮಹಾ.... ಮಳೀ ಅಲ್ಲಿ ರಾಮನ ಜಾಗ ಅವನ ಹೆಸರಿನ ಕಲ್ಲು ತೇಲತು... ಲಂಕೆ ಯಂದಲ್ಲದನೇ... ಇಲ್ಲಿ ರಾವಣ ಹೇಳಿ ಬರದ್ರೆ ತೇಲತು... ಆ ಜನಕ್ಕೆ ಬುದ್ದಿಲ್ಲೆ ಹೇಳೀ ನಿಂಗೂ ತಲೆಲಿ ಯೆಂತೂ ಇಲ್ಯನೇ?’ ಅಂದ್ನಡ.

ಮಂಡೋದರಿಗೆ ತಡಕಂಬಲೇ ಆಜಿಲ್ಯಡ. ’ಒಹೋ ಹಾಂಗ?... ಹಾಂಗರೆ ವಂದು ಸಲ ನೋಡಕಾಗಿತ್ರ ಯಂಗೂವ’ ಅಂತಡ. 
’ಹೆದರಡ... ನೀ ಕೇಳೂದೆಚ್ಚ... ನಾ ತೋರಸೂದೆಚ್ಚ .. ಬಾ ತೋರಸ್ತೆ.... ಯಾನೇ ಖುದ್ ಬತ್ತೆ. ಬಾ’ ಹೇಳಿ ಸಮುದ್ರ ದಂಡೆಗೆ ಕರಕಂಡು ಹೋದ್ನಡ.
 ಹೋಗಿ ವಂದು ದೊಡ್ ಕಲ್ಲು ತಗಂಡು ಅದ್ರ ಮೇಲೆ ’ರಾವಣ’ ಹೇಳಿ ಬರದು ಯೆಂತೆಂತೋ ಮಂತ್ರ ಮಾಡದಾಂಗೆ ಮಾಡಿ ಸಮುದ್ರಕ್ಕೆ ಹೊತಾಕದ್ನಡ. ನೋಡೀರೆ ಪವಾಡದಾಂಗೇಯ ಆ ಕಲ್ಲೂ ತೇಲುಲೆ ಹಣಕತಡ. 


(ಮಧ್ಯ ವಂದ್ ಸಲ ಕೂಸು ಮಲಗತ ನೋಡ್ವ ಹೇಳಿ ಕುತೂಹಲ ಬಂದ್ರೂವ ಎದಬುಟ್ರೆ ಹೇಳಿ ಹೆದರಿಕೆಯಿಂದ ...ಸುಮನೇ ಬಿಲಕ್ಕೆ ಕೈ ಹಾಕಿ ಕಚ್ಚಸಗಂಬೂದೆಂತಕೆ ... ಕಥೆನೇ ಮುಂದವರಸುದು ಲಾಯಕ್ಕು ಕಂಡತು)

ಮಂಡೋದರಿಗೆ ಆಶ್ಚರ್ಯ ... ಆದರೂ ವನ್ನಮನಿ ಸಂಶಯ. ’ಯಮ್ಮನೇವು ಯೆಂತಾರೂ ಕಿತಾಪತಿ ಮಾಡದ್ದೇ ಇಪ್ಪವಲ್ಲ .. ಯೆಂತೋ ಮಾಡಿರವು’ ಹೇಳಿ ಮನಸಲ್ಲಿ ಅದಕೆ. ಮನೆಗೆ ಬರಕಾರೆ ತಡಕಂಬಲಾಗದೇ ’ಅದೇಂಗೆ ತೇಲವಂಗೆ ಮಾಡಿದ್ರಿ?? ಖರೇ ಹೇಳಿ.... ರಾಮ ಆದರೆ ದೇವರು - ಯೆಂತೂ ಮಾಡಲಕ್ಕು.. ನೀವೆಂತ ಕುತಂತ್ರ ಮಾಡಿದ್ರಿ... ಯನ್ ಮೇಲೆ ಆಣೆ’ ಅಂತಡ. 

