Jul 2, 2022

ಅವಸ್ಥೆ



Poornima ತ್ಗೆಯ ಕಥೆಯಿಂದಾಗಿ ನೆನಪಾತು .. ಮತ್ತೊಂದು ಘಟನೆ 

ವಂದು ಸಲ ಗೋಕರ್ಣದ ಹತ್ರ ಬಂಕಿಕೊಡ್ಲಲ್ಲಿ ವಾಲಿಬಾಲ್ ಟೂರ್ನಾಮೆಂಟ್ ಆಗಿತ್ತು. ನಮ್ಮೂರಿನ ಟೀಂನ ಸಂತಿಗೆ ಹೋಗಿದಿದ್ದೆ ನಾನು. ನಮ್ಮ‌ ಟೀಮಲ್ಲಿ ಮೂರೇ ಜನ ಬ್ರಾಹ್ಮಣರು ನಾವು. ನಾನೂ, ದೀಕ್ಷಿತ, ನಾರಣಣ್ಣ. 

ವಾಲೀಬಾಲ್ ಟೂರ್ನಮೆಂಟಲ್ಲಿ ಊಟದ ವ್ಯವಸ್ಥೆ ಇರ್ತು. ಹಂಗಾಗಿ ಎಲ್ಲರ ಸಂತಿಗೆ ಊಟಕ್ಕೆ ಹೋಗಿ ಕುಂತ್ಯ ನಂಗವೂವ. 

ಬಾಳೆ ಹಾಕುದಲ್ಲ ಅಲ್ಲಿನ ಪದ್ದತಿ.. ಕೊಡದು.. ಕೊಡವ್ವು ಗೌಡಗ ... ಇರಲಿ‌ ತೊಂದರಿಲ್ಲೆ ಹೇಳಿ ಕುಂತಾತು. ಬಡಸ್ವವೂ ಅವೇಯ ಹೇಳಿ‌ ಕಡಿಗೆ ಗೊತ್ತಾಗಿದ್ದು 😬

      ತಗ ಉಪ್ಪು ಹಾಕ್ದ 
ಉಪ್ನಕಾಯಿ ಆತು ಬಾಳೆಗೆ. ಗಂಡಸ್ರೇ ಬಡ್ಸಿದ್ದ.. ಹಂಗಾಗಿ ಗೌಡ್ಗ ಹೇಳಿ ಗೊತ್ತಾಜಿಲ್ಲೆ ಯಂಗಕ್ಕಿಗೆ.  ಅಲ್ಲೇ ವಂದೆರಡ್ ಜನ ಗೌಡತಿಯಕ್ಕ ಇದಿದ್ದ..‌
"ಯೇ ಗೌಡ್ತಿಯಕ್ಕ ಬಡಸ್ತ್ವನ?" ಅಂದ ನಮ್ಮ‌ ಮೆನೇಜರ ನಾರಣಣ್ಣ. 
 "ಬಹುಶಃ ಚೊಕ್ಕ ಮಾಡಲೆ ಸಾರ್ಸಲೆ ಆಗಿರವ ತಡ್ಯಾ" ಅಂದೆ ನಾನು 
"ಇಲ್ಯ ಟೂರ್ನಾಮೆಂಟಲೆಲ್ಲ ಭಟ್ರೇ ಅಡಗೆ ಮಾಡೂದು" ಅಂದ ಧೀಕ್ಷಿತ. 
ಹೀಂಗೇ 
ನಮ್ಮಲ್ಲೇ ನಮಗೆ ಸಮಾಧಾನ ಮಾಡ್ಕಂಡಾತು
      ತಗಳ ... ಗೌಡ್ತಿ ಅನ್ನದ ಚರಗೆ ಹಿಡ್ಕ ಬಂದೇಬುಡ್ತು. 
ಚರಗೆ ವಳಗೆ ಹುಟ್ಟೂ ಇಲ್ಲೆ... ಕೈಯಲ್ಲೇ ಬಡಸದು. 
ಯೇ ದೇವರೇ 
ಬೇಕ ನಮ್ಮ ಅವಸ್ಥೆ ?! ಎದ್ದು ಹೋಪಂಗೂ ಇಲ್ಲೆ 
" ಯೇ ನಂಗ್ ಬ್ಯಾಡದೋ ಊಟಾ" ಅಂದ ದೀಕ್ಷಿತ ಎದ್ದೇ ನಡದ. 
ನಾನೂ ಮ್ಯಾನೇಜರ ವಳ್ದ. ಮಕ‌ಮಕ ನೋಡ್ತವ 

ಅಷ್ಟತ್ತಿಗೆ ಬಂದು ನನಗಿಂತ ಮದಾಲು ಕುಂತ ಮೆನೇಜರಂಗೆ ವಂದ್‌ ಮುಷ್ಟಿ ಬಡಸೇಬುಟ್ಲು ಗೌಡ್ತಿ. 
ತಗ ಈಗ ನನ್ನ ಬಾರಿ.‌  ನಾನು ಎರಡೂ ಕೈಯ ಬಾಳೆ ಮೇಲೆ ಇಟ್ಗಂಡು "ಬ್ಯಾಡಾ ನಾ ಉಂಬೂದಿಲ್ಲ 
ಪಾಯ್ಸ ಅದೇ ? ಇದ್ರೆ ಬಡಸೂ" ಅಂದಿ

