"ಕೂಸಿನ ಕಥೆ" ಅಂದಮಾತ್ರಕ್ಕೆ ಅದು ಕೂಸಿನ ಮಲಗಿಸವು ಹೇಳಿ ಹೇಳಿದ ಬಂಡು ಕಥೆ ಅಥವ ಮಕ್ಕಳ ಕಥೆ ಹೇಳಿ ತಿಳಕಳವು ಹೇಳಿಲ್ಲೆ... ಏನೋ ಮನಸ್ಸಲ್ಲಿ ಹೊಳೆದ ಕಥೆ ಕೆಲವಾದರೆ.. ಇನ್ನು ಕೆಲವು ಕರ್ಮ ಧರ್ಮ ಸಂಯೋಗದಿಂದ "ಕವಿ ಸಮ್ಮೇಳನ"ದಲ್ಲಿ ಕಿಮಿಗೆ ತಾಗಿ ಹೋದ (ನಾಟಿದ) ಕಥೆಗಳು ಕೆಲವು. ಆ ಕಥೆಗೇ ಸಲ್ಪ ಬೆಣ್ಣೆ, ಉಪ್ಪು, ಖಾರ (ಮಸಾಲೆ) ಹಚ್ಚಿ ಶಣ್ಣದೊಂದು ಕಥೆಯ ರಾತ್ರಿ ಹಲವು ’ನಿಮಿಷ’ಗಳ ಕಥೆಯಾಗಿ ಹೇಳಕಾಗತು. ಅದು ನಂದೊಂದೇ ಅಲ್ಲ ...ಎಲ್ಲ ಅಪ್ಪ ಅಮ್ಮಂದಿರ ಖರ್ಮ. !!
ಇನ್ನು ಇವತ್ತು... ಈ ’ನಿಮಿಷ’ಕ್ಕೆ ಪುರಾಣ ಪುರುಷರ ಬಗ್ಗೆ ಒಲವು - ಆಸಕ್ತಿ ಬಂಜು ... ಟಿವಿಯಲ್ಲಿ ಬಪ್ಪ ರಾಮಾಯಣ ಮಹಾಭಾರತ, ಕೃಷ್ಣ - ಹನಮಂತರ ನೋಡುಲೆ ಹಾತವರಿತು ಹೇಳಾದರೆ ಅದಕ್ಕೆ ಮೂಲ ಕಾರಣನೇ ಪ್ರತೀ ರಾತ್ರಿ ಆಕಳಿಸ್ತವ ಯಾ ಹೇಳ್ವ ಈ ಕೂಸಿನ ಕಥೆಗಳು.
ವಂದ್ ಸಲ ಸೀತಾಮಾತೆಗೆ ಹನುಮಂತನ ಸೇವೆ ನೋಡಿ ಖುಷಿಯಾತಡ. ’ನನ್ನ ಹುಡುಕುಲೆ ರಾಮಂಗೆ ಸಹಾಯ ಮಾಡಿದ್ದ... ಚೂಡಾಮಣಿ ತಗಂಬಂದು ರಾಮಂಗೆ ಕೊಟ್ಟಿದ್ದ.... ರಾವಣನ ಸೋಲಿಸುಲೆ ಸಹಾಯ ಮಾಡಿದ್ದ... ವಟನಲ್ಲಿ ರಾಮನ ಬಂಟ ಇಂವಾ... ಇವನ ರಾಮಭಕ್ತಿ ಮತ್ತೆ ಅವನ ಸೇವೆ ಅದ್ಭುತ' ಹೇಳಿ ಖುಷಿಯಾಗಿ .... ಹನಮಂತನ ಕರದು ಅವಂಗೆ ತನ್ನ ಕೊರಳಲ್ಲಿದ್ದ ಭಯಂಕರ ಚೆಂದದ ಮುತ್ತಿನ ಸರನೇ ತೆಗೆದು ಬಹುಮಾನ ಹೇಳಿ ಕೊಟ್ಟತಡಾ...