ಸುಮ್ನಿರೇ ಯೆಂತೂ ಇಲ್ಲೆ.... ಆ ಕಲ್ಲಿಗೆ ಮಂತ್ರ ಗಿಂತ್ರ ಯೆಂತು ಹಾಕಿದ್ನಿಲ್ಲೆ..... ಹಾಕಕಾರೆ ಕಲ್ಲಿಗೆ ಹೇಳಿದಿದ್ದೆ.. ’ನೀ ಮುಳಗಿದರೆ ಶ್ರೀ ರಾಮನ ಆಣೆ’ ಹೇಳಿ.. .ಅದಕೇ ಅದು ತೇಲತಿದ್ದು ಮಳೂ.’ನೀ ಯನ್ನ ಸರೀ ಅರ್ಥ ಮಾಡಕಂಜ್ಯೇ ಮಾರಾಯ್ತಿ’  ಅಂದ್ನಡ.

ನೋಡು ಹೌದ... ರಾಮ ಅಂದ್ರೆ ಮರ್ಯಾದಾ ಪುರುಷೋತ್ತಮ... ಕಲ್ಲಿಗೂ ಅವನ ಮ್ಯಾಲೆ ಗೌರವ ಇದ್ದು ಅಂದ್ರೆ ಅಂವ ಯೆಷ್ಟು ದೊಡ್ಡ ದೇವರಾಗಿಕ್ಕು ಹೌದ.. ಅದಕೇಯ ರಾಮನ ಭಜನೆ ಯಾವಾಗಲೂ ಮಾಡವು... ಮಲಗಕಾರೆ ಹೇಳವು
"ಶ್ರೀ ರಾಮ ಜಯರಾಮ ಜಯ ಜಯ ರಾಮ. ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ"
(ಹೇಳಿ ಮುಗಿಸಕಾರೆ ಅಂದಾಜು ಹಾಕಿದಿದ್ದೆ... ಮದ್ ಮಧ್ಯ ವಂದೊಂದು ಹೊಸ ಪದ ಬಂದರೂ ಪ್ರಶ್ನೆ ಯೆಜ್ಜಿಲ್ಲೆ... ಅಂದರೆ ಕೂಸು ಸುಖನಿದ್ರೆಗೆ ಜಾರಿಕ್ಕು ಹೇಳಿ .... ಅದು ಹೌದು .... ಹರೇ ರಾಮ ರಾಮ)

Feb 14, 2012

ಗ್ವಾಕರ್ಣ ಮಜಗೆ

ಪೀಟೀಲು (ಪೀಠಿಕೆ)
ಗಂಗಂಣನ ’ಬೆಟ್ಟೆಟ್ಟು ಬಿಸ್ನೀರು’ ನ ಪ್ರಭಾವಕ್ಕೆ ಒಳಗಾಗಿ ನೆನಪು ಮರುಕಳಿಚಿದ ಮಜ್ಜಿಗೆನೇ ’ಗ್ವಾಕರ್ಣ ಮಜ್ಜಿಗೆ’

ಬಂದ್ಯನ? ಆಸ್ರಿಗ? ಕೇಳದು ಹವ್ಯಕರ ಪದ್ದತಿ - ಸಂಸ್ಕೃತಿ. ಘಟ್ಟದ ಮ್ಯಾಲಣ ಹವೆ ತಂಪಾಗಿಪ್ಪದರಿಂದ ಆಗಿರವು ಅಲ್ಲಿ ಬೆಟ್ಟೆಟ್ ಬಿಸ್ನೀರು ಸರ್ವೇ ಸಾಮಾನ್ಯ. ಆದರೆ ಘಟ್ಟದ ಕೆಳಗೆ ಕರಾವಳಿಯ ಬಿಸಿ ಹವೆ ಆಸರಾಗಿ ಬಂದ ನೆಂಟಂಗೆ ಮಜಗೆಯೇ ಆಸರಿ ಆಗತು. ಮನೆಯ ಕೊಟಗೇಲಿ ಯೆಮ್ಮೆ ಬತಸಗಂಡ್ರೂವ ಬಂದವಕೆ ಹುಳಿ ಮಜಗೆನಾದರೂ ಕೊಟ್ಟು ಸಮಾಧಾನ ಮಾಡಕಾತಲೀ. ಇದು ಹೈಗತಿಯ ಕಷ್ಟ ಪಾಪ. ಅದಕೇ ಈ ಗ್ವಾಕರ್ಣ ಮಜಗೆ. 

