ಪೀಟೀಲು (ಪೀಠಿಕೆ)
ಗಂಗಂಣನ ’ಬೆಟ್ಟೆಟ್ಟು ಬಿಸ್ನೀರು’ ನ ಪ್ರಭಾವಕ್ಕೆ ಒಳಗಾಗಿ ನೆನಪು ಮರುಕಳಿಚಿದ ಮಜ್ಜಿಗೆನೇ ’ಗ್ವಾಕರ್ಣ ಮಜ್ಜಿಗೆ’
ಗಂಗಂಣನ ’ಬೆಟ್ಟೆಟ್ಟು ಬಿಸ್ನೀರು’ ನ ಪ್ರಭಾವಕ್ಕೆ ಒಳಗಾಗಿ ನೆನಪು ಮರುಕಳಿಚಿದ ಮಜ್ಜಿಗೆನೇ ’ಗ್ವಾಕರ್ಣ ಮಜ್ಜಿಗೆ’
ಬಂದ್ಯನ? ಆಸ್ರಿಗ? ಕೇಳದು ಹವ್ಯಕರ ಪದ್ದತಿ - ಸಂಸ್ಕೃತಿ. ಘಟ್ಟದ ಮ್ಯಾಲಣ ಹವೆ ತಂಪಾಗಿಪ್ಪದರಿಂದ ಆಗಿರವು ಅಲ್ಲಿ ಬೆಟ್ಟೆಟ್ ಬಿಸ್ನೀರು ಸರ್ವೇ ಸಾಮಾನ್ಯ. ಆದರೆ ಘಟ್ಟದ ಕೆಳಗೆ ಕರಾವಳಿಯ ಬಿಸಿ ಹವೆ ಆಸರಾಗಿ ಬಂದ ನೆಂಟಂಗೆ ಮಜಗೆಯೇ ಆಸರಿ ಆಗತು. ಮನೆಯ ಕೊಟಗೇಲಿ ಯೆಮ್ಮೆ ಬತಸಗಂಡ್ರೂವ ಬಂದವಕೆ ಹುಳಿ ಮಜಗೆನಾದರೂ ಕೊಟ್ಟು ಸಮಾಧಾನ ಮಾಡಕಾತಲೀ. ಇದು ಹೈಗತಿಯ ಕಷ್ಟ ಪಾಪ. ಅದಕೇ ಈ ಗ್ವಾಕರ್ಣ ಮಜಗೆ.
(ಗಂಗಂಣನ ಕ್ಷಮೆ ಮತ್ತು ಅನುಮತಿ ಕೇಳತವಾ... ಅವಂದೇ ನಿರೂಪಣೆಯಲ್ಲಿ)
ಗ್ವಾಕರ್ಣ ಮಜಗೆ ಮಾಡುವ ವಿಧಾನ:
========================
ಅ) ಬೇಕಾಗುವ ಸಲಕರಣೆ
=========================================
) ಕೌಳಗೆ
) ಲೋಟ (ಉದ್ದೀದು)
) ಹುಳ್ ಮಜಗೆ ಶಿಕ್ಕ
ಆ) ಬೇಕಾಗುವ ಸಾಮಾನುಗಳು
=========================================
) ನೀರು
) ಮಜಗೆ (ಹತ್ರ ನೆ೦ಟರಿಗೆ ಮಾತ್ರ )
) ಉಪ್ಪು
ಇ) ಮಾಡುವ ವಿಧಾನ
=========================================
) ಬ೦ದವರ ಮಾತಾಡಸವು
) ಬ೦ದವ್ವು ದೂರದವ್ವ ಹತ್ತರದವ್ವ ನೋಡವು
) ಕ೦ಚಿನ ಕೊಡಪಾನದಿಂದ ಕೌಳಗೆ ನೀರು ಎರಸವು.
) ಅದಾದ ಮೇಲೆ ಹುಳ್ ಮಜ್ಗೆ ಶಿಕ್ಕದ ಹತ್ರೆ ಬರವು. ಶೀಂ ಮಜಗೆ ಶಿಕ್ಕದ ಹತ್ರ ಹೋಪಲಾಗ... ಮನೆಯವಕೆ ಬೇಕಾಗತು.
