"ಕೂಸಿನ ಕಥೆ" ಅಂದಮಾತ್ರಕ್ಕೆ ಅದು ಕೂಸಿನ ಮಲಗಿಸವು ಹೇಳಿ ಹೇಳಿದ ಬಂಡು ಕಥೆ ಅಥವ
ಮಕ್ಕಳ ಕಥೆ ಹೇಳಿ ತಿಳಕಂಬದು ಸಹಜ. ’ಕೂಸು’ ಅಂದರೆ ನನ್ನ ಮಗಳು ಹೇಳಿ ಸಾಮಾನ್ಯದ ಅರ್ಥ ಅಲ್ಲ. ’ಮಗು’ ಎಂಬ ಸಮಷ್ಟಿಯ ಅರ್ಥದಲ್ಲಿ ಹೇಳಿದ್ದು ಇಲ್ಲಿ. ಪ್ರತಿಯೊಬ್ಬ ತಂದೆ ತಾಯಿ ಮಕ್ಕಳ ದೊಡ್ಡ ಮಾಡಕಾರೆ ಇದೊಂದು ಪ್ರಮುಖ ಹಂತ. ಈ ಕಥೆಗಳು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ನಾವು ಪಾಲಕರು ಕೊಡಬಹುದಾದ ವಂದು ಸಣ್ಣ ಕೊಡುಗೆ. ಈ ಕಥೆಯೊಳಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನ ತುಂಬಿ ಆ ಮಗುವಿಗೆ ಉಣ್ಣಿಸಲಕ್ಕು.
ಇನ್ನು ಇವತ್ತಿಗೆ... ಈ ’ನಿಮಿಷ’ಕ್ಕೆ ಪುರಾಣ ಪುರುಷರ ಬಗ್ಗೆ ಒಲವು - ಆಸಕ್ತಿ ಬಂಜು ... ಟಿವಿಯಲ್ಲಿ ಬಪ್ಪ ರಾಮಾಯಣ ಮಹಾಭಾರತ, ಕೃಷ್ಣ - ಹನಮಂತರ ನೋಡುಲೆ ಹಾತವರಿತು ಕೂಸು ಹೇಳಾದರೆ ಅದಕ್ಕೆ ಮೂಲ ಕಾರಣನೇ ಪ್ರತೀ ರಾತ್ರಿ ಆಕಳಿಸ್ತವ ಯಾ ಹೇಳ್ವ ಈ ಕೂಸಿನ ಕಥೆಗಳು.
ಈ ಕಥೆಗಳಲ್ಲಿ ಕೆಲವು ನೀತಿಪಾಠಗಳನ್ನು ಹೇಳುವ ಪ್ರಯತ್ನ ಮಾಡಿದ್ದೆ. ಕಥೆನ ಕೂಸಿಗೆ ಹೇಳಕಾರೆ ಏನೋ ಮನಸ್ಸಲ್ಲಿ ಹೊಳೆದ ಕಥೆ ಕೆಲವಾದರೆ.. ಇನ್ನು ಕೆಲವು ಕರ್ಮ ಧರ್ಮ ಸಂಯೋಗದಿಂದ "ಕವಿ ಸಮ್ಮೇಳನ"ದಲ್ಲಿ ಕಿಮಿಗೆ ತಾಗಿ ಹೋದ (ನಾಟಿದ) ಕಥೆಗಳು ಕೆಲವು. ಆ ಕಥೆಗೇ ಸಲ್ಪ ಬೆಣ್ಣೆ, ಉಪ್ಪು, ಖಾರ (ಮಸಾಲೆ) ಹಚ್ಚಿ ಶಣ್ಣದೊಂದು ಕಥೆಯ ರಾತ್ರಿ ಹಲವು ’ನಿಮಿಷ’ಗಳ ಕಥೆಯಾಗಿ ಹೇಳಕಾಗತು. ಅದು ನಂದೊಂದೇ ಅಲ್ಲ ...ಎಲ್ಲ ಅಪ್ಪ ಅಮ್ಮಂದಿರ ಖರ್ಮ. !!
ಮಕ್ಕಳ ಕಥೆಗಳಲ್ಲಿ ಹಕ್ಕಿ ಹಾರಸೂಲಾಗತಿಲ್ಲೆ.... ಕೋಗಿಲೆ ಕೂಗತಿಲ್ಲೆ. ಅಂದರೆ ಸಾಹಿತ್ಯವಾಗಿ ಇದನ್ನ ನೋಡಿರೆ ಕೇವಲ ಕಥೆಗಳನ್ನಿಸಗು. ಆದರೆ ಈ ಕಥೆಗಳಲ್ಲಿ ನಾವು ಬದುಕಿದ - ಬದುಕುವ .. ನಮ್ಮ ಬದುಕಿನ ಚಿತ್ರಣಗಳ ಕೊಡುವ ಪೂರ್ಣ ಪ್ರಯತ್ನ ಮಾಡಲಕ್ಕು. ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿಪ್ಪ ಹಾಸ್ಯ... ಸೃಷ್ಟಿ ರೂಪ-ಕುರೂಪಗಳೇ ಇಲ್ಲಿ ಸಾಹಿತ್ಯವಪ್ಪದನ್ನ ಒಳಗಣ್ಣಿಂದ ನೋಡಲಕ್ಕು.
