ಆ ದಿನ ಯಾರೋ ಒಬ್ಬರ ಟೇಪ್ ರೆಕಾರ್ಡರ್ ಒಂದನ್ನು ರಿಪೇರಿಗೆ ಅಂತ ತಂದಿದ್ದೆ ...
ನಾನೇನೂ ಪಕ್ಕಾ ನುರಿತ ರಿಪೇರಿಯವನಾಗಿರಲಿಲ್ಲ... ಸಣ್ಣ ಪುಟ್ಟ ರಿಪೇರಿಯ ಹುಚ್ಚು ನನ್ನಲ್ಲಿತ್ತು .... ಅದನ್ನು ಸರಿ ಮಾಡುವೆನೆಂಬ ವಿಶ್ವಾಸವಿಲ್ಲದಿದ್ದರೂ ಮತ್ತೆ ಜಾಸ್ತಿ ಕೆಡಿಸುವುದಿಲ್ಲವೆಂಬ ಆತ್ಮವಿಶ್ವಾಸ ನನ್ನಲ್ಲಿರುತ್ತಿತ್ತು. ಅದನ್ನು ಕೊಡುವ ಗ್ರಾಹಕನಿಗೆ, 'ಇವ ರಿಪೇರಿಮಾಡುವ'ನೆಂಬ ವಿಶ್ವಾಸ ವಿಲ್ಲದಿದ್ದರೂ "ಒಂದು ವೇಳೆ ಸರಿ ಹೋದರೆ ಪುಕ್ಕಟೆಯಲ್ಲಿ ಆಯ್ತಲ್ಲ" ಎಂಬ ಭಾವವಿರುತ್ತಿತ್ತು. ಅಂದರೆ ಒಂದು ಲೆಕ್ಕದಲ್ಲಿ ಇಬ್ಬರೂ ತಮ್ಮ ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಿದ್ದೆವು ಎನ್ನಬಹುದು !!
ರವಿವಾರವಿರಬೇಕು, ಹಾಗೆ ಮಧ್ಯಾಹ್ನ ಊಟ ಮಾಡಿ ಅದನ್ನು ಬಿಚ್ಚಿ 'ನಾ-ದುರಸ್ತಿಯ' ಕಾಯಕದಲ್ಲಿ ತೊಡಗಿ ಚಂಚಲವಾದ ಮನಸ್ಸನ್ನು ಹತ್ತಿಕ್ಕಲಾಗದೆ ಬಿಚ್ಚಿದ್ದ ವಸ್ತುಗಳನ್ನು ಹಾಗೆ ಬಿಟ್ಟು ಎಲ್ಲೋ ಹೊರಟು ಹೋದೆ.
ಸಂಜೆ ವಾಪಸ್ಸು ಬಂದು ನೋಡುವಾಗ ಬಿಚ್ಚಿಟ್ಟಿದ್ದ ಟೇಪ್ ರೆಕಾರ್ಡರ್ ಜಾಗದಲ್ಲಿ ಇರಲಿಲ್ಲ. ಸೀದಾ ಆಯಿಯಲ್ಲಿ ಕೇಳಿದೆ. "ಅವ್ರುಏನೋ ಚೊಕ್ಕ ಮಾಡ್ತಾ ಇದ್ದಿದ್ರು ನೋಡು" ಎಂಬ ಉತ್ತರ ಬಂತು.
ಅಪ್ಪನಲ್ಲಿ ಕೇಳಿದೆ - "ಅಪ್ಪಯ್ಯ, ಇಲ್ಲಿ ಬಿಚ್ಚಿಟ್ಟಿದ್ದ ಟೇಪ್ ರೆಕಾರ್ಡರ್ ಎಲ್ಲೋತು?" "ಹರಡ್ಕ ಬಿದ್ದಿತ್ತು, ತೆಗದು ಚೀಲದಲ್ಲಿ ಹಾಕಿಟ್ಟಿದ್ದೆ ನೋಡು ಗಿಳಿಗುಟ್ಟಕ್ಕೆ" ಅಪ್ಪಯ್ಯನ ಉತ್ತರ.
ಕಿರಾಣಿ ತರುವ ಆರಾಮ ಕುರ್ಚಿಯ ಅರಿವೆಯಿಂದ ಮಾಡಿದ್ದ ಚೀಲವದು. ಟಿಪಿಕಲ್ ಹವ್ಯಕರ ಮನೆಗಳ ಚೀಲ ... ಗಿಳಿಗುಟ್ಟಕ್ಕೆನೇತಾಡುತ್ತಿತ್ತು.
ಸಿಟ್ಟು ನೆತ್ತಿಗೇರಿತು. ನಮ್ಮದಲ್ಲದ ವಸ್ತು .. ಒಂದೋ ಎರಡೋ ಸ್ಕ್ರೂ ಕಳೆದರೂ ದಂಡ ತೆರುವ.. ಮರ್ಯಾದೆ ಪ್ರಶ್ನೆ.. !!
