ವಿಷ್ಣು ಭಟ್ಟರ ಇನ್ನೊಂದು ಕೃತಿ
ಕಳೆದ ಆರೆಂಟು ವರ್ಷಗಳಿಂದಲೂ ಭಟ್ಟರು ಒಂದೇ ಜೋಡಿ ಅಂಗೋಸ್ತ್ರದಿಂದ ತಮ್ಮ ಬ್ರಾಹ್ಮಣ್ಯ ನಡೆಯಿಸುತ್ತಿದ್ದಾರೆ. ಮನೆಯವರಿಗೂ ಹಾಗೆ. "ಇಷ್ಟು ಗಳಿಸಿಟ್ಟು ಯಾರಿಗೆ.....?" ಎಂದು ಅವರ ಹೆಂಡತಿ ಗೊಣಗಿದರೆ "ಅಬ್ಬೇ ಮನೆಗೆ ಒಯ್ದು ಹಾಕಲೇ?" ಎಂದು ಅಬ್ಬರಿಸುತ್ತಾರೆ. ಮಕ್ಕಳಂತೂ ತಂದೆಯನ್ನು ಕಂಡರೆ ಥರಥರ ನಡುಗುತ್ತಾರೆ. ಅವರು ಏನಾದರೂ ತಿನ್ನುತ್ತಿದ್ದಾಗ ಮಕ್ಕಳು ಬಂದು "ಅಪ್ಪಯ್ಯಾ, ನಂಗೇ..." ಅಂದರೆ ತೀರಿತು. "ಹಾಳು ಹೊಟ್ಟೆಯವರೆ, ನಾನು ಊರೂರೆಲ್ಲಾ ತಿರುಗಾಡಬೇಕು, ನಿಮಗಾಗಿ ಸಂಪಾದಿಸಿ ತರಬೇಕು. ಅದೆಲ್ಲ ತಿಳಿಯುವುದೇ ಇಲ್ಲ ನಿಮಗೆ. ನಾನು ಏನು ತಿಂದರೂ ಅದು ನಿಮಗೆ ಬೇಕು. ನಿಮ್ಮನ್ನು ಹುಟ್ಟಿಸಿದ ಕಷ್ಟ, ಸಾಕಿದ ತ್ರಾಸು,.... ಇದೆಲ್ಲ..." ಎಂದು ಶುದ್ಧವಾಗಿ ಬೈಯುತ್ತಾರೆ. ಮಕ್ಕಳು ಕುಯ್ ಅನ್ನದೇ ಅವರು ತಿನ್ನುವುದನ್ನೇ ನೋಡುತ್ತ ಕುಳಿತುಕೊಳ್ಳುತ್ತಾರೆ. ತಿಂದ ನಂತರ ಪಾತ್ರೆಯನ್ನು ಮಕ್ಕಳ ಕೈಯಲ್ಲಿ ಕೊಟ್ಟು "ತೊಳೆಯಿರಿ" ಎ೦ದು ಹೊರಡುತ್ತಾರೆ. ಮಕ್ಕಳು ಆ ಪಾತ್ರೆಯ ಕಲಾಯಿ ಹೋಗುವಂತೆ ನೆಕ್ಕುತ್ತಾರೆ. ಅವರ ಕಚ್ಚಾಟ ತಡೆಯಲು ಇದನ್ನೆಲ್ಲ ಕಂಡರೂ ಕಾಣದೇ ಕೆಲಸ ಮಾಡುತ್ತಿದ್ದ ತಾಯಿ ಬರಬೇಕು.
ನಮ್ಮೂರಿನ ಮಕ್ಕಳಿಗೆ ಭಟ್ಟರ ಕಂಡರೆ ನಗೆ. "ಭಟ್ಟರೆ, ಇಂದು ಆಚೆಯ ಕೇರಿಯಲ್ಲಿ ಒಂದು ಬೊಜ್ಜ. ನಿಮಗೆ ಗೊತ್ತೇ ಇಲ್ಯ ನೋಡ್ತೆ?" ಎಂದು ಚೇಷ್ಟೆ ಮಾಡುತ್ತಾರೆ. ಒಮ್ಮೆಯಂತೂ ರಾತ್ರಿಯಲ್ಲಿ ಭಟ್ಟರನ್ನು ಹೊಳೆಯ ಆಚೆಗೆ ಯಾವುದೋ ಕಾರ್ಯವಿದೆಯೆಂದು ಹೇಳಿ ಸೂಡಿಯ ಬೆಳಕಿನಲ್ಲಿ ಅಟ್ಟಿದ್ದರು.