ಪಾಯಸ ಅಂತೂ ಕೈಯಲ್ಲಿ ಬಡ್ಸಲಾಗ್ತಿಲ್ಯಲೀ... ಹುಟ್ಟಲ್ಲೇ ಹಾಕಗು. ಹೆಂಗಂದ್ರೂ ಅಡಗೆ ಮಾಡದ್ದು ಭಟ್ರೇಯ ಹೇಳಿ ಧೈರ್ಯ ಯಂಗೆ ಧೀಕ್ಷಿತ ಕೊಟ್ಟಿದಿದ್ನಲೀ
 "ಅಬಬಬ ಅಣಾ ... ನಮಸ್ಕಾರ .. ಯೇನ್ ತಲೆಯೋ!" ಅಂದ ಮೆನೇಜರ ಎರಡೂ ಕೈ ಜೋಡಸಿ ಕೈಯೇ ಮುಗ್ದಿಗಿದ. 

ಅಷ್ಟರಲ್ಲಿ ತಗಳಾ ಹುಳಿ ತಂದು ಸುರ್ಗೇಬುಡ್ತು ಮತ್ತೊಂದ್ ಗೌಡತಿ ಅವನ ಬಾಳೆಯ ಅನ್ನದ ಮ್ಯಾಲೆ. ಮತ್ತೆ ಯನ್ನ ಮಕ ನೋಡ್ತ ಇಂವಾ 😝
ಆ ಮಕ ನಿಸ್ಸಹಾಯನಾಗಿ ಕೊಡ್ಲಿಗೆ ಬಿದ್ದವನ ನಮನಿ ಇತ್ತು.

    ಅಂತೂ ಪಾಯ್ಸ ಬಂತು.. ಪುಣ್ಯಕ್ಕೆ ಅದನ್ನ ಹುಟ್ಟಲ್ಲೇ ಬಡ್ಸಿದ್ದು ಗೌಡತಿ. ಅದನ್ನೇ ತಿಂದ ಶಾಸ್ತ್ರ ಮಾಡಿ ಎದ್ದು ಬಂದಾತು. ಮರ್ದಿನ ಮನೆಗೆ ಬಂದು ಜನಿವಾರ ತಗಂಡ್ರೂ ವನ್ನಮನೀ ಜಾತಿಗೆಟ್ಟ ಅನುಭವ ಸುಮಾರು ದಿನ ಇತ್ತು. 😝😝 

(ಯನ್ನ ಈ ಕಥೆಯ ಮತ್ತೆಲ್ಲೂ ಹೇಳ್ಕಂಬಂಗಿತ್ತಿಲ್ಲೆ 🙆)
🙏
- ಶ್ಯಾಂ ಭಟ್, ಭಡ್ತಿ
2 ಮೇ 2022, ಹವಿಹಾಸ್ಯ - ಲಘುನಗು

ಅಪ್ಪಿಅಣ್ಣ

ಯಮ್ಮನೆ ಅಪ್ಪಿ ಅಣ್ಣ.‌ 
#############
        ಅವನ ಹೆಸರು ವೆಂಕಟ್ರಮಣ ಹೇಳಿ ಯಾರಿಗೂ ಗೊತ್ತಿಲ್ಲೆ.. ಇಡೀ ಊರಿಗೇ ಅಪ್ಪಿ ಅಣ್ಣ ಅಂವಾ. 
       ಯನ್ನಪ್ಪ ಹೋದಾಗಿಂದ ಸತತ 16 ವರ್ಷದವರಿಗೆ ಯನ್ನ ಅನುಪಸ್ಥಿತಿಲಿ ಯನ್ನಬ್ಬೆಯ ಹೆರಿ ಮಗನಾಗಿ ಸೇವೆ ಮಾಡಿದ ಪುಣ್ಯಾತ್ಮ ಅಂವಾ. ಯನ್ನಬ್ಬೆಯ ಬಲಗೈ ಅಂವಾ...  'ಅಪ್ಪಿ' ಅಂವಾ. 

    ಅವನೇ ಹೋಲ್ ಎಂಡ್ ಸೋಲ್ ಯಮ್ಮನೆಯ ಉಗ್ರಾಣದ ಮಾಲಿಕ.  5 ತಿಂಗಳ ಹಿಂದೆ ಯನ್ನ ಕಾಕನ ಅಂತ್ಯಕಾರ್ಯದ ದಿನಗಳ ಸುದ್ದಿ ಇದು. ಇಂವ ಬೆಳಬೆಳಗ್ಗೆ 5 ಗಂಟೆಗೆ ಬಂದ್ಬುಡ್ತಾ. "ಇನ್ನೂ ಯಜ್ರಿಲ್ಲೆ! ಸೂರ್ಯ ತಲೆಮೇಲೆ ಬಂದ...  ಅಕ್ಕಚ್ಚು ಮಾಡ್ತಿದ್ದೆ ಯಾರಿಗೆಲ್ಲ ಚಪ್ಪೆ?!? " ಕೇಳ್ತ. ಅವನ ಗುಡ್ ಮಾರ್ನಿಂಗ್ ಹೇಳ್ವ ಪದ್ದತಿ ಅದೇಯ. 
      ಬೆಳಿಗ್ಗೆ ಆಸ್ರಿಗೆಯ ತಯಾರಿಗೆ ಮುಂಚಿನ ದಿನ ರಾತ್ರಿನೇ ಕೇಳ್ತ "ಅತ್ಗೇ ನಾಳೆ ಬೆಳಿಗ್ಗೆ ದಾಣಿಗೆ ಎಂತದೂ ?ಅಕ್ಕಚ್ಚಿಗ್ಗೆಂತದೂ?" 😝 
ಹಂಗೇ ರಾತ್ರಿ ಮನೆಗೆ ಹೋಗಕಾರೆ "ಎಲ್ಲಾ ಬಿದ್ಕಳೀ.. ಬೆಳಗಪ್ಪದ್ರೊಳಗೆ ಅಡ್ಗೊರಳ ಹಾಕಡಿ ಮತೇ" ಹೇಳ್ತ..‌  ಅವನ ಗುಡ್ ನೈಟ್ ಹೇಳ್ವ ಸ್ಟೈಲ್ ಇದೇಯ. 