(ಈ ಮಧ್ಯ ’ಚೂಡಾಮಣಿ ಅಂದರೆಂತು’ ಹೇಳುವ ಪ್ರಶ್ನೆ ಬಂತು... ಚೂಡಾಮಣಿಯ ಬಗ್ಗೆ ಸಣ್ಣದೊಂದು ಪೀಠಿಕೆ ಕೊಟ್ಟು ’ಆ ಕಥೆ ನಾಳೆ ಹೇಳತೆ’ ಹೇಳಿ ಸಮಾಧಾನ ಮಾಡಿದ ಮೇಲೆಯ ಕಥಾಭಾಗದ ಮುಂದುವರಿಕೆಗೆ ಅನುಮತಿ ಸಿಕ್ಕಿದ್ದು ಮತ್ತೆ ಇನ್ನುಮುಂದೆ ಯಾವ ಕಥೆಯಲ್ಲೂ ಹೊಸ ಪದಗಳ ಪ್ರಯೋಗ ಮಾಡೂಲಾಗ ಹೇಳಿ ತೀರ್ಮಾನ ಅಲ್ಲ ಯೋಚನೆ ಮಾಡಿದ್ದು. ಅಲ್ಲ ತೀರ್ಮಾನನೇ ಮಾಡಿರೂವ ಅಪ್ಪ ಹೋಪ ಕೆಲಸಲ್ಲ ಅದು !!)
ಹನಮಂತ ಆ ಮುತ್ತಿನ ಸರ ಹರದು ಆ ಮುತ್ತನೆಲ್ಲಾವ ವಂದೊಂದೇ ಹೀಂಗೆ ಹಿಂದೆ ಮುಂದೆ ಮಾಡಿ ನೋಡಿ.... ಮುತ್ತಿನ ಮಧ್ಯದ ತೂತಿನ ವಳಗೂ ಯೆರಡೂ ಬದಿಂದ ನೋಡಿ ವಗದುಬುಟನಡ.....ಮದಲೇ ಹನಮ... ಮಂಗನ ಬುದ್ದಿ.... ಮುತ್ತು ಅಂದ್ರೆಂತು .. ಅದರ ಬೆಲೆ ಯೆಂತು ಗೊತ್ತಿಲ್ಲೆ. ಇದನ್ನ ನೋಡಿ ಸೀತೆಗೆ ಆಶ್ಚರ್ಯನೂ ಆತಡ ಶಿಟ್ಟೂ ಬಂತಡ... ಕೇಳೇಬುಡತಡ..
(ಇಲ್ಲೂ ಹಾಂಗೇಯ.. ’ಯೆಂತಕೆ ವಗದಾ?’ ಹೇಳುವ ಪ್ರಶ್ನಾರ್ಥಕ ಬಂತು... ’ತಡೆ ಮಲಯಾಳಕ್ಕೆ ಹೋಪಕಿಂತ ಮೊದಲೇ ಕಿಮಿ ಹರ್ಕಳಡಾ, ಹೇಳತೆ’ ಹೇಳಿ ಹೇಳಿದ್ದು ಅರ್ಥ ಆಗದೇ ’ಅಪ್ಪ ಯೆಂತೋ ಅರ್ಥವಾಗದ್ದ ಹೇಳದ’ ಹೇಳಿ ತಿಳಕಂಡಿರವು ...ವನ್ನಮನಿ ಮಾಡಿ ನಗ್ಯಾಡಿ ಕಥಾಭಾಗ ಮುಂದರಿಕೆಗೆ ’ಹುಂ’ಗುಟ್ಟಿತ್ತು ಕೂಸು)
ಸೀತೆ ಹೇಳತಡ