ಭಟ್ಟರ ಹತ್ತಿರ ಹತ್ತಿಪ್ಪತ್ತು ಸಾವಿರ ರೂಪಾಯಿಗಳಿರಬೇಕೆಂದು ಊರಿನವರ ಅಂದಾಜು. ಅದನ್ನು ಅವರು ಮನೆಯವರಿಗೂ ತಿಳಿಯದ೦ತೇ ಹುಗಿದಿಟ್ಟಿರಬೇಕು. ಗ್ರಾಮದ ವರ್ಗಣಿ ಗಿರ್ಗಣಿ ಕೊಟ್ಟು ಭಟ್ಟರಿಗೆ ಗೊತ್ತೇ ಇಲ್ಲ.
ರಾಂ
ಭಟ್ಟರಿಗೆ ಪಿತ್ರಾರ್ಜಿತ ಒಂದು ಚೂರು ತೋಟವಿದ್ದರೂ ಅವರ ಬಾಳುವೆಯೆಲ್ಲ ಸುತ್ತುಮುತ್ತಲಿನ
ಊರುಗಳಲ್ಲಿ ನಡೆಯುವ ಕಾರ್ಯ, ಅಲ್ಲಿ ಯಜಮಾನರಿಗೆ ದಕ್ಷಿಣೆ ಕೊಡಲು ಇರುವ ತಾಕತ್ತು -
ಇವುಗಳನ್ನೇ ಅವಲಂಬಿಸಿದೆ. ಅವರು ಧಾಂಡಿಗರಾಗಿ ಕಂಡರೂ ಅವರದು ಕೆಲಸಕ್ಕೆ ಬಾಗದ ಮೈ.
ಬ್ರಾಹ್ಮಣರಿಗೆ ಊಟ, ದಕ್ಷಿಣೆ ಕೊಡುವ ರೂಢಿ ಇನ್ನೂ ಇರುವಾಗ ಅವರು ಕೆಲಸ ಮಾಡಲೇಬೇಕೆಂದು
ಕಾಯದೆಯಿದೆಯೆ? ಕರೆಯಲೀ ಕರೆಯದೇ ಇರಲಿ ಏಷ್ಟೇ ದೂರಾದರೂ - ಹೊಗೆ ಕಂಡು -
ನಡೆದು ಹೋಗುವ ಶಕ್ತಿ, ಅಲ್ಲಿ ಎಲ್ಲರಿಗಿಂತ ಜೋರಾಗಿ ತಮಗೆ ಬರುವ ಒಂದೆರಡು ಮಂತ್ರಗಳನ್ನು
ಆರ್ಭಟಿಸುವ ಸಾಮರ್ಥ್ಯ, ಭಟ್ಟರಿಗೆ ದೇವರು ಕೊಟ್ಟಿದ್ದಾನೆ. ಪಂಜೆ ಹಚ್ಚಿಕೊಂಡು
ಭಸ್ಮದಿಂದ ದೇಹವನ್ನು ಅಲಂಕರಿಸಿ ಅವರು ಕುಳಿತರೆ ಥೇಟು ಶಂಕರಾಚಾರಿಗಳೇ. ಬ್ರಹ್ಮತೇಜ
ಅವರಿಗಿದ್ದಷ್ಟು ನಮ್ಮೂರಿನಲ್ಲಿ ಯಾರಿಗೂ ಇಲ್ಲ. ಅಂತೆಯೇ ಅವರು ಕರೆಯದೇ ಹೋದಕಡೆಗೂ
ಮರ್ಯಾದೆ ಹೊಂದಿ ಬರುತ್ತಾರೆ.