    ಹೀಂಗೇ ಯಂಗಕ್ಕೆಲ್ಲ ಅಕ್ಕಚ್ಚು ಹೊಯ್ದಾದ ಮೇಲೆ "ದಾಣಿ ತಯಾರಿದ್ದೂ .. ಪಟಾಪಟಾ ಬನ್ನಿ.. ತಿಂದಾರೂ ಹಾಳ ಮಾಡ್ವ" ಅಂಬ. 
     ಅದಾದ ಮೇಲೆ ಅವಂದು ಊಟದ ಅಡಿಗೆ ತಯಾರಿ.. "ಅತ್ಗೆ ಪಟಪಟ ಮುರಗು ಕೊಚ್ಕೊಡೀ.. ಹಿಂಡಿ ಬೀಸ್ವವು ಯಾರು.. ಕಡೆಗೆ ಕರೆಂಟು ರಾಮಚಂದ್ರಪ್ಪಚ್ಚೀದಲ್ಲಾ" ಅಂಬ (ರಾಮಚಂದ್ರಪ್ಪಚ್ಚೀ ಅವನ ಅಪ್ಪ).  ಅವನ ಮಾತಿನ ಧಾಟಿನೇ ಹಂಗೆ.‌ ಇಡೀ ದಿನ ಖುಷಿಯಾಗಿಪ್ಪ.. ಉಳಿದವರನ್ನೂ ನಗ್ಯಾಡಸ್ತಾ ಇಪ್ಪ ವ್ಯಕ್ತಿತ್ವದ ಈ ನಮನಿ ಕುಶಾಲಗುಣ ಹುಟ್ಟಾ ಬಂದದ್ದೇಯಾಗಿಕ್ಕು 😬. 

      11 ನೇ ದಿನದ ಕಾರ್ಯಕ್ರಮ ಆ ದಿವ್ಸ. ಆ ದಿನ ಪಂಚಗವ್ಯ ಕೊಟ್ಟು, ಜನಿವಾರ ತೊಡ್ಸಿ ಮನೆ - ಮನಷರನ್ನೆಲ್ಲ ಶುದ್ಧ ಮಾಡಾದ ಮೇಲೆ ಒಂದು ಆಸ್ರಿಗೆ ತಗಂಡ ಭಟ್ರು ಉಳಿದ ಕಾರ್ಯಗಳ ಮುಂದುವರಿಸ್ತ್ರು. ರಾಶೀ ಕೆಲಸ ಇರ್ತು ಆ ದಿನ ಪಾಪಾ.
    ಎಲ್ಲರಕಿಂತ ಮದಾಲು ಅಪ್ಪಿ ಅಣ್ಣ ಶುದ್ಧ ಆಗವಲೀ... ಭಟ್ರಿಗಿಂತ ಜಾಸ್ತಿ ಇವಂಗೇ ಗಡಬಡೆ.. "ಭಟ್ರೇ ಇವತ್ತೇ ನೀವು ಗೋಮೂತ್ರ ಗೋಮಯ ಹಾಕತ್ರ ?" ಕೇಳ್ದಾ.
ಇವನ ಭಾಷೆ ಬಲ್ಲ ಭಟ್ರು 
"ಥೋ ಬಾರೋ ಮಾರಾಯಾ ನೀ ಮದಾಲು ತಗ.. ಹಂಗೇ ಹಗ್ಗ ಹಾಯ್ಕ" ಹೇಳಿ ಒಂದು ಜೋಡಿ ಜನಿವಾರನೂ ಕೊಟ್ರು... ಮಾತಿಗೆ ತಿರಗೇಟೂ ಕೊಟ್ರು. ಅಪ್ಪಿ ಅಣ್ಣ ಶುದ್ಧನಾಗಿ ಸೊಟಗ ಹೆಗಲೇರ್ಸಿ ಹೊಂಟ. 