) ಅಲ್ಲಿ ದೂರದ ನೆ೦ಟ ಆದ್ರೆ ಮಜ್ಗೆ ಶಿಕ್ಕದಿಂದ ನೀರಿಗೆ ಹುಳ್ ಮಜಗೆ ತೋರಿಸವು. ಹೆಚ್ಚು ಅಂದ್ರೆ ನೀರಿನ ಬಣ್ಣ ಹೋಪಸ್ಟು ಮಾತ್ರ ಮಜ್ಗೆ ಹಾಕವು
) ರಾಶಿ ಬೆಳಿಕೆ ಆಪಲಾಗ. ಯಮ್ಮಿಗೆ ಕಣ್ ಬಿದ್ದೊಗ್ತು.
) ಈಗ ತಗ೦ಡು ಹೊರಗೆ ಬರವು
) ಹೊರಗೆ ಬಪ್ಪಕಿದ್ರೆ ಪ್ರಧಾನ ಭಾಗ್ಲ ದಾಟತವ ಕೌಳಗೆಯಿಂದ ಲೋಟಕ್ಕೆ - ಲೋಟದಿಂದ ಕೌಳಗೆಗೆ ಎರಡ್ -ಮೂರ್ ಸತಿ ನೊರೆ ಬಪ್ಪಾಂಗೇ (ಹುಳಿ ಇರತಲೀ ಹ್ಯಾಂಗೂವ) ಮೇಲೇ ಕೆಳಗೆ ಮಾಡಿ ಹೊಡೆಯವು.
) ಉಪ್ಪ ಹದಾಕೆ ಹಾಕಿರೆ ಸಾಕು ಬಿಲ.
) ತ೦ದು ಹೊರಗೆ ಅಡವರ್ಯವು.
ಈ) ಸೂಚನೆ:
=========================================
) ನೆ೦ಟ ಮುಕ್ಕಾಲು ಕುಡಿದ ನ೦ತರ ಉಪ್ಪು ಸಾಕನ ತಮ ಹೇಳವು
) "ಯಮ್ಮಲ್ಲಿ ಉಪ್ಪು ಕಮ್ಮಿ ತಿ೦ತ್ಯ" ಹೇಳವು.
) ತ೦ದು ಹೊರಗೆ ಅಡವರ್ಯವು.
ಈ) ಸೂಚನೆ:
=========================================
) ನೆ೦ಟ ಮುಕ್ಕಾಲು ಕುಡಿದ ನ೦ತರ ಉಪ್ಪು ಸಾಕನ ತಮ ಹೇಳವು
) "ಯಮ್ಮಲ್ಲಿ ಉಪ್ಪು ಕಮ್ಮಿ ತಿ೦ತ್ಯ" ಹೇಳವು.
) ನೆಂಟಂಗೆ ಕುಡದಾದ ಮ್ಯಾಲೆ ತಂಪಿದ್ದನ ಕೇಳವು.
) ಈ ಶೆಕೆಲಿ ಮಜಗೆ ಹುಳಿಯಾದ್ರೂ ಕುಡದಷ್ಟೂ ಆರಾಮು ಹೇಳವು.
) ಇದಕ್ಕೆ ಗ್ವಾಕರ್ಣ ಮಜಗೆ ಹೇಳಿ ಹೆಸರಿಟ್ಟ೦ವ ಆನಲ್ಲ. ಆ ಶಣ್ಣಿರಕಾರಿಂದ ಕೇಳಿದ ಹೆಸರೇ ಇದು. ನಾಮಕರಣ ಮಾಡಿದ ಪುಣ್ಯಾತ್ಮ ಯಾರ.
) ಇದು ಗಂಗಂಣನ ನಿರೂಪಣೆ ಆಗಿದ್ದರಿಂದ ಆಶಿರ್ವಾದಪೂರ್ವಕವಾಗಿ ಪೀಜು ಇಲ್ಲೆ.