ಕಥೆಗಳ ಮಧ್ಯೆ ಮಕ್ಕಳ ಸಂಶಯ ನಿವಾರಣೆನೂ ಮಾಡಕಾಗತು. ಯಾವುದೋ ವಂದು ಅರ್ಥವಾಗದ ಪದ ಬಂದರೆ ಅದಕ್ಕೇ ಹೇಳೇ ಬೇರೊಂದು ಕಥೆಯ ಹೇಳಕಾಗತು. ಇಲ್ಲಿ ನಮಗೆ ತಾಳ್ಮೆ-ಸಹನೆ ಎರಡೂ ಅವಶ್ಯ. ಇಲ್ಲದಿದ್ದರೆ ಕಥಾಭಾಗದ ಮುಂದರಿಕೆಗೆ ಹುಡ್ರು ಅವಕಾಶ ಕೊಡದೇ ನಂಗಳ ಇಡೀ ರಾತ್ರಿ ನಿದ್ದೆಗೆಡಿಸ ಸಂದರ್ಭನೂ ಇರಲಕ್ಕು ಮತೇ. ಎಷ್ಟೋ ಸಲ ಇನ್ನುಮುಂದೆ ಯಾವ ಕಥೆಯಲ್ಲೂ ಹೊಸ ಪದಗಳ ಪ್ರಯೋಗ ಮಾಡೂಲಾಗ ಹೇಳಿ ತೀರ್ಮಾನ ಅಲ್ಲ ಯೋಚನೆ ಮಾಡಿದ್ದು ಇದ್ದು. (ಅಲ್ಲ ತೀರ್ಮಾನನೇ ಮಾಡಿರೂವ ಅಪ್ಪ ಹೋಪ ಕೆಲಸಲ್ಲ ಅದು) !!
ಹುಂ ಇನ್ನು ಕೆಲವು ಸಲ ನಮ್ಮ ಕಥೆಯ ಓಘ ಮತ್ತು ಧ್ವನಿಯ ಏರಿಳಿಕೆಯ ಗಮನಿಸ್ತ ಹುಡ್ರು. ಕೆಲವೊಂದು ಸಲ ಗೊತ್ತಾಗದ್ದೇ ಇದ್ದ ಶಬ್ದಕ್ಕೆ ಪ್ರಶ್ನೆ ವಗದರೂವ ನಮ್ಮ ಧ್ವನಿ ಏರತ ಇದ್ದು ಹೇಳದನ್ನ ಗಮನಿಸಿ ’ಬಯ್ಸಗಂಬದು ಬ್ಯಾಡ’ ಹೇಳಿ ಹೊಂದಕತ್ತ. ಅದು ಹುಡುಗರಲ್ಲಿಪ್ಪ ಆ ಸಮಯದ ಮೂಡನ ಮೇಲಿರತು. ’ತಡೆ ಮಲಯಾಳಕ್ಕೆ ಹೋಪಕಿಂತ ಮೊದಲೇ ಕಿಮಿ ಹರ್ಕಳಡಾ, ಹೇಳತೆ’ ಹೇಳಿರೆ ಕೆಲವೊಂದು ಸಲ ಸುಮ್ಮನಾಗತ. ಅದು ಮೊದಲೇ ಹೇಳದಾಂಗೇ ಅವರ ಮೂಡು ಮತ್ತು ನಾವು ಹೇಳುವ ಕಥೆಯ ಕುತೂಹಲದ ಪ್ರಮಾಣದ ಮೇಲೇ ಅವಲಂಬಿಸಿರತು.