"ಥೋ... ಅಪ್ಪಯ್ಯ ಎಂತಕೆ ತೆಗದ್ಯ?" ಅಪ್ಪಯ್ಯನ ಮೇಲೆ ಹರಿ ಹಾಯ್ದೆ. "ಹರಡ್ಕ ಬಿದ್ದಿತ್ತಾ" ಅಪ್ಪಯ್ಯನ ಸಮಝಾಯಿಷಿ. "ಮಳ್ಳನಾ .. ಒಂದು ಸ್ಕ್ರೂ ಕಳೆದರೂ ಹೋತು.... ತಂದ್ ಕೊಡ್ತ್ಯಾ? ಮಳ್ಳಲಾ ಅಪ್ಪಯ್ಯ... ಬುದ್ದಿ ಇಲ್ಯನಾ.. ಹ್ಯಾಪನ ಹಾಂಗೆ ಆತಲ ... ಥೋ " ಸಿಟ್ಟು ವಿವೇಕ ಕೆಡಿಸಿತ್ತು.... ಅವಿವೇಕ ಅಪ್ಪನೆಂದೂ ನೋಡಲಿಲ್ಲ.. ಮೂರ್ಖನಾಗಿದ್ದೆ...
ಅಷ್ಟರಲ್ಲೇ ಅಪ್ಪ ಚೀಲ ತೆಗೆದು ಆ ಸ್ಕ್ರೂ ಹುಡುಕಲು ಪ್ರಾರಂಭಿಸಿದ್ದರು ಪಾಪ. ಅದರಲ್ಲಿ ನಿಜವಾಗಲೂ ಒಂದು ಮುಖ್ಯವಾದ ಸ್ಕ್ರೂ ಸಿಗಲಿಲ್ಲ. ಮತ್ತೆ ವಟ ವಟ ಅಂತ ಅಪ್ಪನಿಗೆ ಬಯ್ಯುತ್ತಲೇ ಇದ್ದೆ. ಅಪ್ಪ ಇಡೀ ಜಗುಲಿಯಲ್ಲಿ ಪೊರಕೆ ಹಿಡಿದು ಗುಡಿಸಿ ಕಸಗಳ ನಡುವೆಯೂ ಹುಡುಕತೊಡಗಿದರು ಪಾಪ.
ತುಟಿ ಪಿಟಕ್ಕೆಂದು ಮಾತನಾಡದೆ - " ಅದೆಲ್ಲೋ ಇಲ್ಲೇ ಇರ್ತು, ನಂಗೆ ಗೊತ್ತಾಯ್ದಿಲ್ಲೆ " ಎಂದರು ಕ್ಷಮಾಪಣೆಯ ದನಿಯಲ್ಲಿ ಅಷ್ಟೇ.
ಎಷ್ಟೋ ನಿಮಿಷದ ಹುಡುಕಾಟದ ನಂತರ ಆ ಮಹಾ ಸ್ಕ್ರೂ ಅಪ್ಪನಿಗೆ ಸಿಕ್ಕಿತು. ಅವರಿಗೆ ಇವನಿಂದ ಕಾಟ ತಪ್ಪಿತಲ್ಲ ಎಂದು ಖುಷಿಯಾಯ್ತೋ .. ಗೊತ್ತಿಲ್ಲ .. ನನಗೆ ಮಾತ್ರ ಆಗ ನನ್ನ ವಿವೇಕ ಹಿಂದಿರುಗತೊಡಗಿತ್ತು . ಆದರೆ ಕಾಲ ಮಿಂಚಿತ್ತು. ಮಾತು ಆಡಿದರೆಹೋಯಿತು .. ಮುತ್ತು ಒಡೆದರೆ ಹೋಯಿತು ಎಂಬ ಹಾಗೆ - ನಾನು ಏನೇನೋ ಬಯ್ದಿದ್ದೆ. ಮಗನ ಹುಚ್ಚಾಟ ವನ್ನು ನೋಡಿ - 'ತಾಕೊಟ್ಟ ಸಂಸ್ಕೃತಿ' ಇದೆಯಾ ಎಂದು ಆಶ್ಚರ್ಯಪಟ್ಟಿರಬೇಕು ಅಪ್ಪ. . ನಾನು "ಸಾರೀ" ಎಂದೆನಾದರೂ ಹೆತ್ತ ತಂದೆಗೆ ಬಯ್ದಿದ್ದಕ್ಕೆ ಕ್ಷಮೆ ಇದೆಯಾ? ಸಮಾಧಾನವಂತೂ ಆಗಿಲ್ಲ ನನಗೆ.
ಇದಾದ ಕೆಲವೇ ದಿನಗಳಲ್ಲಿ ನಾ ಊರು ಬಿಟ್ಟಿದ್ದೂ - ಅಪ್ಪನ ಕಾಯಿಲೆ ವೃದ್ದಿಸಿದ್ದೂ - ಅವರು ನಮ್ಮನ್ನಗಲಿದ್ದೂ ಆಗಿ ಹೋಯಿತು.
ಒಂದೇ ಒಂದು ಸಲ ಅವರನ್ನಪ್ಪಿ "ಅಪ್ಪಯ್ಯ ತಪ್ಪಾತು... I'm sorry" ಎಂದು ಚಿಕ್ಕ ಮಗುವಿನಂತೇ ಅವರ ಕೆನ್ನೆಯ ಮೇಲೊಂದು ಮುತ್ತಿಡಬೇಕೆಂಬ ಬಯಕೆ ಬಯಕೆಯಾಗಿಯೇ ಉಳಿದುಹೋಗಿದೆಯೀಗ.
ನಿಮ್ಮಗಳ ಕಾಟವೇ ಬೇಡ, ಮಕ್ಕಳು ದೊಡ್ದವರಾಗುವಲ್ಲಿಯವರೆಗೆ ತಾವಿರಬಾರದು ಎಂದುಕೊಂಡಿರಾ ಅಪ್ಪಾ?
sorry ಅಪ್ಪಯ್ಯಾ.