   ಸಲ್ಪ ಹೊತ್ತಿಗೇ ಭಟ್ರು ಗಡಬಡೆ ಮಾಡದ್ರು.. "ಅಪ್ಪಿ ಅಣಾ  ಹಾ.. ಚಾ ಮಾಡು ಬಿರಿ ಬಿರಿನೆ.. ತಡಾ ಆತು.. ಆವಾಗೇ ಹಗ್ಗ ಹಾಯ್ಕಂಜ್ಯಲಾ" ಅಂದ್ರು.  
    ಐದೇ ನಿಮಿಷಕ್ಕೆ ಅವಲಕ್ಕಿ ಉಪ್ಪಿಟ್ಟು (ದಾಣಿ) ಮತ್ತೊಂದು ರವೆ ಪಾಯ್ಸ ಬಡಸ್ಕಂಡು ಅಪ್ಪಿ ಅಣ್ಣ... 
"ಭಟ್ರೇ ದಾಣಿ ಅಕ್ಕಚ್ಚೂ" ಅಂದಾ. 
     ಆಸ್ರಿ ಕುಡ್ಯಕಾರೆ "ಹೊಸ ನಮನಿ ರುಚಿ ಬಂಜಪಾ ರವೆ ಪಾಯ್ಸ ಅಪ್ಪಿ ಅಣಾ... ಮತ್ತೊಂದ್ ಸಲಿ ತಗ" ಅಂದ್ರು ಭಟ್ರು.
      "ಭಟ್ರೆ .. ನೀವ್ ಗಡಬಡೆ ಮಾಡದ್ರಿ.. ಗಡಬಡೆ ಮಾಡ್ಕಳಡಿ.. ಸಕಾಶ ತಗಳಿ... ಪಾಯ್ಸಲ್ಲ,  ಶಿರಾ ಅದು.. ಇವತ್ತೇ ಮಾಡದ್ದು...  ಒಂದೇ ಶೆಕೆ ಮದ್ಲೇ ಇಳಿಸಿದ್ದೆ" ಅಂದಾ ಅಪ್ಪಿ ಅಣ್ಣ. 🤣😂 

ಭಟ್ರ ಬಾಯಿಂದ ಮಾತೇ ಹೊರ್ಳಿದ್ದಿಲ್ಲೆ.. ಬಾಯಲ್ಲಿದ್ದದ್ದು ಶಿರಾ ಹೇಳಿ ತಲೆಗೇ ಹೊಳದ್ದಿಲ್ಲೆ😬😂😂 

🙏
- ಶ್ಯಾಂ ಭಟ್, ಭಡ್ತಿ 
(ಇಲ್ಲೇ ಹಲ್ಬಕಾರೆ ಮಾಡಿದ ಕಮೆಂಟುಗಳ ಸಂಘಟಿಸಿ ಒಂದು ರೂಪ ಕೊಟ್ಟಿದ್ದೆ ಅಷ್ಟೇ)
30/04/2022, ಹವಿಹಾಸ್ಯ - ಲಘುನಗು

ಛಾಯಕ್ಕನ ಛಾ



ಚಾಯಕ್ಕನ ಚಾ
*************
ಒಂದಾನೊಂದು ಕಾಲ ಅದು.
ಕಾಲೇಜಿನ ಗೋಲ್ಡನ್ ಡೇಸ್ ಮುಗ್ಸಿ ಚುಟ್ಪುಟ್ ನೌಕರಿ ಹುಡ್ಕಿ ಬೆಂಗಳೂರಿಗೆ ಕಾಲಿಟ್ಟ ಹೊಸ ದಿನಗಳು. ಮಹಾನಗರದ ಮಜ ಒಂದು ಬದಿಗಾದ್ರೆ..  ಬಪ್ಪ ಚೂರುಪಾರು ಸಂಬಳದಲ್ಲೇ  ಆ ನಗರದಲ್ಲಿ ದಿನದೂಡುವ ಅನಿವಾರ್ಯತೆ. ಹಂಗಾಗಿ ಪ್ರತೀ ಆದಿತ್ವಾರ ಎಲ್ಲಿ ಪರಾನ್ನ ಸಿಕ್ಕಗು ಹೇಳಿ ಕಾಯ್ತಾ ಇರ್ತಿದ್ದ ನನ್ನಂತ ಬ್ರಹ್ಮಚಾರಿ ಹುಡಗ್ರು. 

ತಿಂಗಳ ಅಖೈರಿನ  ವಂದು ಆದಿತ್ವಾರ...  ನಾನೂ, ಜಮದಗ್ನಿ ಮತ್ತೆ ಮಾಣಿ ಮೂರೂ ಜನರ ಕಿಶೆಲಿ ಕವಡೆ ಕಾಸಿಲ್ಲದೇ ಪರಾನ್ನ ಹುಡ್ಕಿ ಹೊಂಟ. ಯಾರ ಮನೆಗೆ ಹೋಗಕಾತು?! 🤔 ಎಲ್ಲೂ ವಿಶೇಷ ಇಲ್ಲೆ.. ಕರೆಯ ಇಲ್ಲೆ. ಮಾಣಿನೇ ಐಡಿಯಾ ಕೊಟ್ಟಂವ.  "ಯೇ ಚಾಯಕ್ಕನ ಮನೆಗೆ ಹೋಪನ.. ರಾಶೀ ದಿನಾತು ಹೋಗದೇಯ". ಬೇರೆ ಉಪಾಯ ಹೊಳಿದೇ ನಾನೂ ಜಮದಗ್ನಿ ಇಬ್ರೂ "ಅಕ್ಕು ನಡೆ" ಹೇಳೇ ಹೊಂಟ. 