ಕಳೆದ ಆರೆಂಟು ವರ್ಷಗಳಿಂದಲೂ ಭಟ್ಟರು ಒಂದೇ ಜೋಡಿ ಅಂಗೋಸ್ತ್ರದಿಂದ ತಮ್ಮ ಬ್ರಾಹ್ಮಣ್ಯ ನಡೆಯಿಸುತ್ತಿದ್ದಾರೆ. ಮನೆಯವರಿಗೂ ಹಾಗೆ. "ಇಷ್ಟು ಗಳಿಸಿಟ್ಟು ಯಾರಿಗೆ.....?" ಎಂದು ಅವರ ಹೆಂಡತಿ ಗೊಣಗಿದರೆ "ಅಬ್ಬೇ ಮನೆಗೆ ಒಯ್ದು ಹಾಕಲೇ?" ಎಂದು ಅಬ್ಬರಿಸುತ್ತಾರೆ. ಮಕ್ಕಳಂತೂ ತಂದೆಯನ್ನು ಕಂಡರೆ ಥರಥರ ನಡುಗುತ್ತಾರೆ. ಅವರು ಏನಾದರೂ ತಿನ್ನುತ್ತಿದ್ದಾಗ ಮಕ್ಕಳು ಬಂದು "ಅಪ್ಪಯ್ಯಾ, ನಂಗೇ..." ಅಂದರೆ ತೀರಿತು. "ಹಾಳು ಹೊಟ್ಟೆಯವರೆ, ನಾನು ಊರೂರೆಲ್ಲಾ ತಿರುಗಾಡಬೇಕು, ನಿಮಗಾಗಿ ಸಂಪಾದಿಸಿ ತರಬೇಕು. ಅದೆಲ್ಲ ತಿಳಿಯುವುದೇ ಇಲ್ಲ ನಿಮಗೆ. ನಾನು ಏನು ತಿಂದರೂ ಅದು ನಿಮಗೆ ಬೇಕು. ನಿಮ್ಮನ್ನು ಹುಟ್ಟಿಸಿದ ಕಷ್ಟ, ಸಾಕಿದ ತ್ರಾಸು,.... ಇದೆಲ್ಲ..." ಎಂದು ಶುದ್ಧವಾಗಿ ಬೈಯುತ್ತಾರೆ. ಮಕ್ಕಳು ಕುಯ್ ಅನ್ನದೇ ಅವರು ತಿನ್ನುವುದನ್ನೇ ನೋಡುತ್ತ ಕುಳಿತುಕೊಳ್ಳುತ್ತಾರೆ. ತಿಂದ ನಂತರ ಪಾತ್ರೆಯನ್ನು ಮಕ್ಕಳ ಕೈಯಲ್ಲಿ ಕೊಟ್ಟು "ತೊಳೆಯಿರಿ" ಎ೦ದು ಹೊರಡುತ್ತಾರೆ. ಮಕ್ಕಳು ಆ ಪಾತ್ರೆಯ ಕಲಾಯಿ ಹೋಗುವಂತೆ ನೆಕ್ಕುತ್ತಾರೆ. ಅವರ ಕಚ್ಚಾಟ ತಡೆಯಲು ಇದನ್ನೆಲ್ಲ ಕಂಡರೂ ಕಾಣದೇ ಕೆಲಸ ಮಾಡುತ್ತಿದ್ದ ತಾಯಿ ಬರಬೇಕು.
ನಮ್ಮೂರಿನ ಮಕ್ಕಳಿಗೆ ಭಟ್ಟರ ಕಂಡರೆ ನಗೆ. "ಭಟ್ಟರೆ, ಇಂದು ಆಚೆಯ ಕೇರಿಯಲ್ಲಿ ಒಂದು ಬೊಜ್ಜ. ನಿಮಗೆ ಗೊತ್ತೇ ಇಲ್ಯ ನೋಡ್ತೆ?" ಎಂದು ಚೇಷ್ಟೆ ಮಾಡುತ್ತಾರೆ. ಒಮ್ಮೆಯಂತೂ ರಾತ್ರಿಯಲ್ಲಿ ಭಟ್ಟರನ್ನು ಹೊಳೆಯ ಆಚೆಗೆ ಯಾವುದೋ ಕಾರ್ಯವಿದೆಯೆಂದು ಹೇಳಿ ಸೂಡಿಯ ಬೆಳಕಿನಲ್ಲಿ ಅಟ್ಟಿದ್ದರು.
ಭಟ್ಟರ ಹತ್ತಿರ ಹತ್ತಿಪ್ಪತ್ತು ಸಾವಿರ ರೂಪಾಯಿಗಳಿರಬೇಕೆಂದು ಊರಿನವರ ಅಂದಾಜು. ಅದನ್ನು ಅವರು ಮನೆಯವರಿಗೂ ತಿಳಿಯದ೦ತೇ ಹುಗಿದಿಟ್ಟಿರಬೇಕು. ಗ್ರಾಮದ ವರ್ಗಣಿ ಗಿರ್ಗಣಿ ಕೊಟ್ಟು ಭಟ್ಟರಿಗೆ ಗೊತ್ತೇ ಇಲ್ಲ.
ಬಾಳುವೆಗಿಂತ ಸಾವೇ ಚೆಂದವೆಂದು ಹೇಳುತ್ತಾರಲ್ಲ. ಭಟ್ಟರ ಮರಣವೂ ಹೃದಯಂಗಮವಾಗಿದೆ.