"ಹನಮಾ... ಯೆಂತ ಮಂಗನೋ ನೀನು...ಅಷ್ಟು ಚೊಲೋ ಮುತ್ತಿನ ಸರ ತೆಗೆದು ಕೊಟ್ಟಿದಿದ್ದೆ.... ಅದರ ಬೆಲೆಯೇ ಗೊತ್ತಿಲ್ಲೆ ನಿಂಗೆ... ಇಡೀ ಸರ ಹರದದ್ದಲ್ಲದ್ದೇ ಆ ಮುತ್ತನೂ ಯೆಲ್ಲ ವಗೀತ ಇದ್ಯಲಾ... ಯೆಂತ ಮಳ್ಳನಾ? ನೀ ವಗೇತೆ ಹೇಳಾದರೆ ಕೊಡತಿದ್ನೇ ಇಲ್ಲೆ... ಯಂಗೇ ಮಳ್ಳು" ಹೇಳಿ
ಹನಮ ಹೇಳಿದ್ನಡ... "ಅಮ್ಮಾ... ತಾಯಿ... ತಪ್ಪಾತು.... ನೀ ಯಂಗೆ ಅಮ್ಮ ಇದ್ದಾಂಗೇಯ. ನಿಂಗೆ ಬೇಜಾರಾಗತು ಹೇಳಾದರೆ ಯಂಗೆ ಉಪಯೋಗಕ್ಕೆ ಬರದೇ ಇದ್ರೂ ಇಟಗತ್ತೆ. ಆದರೆ ವಂದು ವಿಷಯ ಹೇಳಲ? ನೀನು ರಾಮನ ಹೆಂಡತಿ... ನಿನ್ನತ್ರ ಇಪ್ಪ ಯೆಲ್ಲ ವಸ್ತುನಲ್ಲೂ ರಾಮ ಇರತ ಹೇಳಿ ಮಾಡಕಂಡಿದ್ದೆ....ನಂಬಿಕೆ ಯಂಗೆ. ಅದಕೇ ಯೆಲ್ಲ ಮಣಿನೂ ತಿರಗಿಸಿ ತಿರಗ್ಸಿ ನೋಡದೆ... ಯೆಲ್ಲೂ ರಾಮ ಕಂಡಿದ್ನಿಲ್ಲೆ.... ರಾಮ ಇಲ್ಲದ ವಸ್ತು ಯಂಗೆಂತಕೆ ಹೇಳಿ ವಗದದ್ದೇ ಬಿಟ್ರೆ ನಿಂಗೆ ಬೇಜಾರಾಗಲಿ ಹೇಳಲ್ಲ... ಬೇಜಾರಾಗಡ "
ಸೀತಾಮಾತೆ ತೆಗದ್ ಬಾಯ ತೆಕ್ಕಂಡೇ ಇದ್ದುಬುಡತಡ ವ೦ದು ಕ್ಷಣವಾ. ಅಬಾ .. ಇಂವೆಂತಾ ಭಕ್ತ... ಇವನಂತ ರಾಮ ಭಕ್ತ ಜಗತ್ತಲ್ಲೇ ಇಲ್ಲೆ.... ಮುಂದೆ ಹುಟ್ಟುದೂ ಸುಳ್ಳು ಹೇಳಿ ಅನಿಸಿಹೋತಡ.
ಹೌದಾ...ಅದಕೇ ಹೇಳತ... ರಾಮನ ಭಕ್ತ ಹನುಮಂತ... ಅಂವ ಅವನ ಜೀವನನೇ ರಾಮಂಗೆ ಮೀಸಲಾಗಿಟ್ಟಿದ್ದ ... ಎಲ್ಲೆಲ್ಲೂ ರಾಮ ಇದ್ದ ಹೇಳಿ ಎದೆ ಬಗದು ತೋರಸಿದ್ದ ಹನಮಂತ ಹದಾ...
(ಓಕೆ ಗೂಡ್ ನೈಟ್, ಓಯೀ ಓಯೀ...)

ಕಥೆಗಿಂತ ಮಧ್ಯ ಕೊಟ್ಟಿರ ಕಾಮೆಂಟರಿನೇ ಮಜಾ ಇದ್ದು :D ದಿನಾ ಒಂದೊಂದ್ "ಕೂಸಿನ್ ಕಥೆ" ಬರಿ ನೋಡನ :)
ReplyDelete