(ಗಂಗಂಣನ ಕ್ಷಮೆ ಮತ್ತು ಅನುಮತಿ ಕೇಳತವಾ... ಅವಂದೇ ನಿರೂಪಣೆಯಲ್ಲಿ) 

  ಗ್ವಾಕರ್ಣ ಮಜಗೆ ಮಾಡುವ ವಿಧಾನ:
========================

ಅ) ಬೇಕಾಗುವ ಸಲಕರಣೆ

=========================================
) ಕೌಳಗೆ
) ಲೋಟ (ಉದ್ದೀದು)
) ಹುಳ್ ಮಜಗೆ ಶಿಕ್ಕ

ಆ) ಬೇಕಾಗುವ ಸಾಮಾನುಗಳು
=========================================
) ನೀರು
) ಮಜಗೆ (ಹತ್ರ ನೆ೦ಟರಿಗೆ ಮಾತ್ರ )
) ಉಪ್ಪು

ಇ) ಮಾಡುವ ವಿಧಾನ
=========================================
) ಬ೦ದವರ ಮಾತಾಡಸವು
) ಬ೦ದವ್ವು ದೂರದವ್ವ ಹತ್ತರದವ್ವ ನೋಡವು
) ಕ೦ಚಿನ ಕೊಡಪಾನದಿಂದ ಕೌಳಗೆ ನೀರು ಎರಸವು.

) ಅದಾದ ಮೇಲೆ ಹುಳ್ ಮಜ್ಗೆ ಶಿಕ್ಕದ ಹತ್ರೆ ಬರವು. ಶೀಂ ಮಜಗೆ ಶಿಕ್ಕದ ಹತ್ರ ಹೋಪಲಾಗ... ಮನೆಯವಕೆ ಬೇಕಾಗತು.
) ಅಲ್ಲಿ ದೂರದ ನೆ೦ಟ ಆದ್ರೆ ಮಜ್ಗೆ ಶಿಕ್ಕದಿಂದ ನೀರಿಗೆ ಹುಳ್ ಮಜಗೆ ತೋರಿಸವು. ಹೆಚ್ಚು ಅಂದ್ರೆ ನೀರಿನ ಬಣ್ಣ ಹೋಪಸ್ಟು ಮಾತ್ರ ಮಜ್ಗೆ ಹಾಕವು
) ರಾಶಿ ಬೆಳಿಕೆ ಆಪಲಾಗ. ಯಮ್ಮಿಗೆ ಕಣ್ ಬಿದ್ದೊಗ್ತು.
) ಈಗ ತಗ೦ಡು ಹೊರಗೆ ಬರವು
) ಹೊರಗೆ ಬಪ್ಪಕಿದ್ರೆ ಪ್ರಧಾನ ಭಾಗ್ಲ ದಾಟತವ ಕೌಳಗೆಯಿಂದ ಲೋಟಕ್ಕೆ - ಲೋಟದಿಂದ ಕೌಳಗೆಗೆ ಎರಡ್ -ಮೂರ್ ಸತಿ ನೊರೆ ಬಪ್ಪಾಂಗೇ (ಹುಳಿ ಇರತಲೀ ಹ್ಯಾಂಗೂವ) ಮೇಲೇ ಕೆಳಗೆ ಮಾಡಿ ಹೊಡೆಯವು.  
) ಉಪ್ಪ ಹದಾಕೆ ಹಾಕಿರೆ ಸಾಕು ಬಿಲ.
) ತ೦ದು ಹೊರಗೆ ಅಡವರ್ಯವು.