ಚಾಯಕ್ಕನ ಮನೆ ಮುಟ್ಟಿದ್ದು ಅಪರಾಹ್ನ 2 ಗಂಟೆಗೆ. ಪೇಟೇಲಿಪ್ಪ ಜನರದ್ದು ಶಿಸ್ತಿನ ಜೀವನ. ಮೇಲಿಂದ ಚಾಯಕ್ಕನ ಮನೆ ಬಾವ ಲೆಕ್ಚರು. ಅಂವ ಮನಷ್ರು ಉಂಬೊತ್ತಿಗೇ ಉಂಬವನಕು. ಅವ್ರ ಮನೆಲಿ ಊಟ ಮಾಡಿ ಪಾತ್ರೆ ಕೌಂಚಿ ಆಗೋಜು ಹೇಳಿ ನಮಗೆಂತ ಗೊತ್ತಿತ್ತು?! ಹೊಟ್ಟೆಲಿ ಯಲಿ ವೋಡಾಡ್ತು ಯಂಗಕ್ಕೆ. 

ಹೋಗಿ ಓರ್ಮನೆ ಸರಕುರ್ಚಿ ಮೇಲೆ ಕುಕ್ರಸಿದ್ದೇಯ  'ಆಸ್ರಿಗೆ' ಕೇಳ ಬದಲಿಗೆ .. "ಏನ್ರೋ ಈ ಬದಿಗೆ ಸವಾರಿ ..‌ ಅದೂ ಮೂರ್ಜನ ಬ್ರಹ್ಮಚಾರಿ ಬಟ್ಟಕ್ಕ ಹೊಂಟಿದ್ರಿ?!" ಅಂದಾ ಬಾವಾ.  'ಮೂರ್ ಜನ ಹೊಂಟ ಕೆಲಸಾಗ್ತಿಲ್ಲೆ ಅಂಬ್ವಪ' ಹೇಳೂ ಸೇರಸ್ತಿದ್ನನ ಅಂವಾ... ಅಷ್ಟರಲ್ಲಿ ಒಳಗಿದ್ದ ಚಾಯಕ್ಕ ಹೆರ್ಗೆ ಬಂದು ಪುಣ್ಯ ಕಟ್ಕಂಡತು. 
"ಅತ.. ಈ ಬದಿಗೆಲ್ಲಿ ಬೆಳಗಾತ್ರೋ? ಬನ್ನಿ ಬನ್ನಿ ಆಸ್ರಿಗೆ? ಊಟಾಜ?" ಅಂತೂ. 
'ಎ ಹೆ ಎ ಬೇಡ' ಹೇಳಂವಾಗಿತ್ತು ನಾನು .. ಅಷ್ಟರಲ್ಲಿ ಈ ಜಮದಗ್ನಿ ಬೆನ್ನಿಗೆ ಚೂಂಟದ... 'ಸುಮ್ಮಂಗಿರಾ' ಹೇಳಿ ಅವನ ಸಂಜ್ಞೆ ಅದು. 
ಈ‌ ಸುಟ್ ಮಾಣಿ ಸುಮ್ಮಂಗಿರವ ಬ್ಯಾಡದ
"ಇಲ್ಲೆ ಎಂತದೂ ಬ್ಯಾಡಾ... ಉಂಡ್ಕಂಡೇ ಬಂಜ ನಂಗ" ಹೇಳವ.... ಚಾರ್ವಾಕ ಮಾಣಿ. 😳. ಇವತ್ ಮಾಣಿಯ ಬೊಜ್ಜ ಗ್ಯಾರಂಟೀ ಹೇಳಿ ಅಂದಾಜಾಗೋತು ಯಂಗೆ. ಇವ್ರಮನಿಂದ ಹೆರಬಿದ್ದ ಮೇಲೆ ಈ ಜಮದಗ್ನಿ ಆ ಮಾಣಿಯ ಬಿಟ್ರಲ್ದ! ಹೇಳಿ ಕಲ್ಪನೆ ಮಾಡ್ಕಂಡು ಮನಸಲ್ಲೇ ಬಂದ ನಗೆಯ ತಡ್ಕಂಡು ಜಮದಗ್ನಿ ಬದಿಗೆ ನೋಡಿರೆ ಅವ ನಗ್ಯಾಡ್ತ್ನೋ, ಶಿಟ್ಟಲ್ಲಿದ್ನೋ, ತೀಡತ್ನೋ ವಂದೂ ಅಂದಾಜಾಗದ ಮಕಾ. ಚಾಕೂಗೀಕೂ ಇದಿದ್ರೆ ಮಾಣಿಗೆ ಹಾಕೇಬಿಡ್ತಿದ್ದ ಅಂವಾ.
   ಒಬ್ರ ಮುಖ ಒಬ್ರು ನೋಡಿ ಬಪ್ಪ ನಗೆಯ ಅಬಗತ್ಗಂಡ... ನಂಗಳ ಈ ಸಂಜ್ಞಾ ಭಾಷೆಯ ಅಕ್ಕ ಬಾವ ಗ್ರೆಂಸಿದ್ವಿಲ್ಲೆ ಹೇಳೂಲೆ ಬತ್ತಿಲ್ಲೆ. 