ಒಂದು ರಾತ್ರಿಯಲ್ಲಿ ಯಾರೋ ಮುಕರಿಗಳು ಹಾನ ತೆಗೆದು ಹಾನದ ಕೊಟ್ಟೆಯನ್ನು ಹೊಳೆಯಲ್ಲಿ ತೇಲಿ ಬಿಟ್ಟಿದ್ದರು. ಭಟ್ಟರು ಹೊಳೆದಂಡೆಯ ಮೇಲೆ ನಿತ್ಯಕರ್ಮ ಮಾಡುತ್ತಿದ್ದಂತೇ ತೋರುತ್ತದೆ. ಹಾನದ ಕೊಟ್ಟೆಯಲ್ಲಿ ಒಂದು ದಮ್ಡಿಯನ್ನಾದರೂ ಹುಗಿದಿಡುತ್ತಾರೆಂಬುದು ಗೊತ್ತಿದ್ದ ವಿಷಯ. ಸ್ಮಶಾನಗಳ ಬಿಡಿಗಾಸು, ಬಿಲ್ಲಿಗಳನ್ನೂ ಬಿಡದ ಭಟ್ಟರು ಹಾನದ ಕೊಟ್ಟೆಗೆ ಹೆದರುತ್ತಾರೆಯೇ? ಈಜು ಚೆನ್ನಾಗಿ ಬರದಿದ್ದರೂ ಹೊಳೆಗೆ ಇಳಿದರು. ಹಾನದ ಕೊಟ್ಟೆಯ ಕಡೆಗೆ ಹೇಗೋ ಕಾಲು ಬಡಿಯುತ್ತ ನಡೆದರು. ಆದರೆ ಕೊಟ್ಟೆಯೊಳಗಿನ ದಮ್ಡಿಯ ಧ್ಯಾನದಲ್ಲಿ ಭಟ್ಟರಿಗೆ ತಾನು ಎಲ್ಲಿ ಬಂದೆನೆಂಬುದೇ ಗೊತ್ತಾಗಲಿಲ್ಲ. ಅಂತೂ ಕೊಟ್ಟೆ ಕೈಗೆ ಹತ್ತಿತು. ಅದರೊಳಗಿನ ಸಗಣಿಯ ಕಟ್ಟೆಯನ್ನು ಕದಡಿ ಒ೦ದು ದಮ್ಡಿಯನ್ನು ದೊರಕಿಸಿಯೇ ಬಿಟ್ಟರು. ಮನುಷ್ಯನಿಗೆ ಒಂದು ಉದ್ದೇಶ ಸಾಧಿಸುವವರೆಗೆ ಶಕ್ತಿ ಎಲ್ಲಿಂದ ಬರುತ್ತದೆಯೋ? ಮರುಕ್ಷಣವೇ ಹಿಗ್ಗಿನ ಜತೆಗೆ ದಣಿವುಂಟಾಗುತ್ತದೆ. ಈಜು ಬರದೇ ಈಜಿ, ದಮ್ಡಿ ಸಂಪಾದಿಸಿದ ಭಟ್ಟರು ಹೊಳೆಯ ನಡುವೆ ಕೈಕಾಲು ಸೋತು ಮುಳುಗಿದರು.
ಮರುದಿನ ಎರಡು ಮೈಲು ಕೆಳಗೆ ದಂಡೆಯ ಮೇಲೆ ಭಟ್ಟರ ಹೆಣ ಸಿಕ್ಕಿತು. ಶೋಧ ಮಾಡಲಾಗಿ ಬಲಗೈಯಲ್ಲಿ ಒಂದು ದಮ್ಡಿಯನ್ನು ಹೆಣವು ಭದ್ರವಾಗಿ ಹಿಡಿದುಕೊಂಡಿದ್ದು ಕಂಡುಬಂತು.!!

(ಹಿಂದೊಮ್ಮೆ ಭಟ್ಟಿ ಇಳಿಸಿದ್ದು - ದಿನಾಂಕ - ಸಪ್ಟೆಂಬರ್ ೨೦, ೨೦೦೯ )
:-( :-( ಎಷ್ಟು ದುಡ್ಡಿದ್ರೂ ಕೊನೆಗೆ ಅತಿಯಾಸೆ ಇದ್ರೆ ಹಿಂಗೇ ಆಗದು ಅಲ್ದಾ ?
ReplyDelete