ಈ) ಸೂಚನೆ:

=========================================
) ನೆ೦ಟ ಮುಕ್ಕಾಲು ಕುಡಿದ ನ೦ತರ ಉಪ್ಪು ಸಾಕನ ತಮ ಹೇಳವು
) "ಯಮ್ಮಲ್ಲಿ ಉಪ್ಪು ಕಮ್ಮಿ ತಿ೦ತ್ಯ" ಹೇಳವು.
) ನೆಂಟಂಗೆ ಕುಡದಾದ ಮ್ಯಾಲೆ ತಂಪಿದ್ದನ ಕೇಳವು.
) ಈ ಶೆಕೆಲಿ ಮಜಗೆ ಹುಳಿಯಾದ್ರೂ ಕುಡದಷ್ಟೂ ಆರಾಮು ಹೇಳವು.
) ಇದಕ್ಕೆ ಗ್ವಾಕರ್ಣ ಮಜಗೆ ಹೇಳಿ ಹೆಸರಿಟ್ಟ೦ವ ಆನಲ್ಲ. ಆ ಶಣ್ಣಿರಕಾರಿಂದ ಕೇಳಿದ ಹೆಸರೇ ಇದು. ನಾಮಕರಣ ಮಾಡಿದ ಪುಣ್ಯಾತ್ಮ ಯಾರ.
) ಇದು ಗಂಗಂಣನ ನಿರೂಪಣೆ ಆಗಿದ್ದರಿಂದ ಆಶಿರ್ವಾದಪೂರ್ವಕವಾಗಿ ಪೀಜು  ಇಲ್ಲೆ.
) ಮದ್ವೆ-ಉಪ್ನೆನ-ಶ್ರಾಧ್ಧಕ್ಕೆ ಕರ್ಯಲೇ ಹೋದವ್ಕೆ ಗ್ವಾಕರ್ಣ ಮಜಗೆ ಸರ್ವೇ ಸಾಮಾನ್ಯ.
) ಶ್ರೀ ಕ್ಷೇತ್ರ ಗೋಕರ್ಣಕ್ಕೂ ಈ ಮಜಗೇಗೂ ಸಂಬಂಧ ಅಸ್ಪಷ್ಟ. (ಕ್ಷಮಿಸಿ) 

ಕೆಂಪೀ ಹನಮಾ

’ಹನಮಂತ ಕೆಂಪಕೆ ಯೆಂತಕಿದ್ದಾ?’ ಹೇಳ ಪ್ರಶ್ನೆ ಮರುದಿನ ನೆನಪಾತು ಕೂಸಿಗೆ. ಅದೂ ಬೆಳಗ್ಗೆ ಎದ್ದ ಕೂಡಲೇಯ. ’ಈಗಲ್ಲ ಮುದ್ದೂ...ಈಗ ನೀ ಶಾಲೆಗೆ ಹೋಗಿ ಬಂದು  ಊಟ ಮಾಡಕಂಡು ಮಲಗಿ ಎದ್ದಕ. ಅಷ್ಟರ ಒಳಗೆ ಪಪ್ಪ ಬತ್ತೆ...ಸಂಜಪಾಗ ಮಲಗಕಾರೆ ಕಥೆ ಹೇಳತೆ’ ಹೇಳಿ ಸಮಾಧಾನ ಮಾಡಿದ ಮ್ಯಾಲೆ ಕೂಸು ಸುಮ್ಮಂಗಾತು ಅಂತೂವ. ’ದ್ಯಾವರೇ ಏನ್ ಕಷ್ಟಾ’ ಅಂತು ಯಮ್ಮನೆ ಪ್ರಾಣಿ.