ಚಾಯಕ್ಕ "ಚಾ ಮಾಡ್ತೆ ಹಂಗರೆ" ಅಂತು. ಆಗಲಪ ಅದಾರದು.
ಚಾ ಬಂತು. ಸಂತಿಗೆ ಕರೆ, ಬಿಸ್ಕೀಟು. ಆ ಪ್ಲೇಟನ್ನ ಗಬಕ್ಕನೆ ತಗಂಡು ಅಷ್ಟೂ ತಿಂದಬುಡನ ಹೇಳಷ್ಟು ಹಶಿವು ನಂಗಾದ್ರೆ ... 'ಇದು ನಂಗೊಬ್ಬಂಗೇ ಸಾಕಾಗ' ಹೇಳೂನಮ್ನಿ ಮುಖಚರ್ಯೆ ಜಮದಗ್ನಿದು. ಮಾಣಿಯ ಬದಿಗೆ ಇಬ್ರೂ ಕಣ್ಣಾಯ್ಸಿರೆ ಪ್ಲೇಟ್ ಬದೀಗೇ ದುರುಗುಟ್ಕ ಗುರಾಯಿಸ್ತಿದ್ದ ಮಾಣಿ. ಕಿಸಕ್ಕನೆ ನಗೆ ಬಂದ್ರೂ ಮತ್ತೆ ಅಬಗತ್ಗಂಡ ನಂಗವಿಬ್ರೂವ. 

ಊಟಂತೂ ಸಿಕ್ಕಿದ್ದಿಲ್ಲೆ... ಗನಾ ನೀರ ಕುಡದು.. ಆ ಚಾಯಕ್ಕನ ಚಾ ನಳಗಿ, ನಾಕ್ ಕಾಳ ಕರೆ ತಿಂದರೆ... "ಪ್ಲೇಟ್ ಖಾಲಿ ಮಾಡ್ರ ತಮಾ.. ನಿಂಗಕ್ಕೇ ಇಟ್ಟದ್ದು" ಹೇಳಿ ಸತ್ಕಾರ ಬೇರೆ ಮಾಡ್ತು ಚಾಯಕ್ಕ. 
"ಅಕ್ಕು ... ಇಲ್ಲೆ... ಬೇಡ ಬೇಡ ... ಸಾಕು.. ತಗಂಡೆ" ಹೇಳಿ ಬಿಡ್ಯ ಮಾಡ್ಕಳಕಾತಲೀ.... ಪ್ಲೇಟಲ್ಲಿಟ್ಟದ್ದಷ್ಟೂ ಬರಗಿ ತಿಂದ್ರೆ ನಂಗ ಹೋದ ಮೇಲೆ "ಹಪ್ ಚಪ್ಪರ್ಕ ಪೋರಗ" ಅಂದ್ರೆ ಚಾಯಕ್ಕ?! 😬 

ಅಂತೂ ಬಂದ ಕೆಲಸ ಆಜಿಲ್ಲೆ ಹೇಳಿ ಹಶಿದ ಹೊಟ್ಟೆಲೇ ಸವಾರಿ ಎಬ್ಬಸ್ಗ ಬಂದಾತು....
ಬರಕಾರೆ ಮಾಣಿ ಬುರ್ಡೆಗೆ  ಸಮಾಧಾನ ಅಪ್ಪಷ್ಟು ಗನ್ನಾ ನಾಕ್ ತಟ್ಟಾತು.... ಅಬಗತ್ಗಂಡಿದ್ದ ನಗೆಯನ್ನೆಲ್ಲ ಖುಲ್ಲಂ‌ ಖುಲ್ಲಾ ಬಿಟ್ಟಾತು. 

ಜಮದಗ್ನಿ ಕೈ ತಿರ್ಪಿದ ಹೊಡ್ತಕ್ಕೆ ನಾಕ್ ದಿನ ಮಲಗಿದ್ದ ಮಾಣಿ. ವರ್ಷಗಟ್ಲೆ ಕೈ‌ ನೋವು ಹೇಳ್ತಿದ್ದ ಅಟ್ರಕಾಣಿ. 😝😬😂 

🙏
- ಶ್ಯಾಂ ಭಟ್, ಭಡ್ತಿ
22/04/2022, ಹವಿಹಾಸ್ಯ - ಲಘುನಗು

ಅಜ್ಜಿ


       ತುಪ್ಪ ಬೆಲ್ಲದ ರುಚಿ ಗೊತ್ತಿಲ್ದೋದ ಹೈಗರಿಲ್ಲೆ.  ದಿನ ಬೆಳಗಾದರೆ ದೋಸೆ ಸಂತಿಗೆ ತುಪ್ಪ ಬೆಲ್ಲ ಹವ್ಯಕರ ಸಾಮಾನ್ಯ ಆಸರಿಗೆ. ಬೆಳಗಿನ ತಿಂಡಿಗೆ  'ಆಸರಿಗೆ' ಹೇಳದೇ ಸರಿಯಾದ ಹವ್ಯಕ ಶಬ್ದ. 