ಕೆಲವೊಂದು ಸಲ ಕಥೆ ಬೋರಿಂಗ್ ಆಗಿದ್ದಾಗ ಹುಡ್ರು ಬೇಗ ಮಲಗಿಬುಡತ. ಹಾಂಗೇಳಿ ಬೋರ್ ಆದರೆ ಬೇಗ ಮಲಗತ ಹೇಳಿ ತಿಳಕಂಡು ಬೋರಿಂಗ್ ಕಥೆನೇ ಹೇಳಿರೆ ಪಡ್ಚ. ಯೆಂತ ಮಾಡಿರೂ ಕಷ್ಟ ಮಕ್ಕಗೆ. ವಂದೊಂದು ಸಲ ಕಥೆ ಕುತೂಹಲಕಾರಿ ಆಗಿದ್ರೂ ಪಾಪ ತ್ರಾಸಾಗಿದ್ದಕ್ಕ ಏನ ....(ಇಡೀ ದಿನ ಗೆಯ್ಯತ್ವಲೀ ಹುಡ್ರು) ವರಗಿಬುಟಿರತ. ಆವಾಗ ಮತ್ತೊಂದು ಕಷ್ಟ ಯೆಂತು ಗೊತ್ತಿದ್ದ?? ನಾಳೆ ಬೆಳಗ್ಗಿಂದನೇ ಶುರುವಾಗತು ವರಾತ. ’ನಿನ್ನೆ ಹೇಳಿದ ಕಥೆಯ ಮತ್ತೊಂದು ಸಲ ಹೇಳು’ ...ಸರಿ ಹೇಳಿ ನಿಂಗವು ಮರದಿನನೂ ಅದೇ ಕಥೆ ಶುರು ಮಾಡಿರೆ...... ಹುಶಾರಾಗಿರವು. ಮುಂಚಿನ ದಿನ ಹೇಳದಾಂಗೇ ಹೇಳವು. ಹನಿ ಹೆಚ್ಚು ಕಮ್ಮಿ ಆತ... ಕೆಟ್ಟಾಂಗೇಯ.. ’ ಹಾಂಗಲ್ಲ ಪಪ್ಪಾ ಹೀಂಗೆ’ ನಮಗೇ ಕಲಿಸ್ತ. ಎಷ್ಟೋ ಸಲಿ ಮನಸಲ್ಲೇ ಅಂದಕಂಡಿದ್ದು ಇದ್ದು... ’ನೀ ಹುಟ್ಟುವ ೩೦ ವರ್ಷ ಮೊದಲೇ ಹುಟ್ಟಿದ್ದೆ ಯಾನು... ಯಂಗೇ ಕಲಿಸ್ತ್ಯ’ ಹೇಳಿ.... ಆದರೆ ಹುಡ್ರ ಎದರಿಗೆ ಧೈರ್ಯ ಬತ್ತಿಲ್ಲೆ... ಅದೂ ರಾತ್ರಪಾಗ!!
ಹುಂ .. ಕಥೆ ಹೇಳಿ ನಿಂಗಕ್ಕೆ ಬೇಜಾರು ಬಂದರೂವ... ಮಗು ಮಲಗತ ಹೇಳಿ ನೋಡೂಲಿಲ್ಲೆ.... ಆ ಪ್ರಯತ್ನನೇ ಯಾವ ಕಾರಣಕ್ಕೂ ಮಾಡೂಲಾಗ. ಮಾಡಿರೆ ಅವರ ವರಕನ ಮುಂದೂಡಿದ (ಪೋಸ್ಟ್ ಪೋನ್) ಹಾಂಗೇಯ. ಮತ್ತೊಂದು ಕಥೆ ಹೇಳುವ ಪ್ರಸಂಗ ಬಂದ್ರೂ ಬಂತು. ಸುಮ್ಮ ಸುಮ್ಮನೇ ಬಿಲಕ್ಕೆ ಕೈ ಹಾಕಿ ಕಚ್ಚಸಗಂಬಲಾಗ ಹೌದ
ಕೊನೆಯದಾಗಿ ಆದರೆ ಮುಖ್ಯವಾಗಿ (ಲಾಸ್ಟ್ ಬಟ್ ನಾಟ್ ಲೀಸ್ಟ್) ’ವ್ಯಥೆ’ ಅಂದ ಮಾತ್ರಕ್ಕೆ ಅದು ನಿಜವಾದ ವ್ಯಥೆ ಹೇಳಿ ತಿಳಕಳವು ಹೇಳಿಲ್ಲೆ. ಇದು ಇಛ್ಚಾ ಪ್ರಾರಬ್ದ ಹೇಳತ್ವಲೀ .. ಹಾಂಗೇಯ. ಕಿವಿಗೆ ಮೂಗಿಗೆ ಚುಚ್ಚಿಸಗಂಡರೆ ನೋವಾಗತು ಹೇಳಿ ಗೊತ್ತಿದ್ದೂ ಚುಚ್ಚಿಸಗಂಡು ಆಗತಿಲ್ಯ? ಅದು ಸುಖಕ್ಕೆ ಬೇಕು ಹೇಳಿ. ಹಾಂಗೇಯ... ಕೂಸು(ಮಗು) ಬೇಕು ಹೇಳಿ ಮಾಡಕಂಡದ್ದು. ಅದಕ್ಕೆ ಕಥೆ ಹೇಳೂ ಖರ್ಮನೂ ವಂತರ ಸುಖ ... ಅನುಭವಿಸಿದಾಗೇ ಗೊತ್ತಾಗವು.
ಈ "ಕೂಸಿನ ಕಥೆಗಳು" ಹೇಳ ಶೀರ್ಷಿಕೆಯ ಯೆಲ್ಲ ಕಥೆಗಳನ್ನೂ ಓದಿ. ಓದಿರೆ ಮಾತ್ರ ಇದೆಲ್ಲ ಅರ್ಥ ಆಗತು... ಹವ್ಯಕ ಭಾಷೆ ಓದುಲೆ ಮೊದ ಮೊದಲು ಕಷ್ಟ ಆದರೂವ ಬರ ಬರತ ಯನ್ನ ಭಾಷೆ ವಗ್ಗತು ಹೇಳಿ ನಂಬಿಕೆ ಇದ್ದು. ಮಜಾ ಬರಲಕ್ಕು ಹೇಳಿ ಆಶೆ. ನೋಡ್ವ.