ಸಂಜೆ ಊಟ ಮಾಡಿ ಮಲಗ ಹೊತ್ತಲ್ಲಿ ಶುರು ಆತು ವರಾತ. ’ಪಪ್ಪಾ... ಕಹಾನೀ ಸುನಾವ್... ನೀ ಸುಬಹ್ ಹೇಳಿದ್ಯಲ. ನಾನು ಲಂಚ್ ಡಿನ್ನರ್ ಎಲ್ಲ ಮಾಡಿದ್ದೆ. ದೂದೂ ಕುಡದ್ದೆ.... ನೌ ಸ್ಟೋರೀ’ ಹೇಳಿ ಹಿಂದಿ ಇಂಗ್ಲೀಷ್ ಮಿಸಳ್ ಹೈಗ ಭಾಷೆಲಿ. ವಂದ್ ನಮನಿ ಯೋಚನೆ ಮಾಡಿರೆ ಯನ್ ಮಗಳು ಎರಡು ಮೂರು ಭಾಷೆಲಿ ಮಾತಾಡತು ಹೇಳಿ ಖುಷಿ ಆದರೂವ...ಮತ್ತೊನ್ನಮನಿ ಯೋಚನೆ ಮಾಡೀರೇ... ’ಅಯ್ಯ ರಾಮ ಎಲ್ಲ ಭಾಷೆಯ ಮರ್ಯಾದೆ ತೆಗತ್ತಲೀ ಇದು’ ಅನ್ಸಿ ಹೋಗತು ಆ ಪ್ರಶ್ನೆ ಬ್ಯಾರೆ.  ಆದರೆ ವಂದ್ ಮಾತ್ರ ಸುಳ್ಳಲ್ಲ...ಈ ಮೂರೂ ಭಾಷೆಯ ಯಾವುದೇ ಶಬ್ದ ಕೇಳಿರೂವ ಅದರ ಅರ್ಥ ಗೊತ್ತಿದ್ದು ಅದ್ಕೆ ಬಿಲ.. ಅದೆಂತದೋ ತರ್ಜುಮೆ ಹೇಳತ್ವಲೀ... ವಾಕ್ಯ ತರ್ಜುಮೆ ಮಾಡುಲೆ ಬರದ್ದೇ ಇದ್ರೂವ... ಶಬ್ದದ ತರ್ಜುಮೆ ಮಾಡತು ಹೇಳೇ ಖುಷಿ ನಮಗೆ.
ಸರಿ ’ಕೆಂಪಿ ಹನಮ’ ಈಗ (ಹಲಗೇರಿಯ ನಮ್ಮ ಮಾಣಿ - ಹ ನ ಮಾ ಅಲ್ಲ ಇಂವ)

ಸಾಮಾನ್ಯವಾಗಿ ಸೀತೆಗೆ ಟೈಮ್ ಪಾಸಿಗೆ .. ಹೊತ್ ಹೋಗತಿಲ್ಲೆ ಹೇಳಾದಾಗ ಮಾತಾಡೂಲ್ ಸಿಕ್ಕುದು ಹನಮಂತ ವಬ್ಬನೇಯ. ಪಾಪ ಅಂವ ರಾಮ ಭಕ್ತ ... ಸೀತೆ ರಾಮನ ಹೆಂಡತಿ ಹೇಳಿ ಗೌರವ. ಹೀಂಗೇ ಮಾತಾಡತ ಮಾತಾಡತ ... ಸುದ್ದಿ ಮಧ್ಯದಲ್ಲಿ ಹನಮಂಗೆ ವಂದು ಸಂಶಯ ಬಂತು... ಯೆಂತಪಾ ಅಂದ್ರೆ.... ’ಹೌದು ಈ ಮದುವೆಯಾದ ಹೆಂಗಸರೆಲ್ಲವ ಹಣೆ ಮ್ಯಾಲೆ ಕುಂಕುಮ (ಸಿಂಧೂರ) ಇಟಗತ್ತ ಯೆಂತಕೆ?’ ಹೇಳಿ. 

ಕೇಳೇಬುಡ್ವ ಮತ್ತೆಂತದು ಹೇಳಿ ಸೀತಾಮಾತೆ ಹತ್ರ ಕೇಳೇಬುಟನಡ. "ಅಮ್ಮ (ಅಂವ ಸೀತೆಗೆ ಅಮ್ಮ ಹೇಳೇ ಕರೇತಿದ್ದ) ನಿಂಗ ಹೆಂಗಸರೆಲ್ಲವ ಹಣೆ ಮ್ಯಾಲೆ ಕುಂಕುಮ ಯೆಂತಕೆ ಇಟಗತ್ರಿ? ಯಾ ಸುಮಾರು ದಿನದಿಂದ ಕೇಳವು ಮಾಡಿದಿದ್ದೆ... ಕಾಲ ಕೂಡಿ ಬಂದಿತ್ತಿಲ್ಲೆ. ಯಾ ಕೇಳವು ಮಾಡದಾಗ ನೀ ಸಿಗತಿದ್ದಿಲ್ಲೆ.... ನೀ ಸಿಕ್ಕದಾಗ ಯಂಗೆ ಮರವು ಸಾಯಲಿ.. ಅದೆಂತಕೆ ಇಟಗತ್ರಿ ನಿಂಗ?" 