       ಶಣ್ಣುಡ್ರಿಗೆ ಸಾಮಾನ್ಯವಾಗಿ ಊಟ ಅಂದರೆ ವಾಯಾರ.. ಆಸರಿಗೇನೇ ಪ್ರೀತಿ. ಯಂಗೂ ಹಂಗೇಯ. ಬೆಳಿಗ್ಗೆ - ಮಧ್ಯಾಹ್ನ- ಸಂಜೆ ಹೇಳೆಲ್ಲ ಸಂಬಂಧಿಲ್ಲೆ..‌ ಇಡೀ ದಿನ ಊಟದ ಬದಲಿಗೆ ಆಸರಿಗೇ ಕೊಡ್ಲಾಗಿತ್ತು.. ಈ ದೊಡ್ಡವಕೆಲ್ಲ ತಲೆ ಇಲ್ಲೆ ಅನಸ್ತಿತ್ತು 😳
     ಸಂಜೆ ಶಾಲೆಮನೆ‌ ಬಿಟ್ಟು  ಮನೆಗೆ ಬಂದಕೂಡ್ಲೇಯ ಆ ಕ್ಷಣದ ದಿಡೀರ್ ಆಸರಿ - ಬೆಳಿಗ್ಗೆ ಎರೆದಿಟ್ಟು ಉಳಿದ ವಣಾ ದೋಸೆ ಅಥವಾ ವಣಾ ತೆಳ್ಳೇವು... ಜತಿಗೆ ತುಪ್ಪ-ಬೆಲ್ಲ.  ಬಡಸದು ಯಾರು? - ಅಜ್ಜಿ ! ಅಮ್ಮ ಹೇಳಿ ಕರೆಯದು ರೂಢಿ.  ಅದೇ ಕಾರಣಕ್ಕೆ ಈ ಅಜ್ಜಿ ಅಂದ್ರೆ ಯಂಗೆ ರಾಶೀ ಇಷ್ಟನೂವ... ಕಷ್ಟನೂವ !😀 

  ಮೇ ರಜೆಲೆಲ್ಲವ ಯಂಗಕ್ಕೆ ಸಂಜೆ 4 ಘಂಟೆಗಿಂತ ಮೊದಲೇ ಅರಕಲು ಗದ್ದೆ ಬೈಲಲ್ಲಿ ಆಟ ಆಡಲೆ ಹೋಪ ಗಡಬಡೆ.‌ ಆದರೆ ಅಜ್ಜಿಯ ಕಾನೂನಿನ ಪ್ರಕಾರ ಆಸ್ರಿಗೆ ಕೊಡಲೆ  5 ಗಂಟೆ ಆಗವು. ಮೊದಲೇ ಕೇಳಿದ್ರೆ... "ತಮಾ 5 ಘಂಟೆಯಾದ್ರೂ ಆಗ್ಲಿ, ಕಡೆಗೆ ಹಶ್ವಾಗೋಗ್ತು" ಹೇಳ್ತಿತ್ತು. ಒಂದು ವೇಳೆ ಆಸರಿ ಕುಡಿದೇ ಆಡಲೆ ಹೋದರೆ ಇದೇ ಅಜ್ಜಿ "ವಂದ್ ಹನೀ ಆಸರಿನೂ ಕುಡಿದೇ ಹೋಜ ಸುಟ್ ಪೋರಗ.." ಹೇಳೂ ಕಾಳಜಿ ಮಾಡ್ತಿತ್ತು. ಅಜ್ಜಿಯ ಈ 'ಘಂಟೆ'ಯ ಮಿತಿ ಯಂಗೆ ಮುಖ್ಯವಾಗಿ ಆಟ ಆಡಲೋಪಲೆ ಅಲವರಕೆಯಾಗಿತ್ತು. 

    ಆ ದಿನ ಈ ಸಂಕಟಕ್ಕೆ ವಂದು ಉಪಾಯ ಹುಡಕ್ದೆ. ಸುಮಾರು 4 ಘಂಟೆಯಪ್ಪ ಹೊತ್ತಿಗೇ ಗಡಿಯಾರದ ಮುಳ್ಳ 5 ಘಂಟೆಯಪ್ಪ ಹಂಗೇ  ತಿರುಗ್ಸದು. ಆಗ ಅಜ್ಜಿ ಆಸರಿಗೆ ಕೊಡ್ತಲೀ!.. ಹೇಳಿ ಲೆಕ್ಕ ಹಾಕ್ದಿ.  ಗೋಡೆ ಗಡಿಯಾರ ಸಸಾರಕ್ಕೆ ಕೈಮುಟ್ಟತಿತ್ತಿಲ್ಲೆ.‌. ಸರ್ಕಸ್ಸೇ ಮಾಡಕಾತು.‌  ಮನೆಲ್ಲಿದ್ದ ಒಂದೇ ಒಂದು ಎತ್ತರದ ಮರದ ಸ್ಟೂಲು - ಮಣಭಾರ.... ಅದನ ಹೇಂಗೆ ವಕ್ಕ ಬಂಜ್ನ ಈಗಲೂ ನೆನೆಸ್ಕಂಡ್ರೆ ಆಶ್ಚರ್ಯ ಆಗ್ತು. ಆ ಕಷ್ಟ ಯಂಗೇ ಗೊತ್ತು.‌ ಇದೆಲ್ಲ ಯಾರಿಗೂ ಕಾಣದೋದಂಗೆ ಮಾಡವು ಮತೇ. ಹಶವು ಮನಷ್ಯನತ್ರ ಎಂತೆಂತ ಮಾಡಸ್ತು ಹದಾ! 😝 