) ಮದ್ವೆ-ಉಪ್ನೆನ-ಶ್ರಾಧ್ಧಕ್ಕೆ ಕರ್ಯಲೇ ಹೋದವ್ಕೆ ಗ್ವಾಕರ್ಣ ಮಜಗೆ ಸರ್ವೇ ಸಾಮಾನ್ಯ.
) ಈ ಶೆಕೆಲಿ ಮಜಗೆ ಹುಳಿಯಾದ್ರೂ ಕುಡದಷ್ಟೂ ಆರಾಮು ಹೇಳವು.
) ಇದಕ್ಕೆ ಗ್ವಾಕರ್ಣ ಮಜಗೆ ಹೇಳಿ ಹೆಸರಿಟ್ಟ೦ವ ಆನಲ್ಲ. ಆ ಶಣ್ಣಿರಕಾರಿಂದ ಕೇಳಿದ ಹೆಸರೇ ಇದು. ನಾಮಕರಣ ಮಾಡಿದ ಪುಣ್ಯಾತ್ಮ ಯಾರ.
) ಇದು ಗಂಗಂಣನ ನಿರೂಪಣೆ ಆಗಿದ್ದರಿಂದ ಆಶಿರ್ವಾದಪೂರ್ವಕವಾಗಿ ಪೀಜು ಇಲ್ಲೆ.
) ಮದ್ವೆ-ಉಪ್ನೆನ-ಶ್ರಾಧ್ಧಕ್ಕೆ ಕರ್ಯಲೇ ಹೋದವ್ಕೆ ಗ್ವಾಕರ್ಣ ಮಜಗೆ ಸರ್ವೇ ಸಾಮಾನ್ಯ.
) ಶ್ರೀ ಕ್ಷೇತ್ರ ಗೋಕರ್ಣಕ್ಕೂ ಈ ಮಜಗೇಗೂ ಸಂಬಂಧ ಅಸ್ಪಷ್ಟ. (ಕ್ಷಮಿಸಿ)
ಹೆಹ್ಹೆ.. ಗಂಗಣ್ಣಂಗೇ ಪೈಪೋಟಿನಾ ;-) ಸೂಪರ್
ReplyDeleteಪೈಪೋಟಿ ಅಲ್ದ... ಅವಂಗೆ ವಂದು ಗೌರವ ಮಾರಾಯ
Deleteಹಹ್ಹಾ.. ಏನೇ ಆಗ್ಲಿ.. ನಿಮ್ಮಿಬ್ರಿಂದಾಗಿ ಬ್ಲಾಗಲ್ಲೂ ಹವ್ಯಕ ಭಾಷೆ ಓದಲಾಗ್ತಾ ಇದ್ದು .. ಮುಂದುವರೆಸಿ :)
Deleteವೋ ಶ್ಯಾಮಣ್ಣಾ..>
Deleteನೀಚಣ್ಣ..>
anna.. cholo baradyo... Oorige hogbandange aathu maraya.. antu nentrige hulimajjge kudisde neenu maraya..
ReplyDeleteಹ ಹ . ನಿಂಗ್ ಆಸರಿಗೆ? ತಣ್ಣೀರ್ ಅಡ್ಡಿಲ್ಯ ಕಾದ್ನೀರ?
Deleteಹ ಹ ಹಾಆಆಆಆಆಆಆಆ!!!!!!!!
ReplyDeleteಆರ್ಯೋಳನೆತಿಲಿ ವಂದು ಪಾಠ ಬಂದಿತ್ತು ಯಂಗೆ. ದೇವರು ನಗುವುದು ಯಾವಾಗ?? ಆ ದೇವರ ನಗುವಿಗೆ ನೂರೆಂಟು ಅರ್ಥ ಇರತು. ದವಾ ಗಂಗಂಣ.
Deleteಶ್ರೀ ಶ್ಯಾಮ, ಇಲ್ಲವೋ. ಹಾಗೇನೂ ಇಲ್ಲ. ಸಹಜವಾಗೇ ನಕ್ಕಿದ್ದು. ಪ್ರೀತಿ ಇರಲಿ, ಇತಿ ಪ್ರೀತಿಯ, ಗ೦ಗಣ್ಣ.