ಸೀತೆ ಹೇಳತಡಾ - "ಹನಮಾ... ಹೆಂಗಸರ ಹಣೆ ಮೇಲೆ ಕುಂಕುಮ ಇದ್ರೆ ಗಂಡನ ಆಯುಷ್ಯ ಜಾಸ್ತಿ ಆಗತಡ. ಗಂಡಂಗೇ ಹೇಳಿ ಕುಂಕುಮ ಇಟಗಂಬದು. ವಂದು ಹೆಣ್ಣಿಗೆ ಗಂಡ ಅಂದರೆ ಸರ್ವಸ್ವ. ಈಗ ನಾ ಹಣೆಗೆ ಕುಂಕುಮ ಇಟಗಂಬದು ನಮ್ಮನೆಯವ್ಕೆ ಹೇಳಿ  ಗೊತ್ತಾತ". 

ಹನಮ ಹೇಳದ್ನಡ " ಒಹೋ ಹಾಂಗರೆ ಆಚೆಮನೆ ಮಂಥರಜ್ಜಿ  ಹಣೆ ಮ್ಯಾಲೆ ಕುಂಕುಮ ಇಟಗಳದ್ದೇ ಇದ್ದಿದ್ದಕ್ಕೇಯ ಅದರ ಗಂಡಾ ದೇವರತ್ರ ಹೋದನ? ತಲೆ ಬೋಳಿಸಗಂಡು ತಲೆ ಮ್ಯಾಲೆ ಸೆರಗು ಹಾಯ್ಕಂಡು ಬ್ಯಾರೆ ಇರತು ಮಳ್ ವೇಷಾ" 
ಸೀತೆಗೆ ನೆಗೆ ಬಂದೋತಡ.."ಹೋಗಾ ಮಳಾ ಹನಮಂತಾ... ಹಾಂಗೆಲ್ಲ ಹೇಳೂಲಾಗ ಪಾಪ" ಅಂತಡಾ.
" ತಪ್ಪಾತು ..ಅಮ್ಮ.... ಸರಿ ಹಾಂಗಾರೆ ಈಗ ಯಾನು ಕುಂಕುಮ ಇಟಗಂಡರೆ ಯಾರು ಯಂಗೆ ಸರ್ವಸ್ವನೋ ಅವರ ಆಯುಷ್ಯ ಜಾಸ್ತಿ ಆಗ್ತು ಹೇಳಾತು. ಯಾನೂವ ರಾಮಂಗೆ ಹೇಳಿ ಕುಂಕುಮ ಇಟಗತ್ತೆ ಇವತ್ತಿಂದವ" ಅಂದ್ನಡ ಹನಮ. 
" ಹೂಂ...ಮೈತುಂಬ ಕುಂಕುಮ ಬಡಕ ಹೋಗು. ಮಳೂ...ಹಾಂಗೆಲ್ಲ ಗಂಡಸರೆಲ್ಲ ಹಣೆಮ್ಯಾಲೆ ಕುಂಕುಮ ಇಟಗತ್ವಿಲ್ಲೆ" ಅಂತಡ. 


ಹನಮ ಕೇಳವ... ಸೀತೆ ಹೇಳಿದ್ದು ಹೌದು ಮಾಡಕಂಡನಡಾ. ಹೋಗ್ ಹೋಗಿ ಮದಲೇ ಮಂಗ... ಸೀದ ಹೋದವನೇಯ ಕುಂಕುಮದ ಮರಗೆ ತಗಂಡು ಇಡೀ ಮೈತುಂಬ ಕುಂಕುಮ ಬಡಕಂಡುಬುಟನಡಾ. 


ಅದಕೇಯ ಮಂದಿರದಲ್ಲಿ ಇಪ್ಪ ಹನಮಂತ (ಹನುಮಾನಜೀ) ಕೆಂಪ. ರಾಮನ ಭಕ್ತ ಅಂವ. ರಾಮಂಗೆ ಹೇಳಿ ಕೆಂಪಕ್ಕೆ ಕುಂಕುಮ ಹಚಗಂಡು ಇರತ ಹದಾ. 

(ಗೊರಕೆ ಸೊಗೀತಿತ್ತು ಕೂಸು.... ಯನ್ನ ಕಥೆ ಬೇಜಾರು ಬಂತ ಯೇನ)