        ಅಂತೂ ಇಷ್ಟೆಲ್ಲ ಸರ್ಕಸ್ ಮಾಡಿ 4 ಘಂಟೆಗೇ "5 ಘಂಟೆಯಾತು ಅಮಾ... ನೀ ಆಸರಿ ಕೊಡ್ತ್ಯ ಇಲ್ಲ ನಾ ಹಾಂಗೇ ಉಪಾಸ ಹೋಗಿ ಸಾಯವ?"  ಹೇಳಿ ಭಾವನಾತ್ಮಕ ಪ್ರಶ್ನೆ ಹಾಕಿ... ಪಾಪ ಭಾವಾರ್ಥಿ ಅಜ್ಜಿ ಹತ್ರ ಆಸರಿ ಗಿಟ್ಟಸಗಂಡು  ಆಟ ಆಡಲೆ ಪಾರ್ಗೆಲೆ. 

     ಆಟ ಮುಗಿಸಿ ವಾಪಸ್ ಬರಕಾರೆ ರಸ್ತೆಯ ಮೇಲೆ ಡಾಕ್ಟರ್ ಮಾವನ ರಾಜದೂತ ನಿಂತಿದ್ದು.‌ ಮನೆಗೆ ಹೋಗಿ ನೋಡಿರೆ, ಅಜ್ಜಿ ಹಾಸಿಗೆಲಿ ಮಲಗಿದ್ದು. ಡಾಕ್ಟರ್ ಮಾವನೂ ಇದ್ದ‌. ಆಯಿಯ ಕೇಳ್ದಿ "ಅಮ್ಮಂಗೆಂತಾ ಆತೇ ಆಯಿ?" 😳

ಆಯಿ ಹೇಳಿದ್ದು.... 
     ನಾನು ಆಡಲೆ ಹೋದಮೇಲೆ ಅಜ್ಜಿ ಕೊಟ್ಟಿಗೆಗೆ ಹಾಲು ಕರೆಯಲೆ ಹೋಜಡ ಪಾಪ ಪ್ರತೀದಿನ ಹೋಪಂಗೇ (ಗಡಿಯಾರದ) 6 ಘಂಟೆಗೆ !! ಆದರೆ ಯನ್ನ ಯಾಪಾರ  ಗಡಿಯಾರ ಮುಂದಿತ್ತ ಇಲ್ಯ... ಹಾಲು ಕರೆಯ ಟೈಮಲ್ಲ. ಒಂತಾಸು ಮದ್ಲೇ ಹೋಜು ಅಜ್ಜಿ.  ಎಮ್ಮೆ ಚಾಳಿ ಮಾಡಿದ್ದು.... ಎಮ್ಮೆ‌ ಸೊರದ್ದಿಲ್ಲೆ - ಅಜ್ಜಿ‌ ಬಿಟ್ಟಿದ್ದಿಲ್ಲೆ.... ಮತ್ತೂ ಜಗ್ಗಿಕ್ಕು. ತಗ ಎಮ್ಮೆ ಒದ್ದಿಗಿದು - ಅಜ್ಜಿ ಬಿದ್ದಿಗಿದು.‌ 😳😀

ಅಂತೂ ಅಜ್ಜಿ ಒಂದು ವಾರ ಹಾಸಿಗೆ ಹಿಡತ್ತು.‌ ದಿನಾ ಅದ್ರ ಸೊಂಟ ತಿಕ್ಕಿದ್ದಿ... ಪಾಪ ಪರಿಹಾರ ಆಗವಲೀ‌ ಯಂಗೂವ. 
   ಯಂಗೋ ವಳಗೊಳಗೇ  ಖುಷಿಯೋ ಖುಷಿ‌ ಒಂದಬದಿಗೆ. ಆಯಿ ಆದ್ರೆ ತುಪ್ಪಕ್ಕೆ ಕಂಜೂಸಿ ಮಾಡ್ತಿಲ್ಲೆ.  ಅಜ್ಜಿ ಬಿದ್ಕಂಡಿದ್ದಷ್ಟೂ ಚೊಲೋ. 😝
ಒಂದೇ ವಾರದಲ್ಲಿ ಅಜ್ಜಿ ಚುಪರಾಗೋತು. ಗಟ್ಟಿ ಜೀಂವ ಮತೇ. 

ಆದರೆ ಈ ಘಟನೆಯ ನಂತರ ಎಂತಕ ಏನೇನ.... ಯಂಗೆ ಗಡಿಯಾರ ಮುಂದಿಡ ಮನಸ್ಸಾಜಿಲ್ಲೆ. ಹಾಂಗೇಯ ಅಜ್ಜಿಗೂ ಮೊಮ್ಮಗನ ಘನಕಾರ್ಯ ಗೊತ್ತಾಗಿತ್ತ ಏನೇನ... ನಾ ಕೇಳಿದಾಗೆಲ್ಲ ಆಸ್ರಿಗೆ ಕೊಡತಿತ್ತು.. ತುಪ್ಪನೂ ಕಂಜೂಸಿ ಮಾಡದ್ದೇ ಬಡಸತಿತ್ತು ! 

- ಶಾಂ‌ ಭಟ್, ಭಡ್ತಿ 
21/04/2022, #ಹವಿಹಾಸ್ಯ - ಲಘುನಗು