Deleteಶ್ಯಾಮಣ್ಣ, ಹುಳಿ ಮಜ್ಜಿಗೆ ಕುಡಿದಸ್ಟು ಕುಡಿವಾಂಗೆ ಮಾಡಿದ್ದೆ..:)
ReplyDeleteತಂಪಾತು...! ಹಿಂಗೇ ನಮ್ಮವಕ್ಕೆ ಕುಡಿಸ್ತಾ ಇರು..!
ದವಾ ಅತಗೆ
Deleteಶ್ಯಾಮಣ್ಣ....ಸೂಪರ್......... ನೆಂಟ ಬೆಳಿಗ್ಗೆ ಬಂದರೆ " ಬೆಟ್ಟೆಟ್ಟ್ ಬಿಸ್ನೀರು"....ಸಂಜಪ್ಪಗ ಸ್ವಲ್ಪ ಗರಂ ಆಗಿ ಬಂದ್ರೆ..."ಗ್ವಾಕರ್ಣ ಮಜಗೆ" ಕುಡಿಸೀರಾತು....:-)
ReplyDeleteಆದ್ರೂ ಫುಲ್ಲ್ ಕಾಫಿ ಮಾಡಿದೆ ನೀನು ಶ್ಯಾಮಣ್ಣ.. ಒಂಚೂರು ಶುಂಠಿ ಕೊತ್ತಂಬರಿ ಸೊಪ್ಪಾದ್ರು ಸೇರ್ಸಲಾಗ್ತಿತ್ತು ..
ReplyDeleteಹ ಹ ಕಿರಣ ... ಕಾಪಿ ಅಲ್ಲ ಅದು... ಸ೦ಗ್ರಹ ಆ ತರದ ಸಾಹಿತ್ಯ ಎಲ್ಲಿ ಸಿಗಗು?? ಅದಕ್ಕೇ ಭಟ್ಟಿ ಇಳಿಸಿದ್ದು
ReplyDeleteಹಾ.....ಹಾ.....ಚೊಲೋ ಇದ್ದು.....ಕಡಿಗೆ "ಹೊಸಾಕುಳಿ ಹಾಲ್ನೀರು" ಅಂದ್ರೆ ದೊಡ್ಡ ತಟ್ಟೆಯಲ್ಲಿ ಫುಲ್ ನೀರಿಗೆ ಒಂದೇ ಹುಂಡು ಹಾಲು ಬಿಟ್ಟು ಮಾಡ ಲೋ ಕ್ಯಾಲೋರೀ ಡ್ರಿಂಕ್. ತಂಪು ಮತ್ತೆ ಬಿಸಿ ಎರಡೂ ವರೈಟಿ ನಲ್ಲಿ ಲಭ್ಯ. ನಾವು ಸಹಿತ ಮೂಲ ಹೊಸಕುಳಿಯವೇ ಆಗಿರುವದರಿಂದ ಹೊಸಾಕುಳಿಯವಕ್ಕೆ ಅಪಮಾನ ಗಿಪಮಾನ ಮಾಡಾ ಪ್ರಶ್ನೇನೆ ಇಲ್ಲೇ......:) :)
ReplyDeleteಹ ಹ ಮಹೇಶಣ್ಣ ಧನ್ಯವಾದ...
Deleteಅದೇ "ಹೊಸಾಕುಳಿ ಹಾಲ್ನೀರಿ"ಗೆ ವಿಧ ವಿಧ ಹೆಸರಿದ್ದು... ನಮ್ ಕಡೆ "ದೊಡ್ಡೋರ್ ಮನೆ ಹಾಲು" ಹೇಳೂ ಹೇಳತ... ಇನ್ನು ಶಿರಸಿ ಬದಿಗೆ ಅದಕ್ಕೆ "ಬೆಟ್ಟೆಟ್ ಬಿಸ್ನೀರು" ಹೇಳಿ ನಾಮಕರಣ ಮಾಡಿದ್ದ ಗಂಗಂಣ. ಅದನ್ನೂ ಓದಿ.. ಅದರ ಯಥಾ ನಕಲು ಈ ಮಜಗೆ. (ಲಿಂಕ್ ಮೇಲೆ ಇದ್ದು)